ಮಂಡ್ಯ:ರಾತ್ರೋರಾತ್ರಿ ಪೆಟ್ರೋಲ್​ ಬಂಕ್​ಗೆ ನುಗ್ಗಿದ ದುಷ್ಕರ್ಮಿಗಳು ಪಂಪ್​ನಿಂದ ಪೆಟ್ರೋಲ್​ ಹೊರಬಿಟ್ಟು, ಸುಮಾರು 10 ಲಕ್ಷ ರೂ. ಮೌಲ್ಯದ ಇಂಧನ ವ್ಯರ್ಥ ಮಾಡುವ ಮೂಲಕ ಅಟ್ಟಹಾಸವನ್ನು ಮೆರೆದಿದ್ದಾರೆ.

ಈ ಘಟನೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿಯ ಇಂಡಿಯನ್ ಪೆಟ್ರೋಲ್​ ಬಂಕ್​ನಲ್ಲಿ ನಡೆದಿದೆ. ಬಂಕ್​ನ ಸಿಬ್ಬಂದಿ, ರಾತ್ರಿ ಊಟಕ್ಕೆ ತೆರಳಿದ ಸಮಯದಲ್ಲಿ ಬಂಕ್​ಗೆ ನುಗ್ಗಿದ ದುಷ್ಕರ್ಮಿಗಳು ಜನರೇಟರ್ ಆನ್ ಮಾಡಿ, ಪೆಟ್ರೋಲ್ ಹಾಗೂ ಡೀಸೆಲ್ ಪಂಪ್​ ಓಪನ್​ ಮಾಡಿ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ರಕ್ತನಾಳಗಳ ಬ್ಲಾಕೇಜ್​ಗೆ ಕಾರಣವಾಗುವ ಆಹಾರಗಳಿವು! ಸೇವಿಸುವುದನ್ನು ಈಗಲೇ ಅವಾಯ್ಡ್​ ಮಾಡಿ…
ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್​ನಲ್ಲಿ ಕಿಡಿಗೇಡಿಗಳು ಈ ಅಟ್ಟಹಾಸ ಮೆರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಪೆಟ್ರೋಲ್ ಬಂಕ್ ಶುರುಮಾಡಿದ್ದರು. ಸುಮಾರು 10 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸೆಲ್​, ರಸ್ತೆಗೆ ಹರಿದು ಹೋಗಿದೆ.

ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗೂ ಎರಡು ಸಾವಿರ ಲೀಟರ್ ಡೀಸೆಲ್ ಸಂಪೂರ್ಣ ನಾಶವಾಗಿದೆ. ಸ್ವಲ್ಪ ಬೆಂಕಿ ಹಚ್ಚಿದರೂ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

ಪುರಸ್ಕೃತರ ಕೈಸೇರದ ಪಂಪ ಪುರಸ್ಕಾರ: ಕನ್ನಡ- ಸಂಸ್ಕೃತಿ ಇಲಾಖೆ ನಿರ್ಲಕ್ಷ್ಯ; ಆರು ತಿಂಗಳು ಕಳೆದರೂ ಸಿಗದ ಗೌರವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
