ಚಿಕ್ಕೋಡಿ:ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್​ಪೋಸ್ಟ್​ನಲ್ಲಿ ಮಳೆ ಸಂಬಂಧಿತ ಅವಘಡ ಸಂಭವಿಸಿದ್ದು, ಸೇನಾ ಸಿಬ್ಬಂದಿ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ಚೆಕ್​ಪೋಸ್ಟ್​ನಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?
ನಿಪ್ಪಾಣಿ ಮೂರಗುಡ ಮಧ್ಯ ಈ ಚೆಕ್​ಪೋಸ್ಟ್ ಇದ್ದು, ಇಂದು ಸುರಿದ ಭಾರಿ ಗಾಳಿಮಳೆಗೆ ಚೆಕ್​ಪೋಸ್ಟ್​ನ ಛಾವಣಿ ಕಿತ್ತು ಹಾರಿ ಸಿಬ್ಬಂದಿ ಮೇಲೆ ಬಿದ್ದಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿ ಹಾಗೂ ತಾಲೂಕು ಆಡಳಿತದ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಗೆಲುವಿಗಾಗಿ ಗ್ಯಾಸ್ ಸಿಲಿಂಡರ್​ ಮೊರೆಹೋದ ಡಿ.ಕೆ.ಶಿವಕುಮಾರ್​; ಮೋದಿ ತಂತ್ರವನ್ನೇ ಅನುಸರಿಸಿದ ಕೆಪಿಸಿಸಿ!
ಗಾಯಾಳುಗಳ ಪೈಕಿ ಒಬ್ಬ ಬೂದಿಹಾಳ ಗ್ರಾಮದ ವಾಟರ್​ಮ್ಯಾನ್ ಮಾರುತಿ ಪಾಟೀಲ ಎಂಬುದು ತಿಳಿದುಬಂದಿದೆ. ಇಬ್ಬರೂ ಗಾಯಾಳುಗಳನ್ನು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 1 =
Remember me
