ಬೆಂಗಳೂರುಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಪರಿದಿಗೆ ಮೈಸೂರಿನ ಮರಿಮಲ್ಲಪ್ಪ ಪಿಯು ಕಾಲೇಜು ಬರುವುದಿಲ್ಲವೆಂದು ದಾರಿತಪ್ಪಿಸಿದ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಕಾರ್ಯದರ್ಶಿಗೆ ನಾಲ್ಕು ಪ್ರಕರಣದಲ್ಲಿ ತಲಾ 25 ಸಾವಿರ ರೂ.ದಂತೆ ಒಂದು ಲಕ್ಷ ರೂ.ಗಳನ್ನು ರಾಜ್ಯ ಮಾಹಿತಿ ಆಯುಕ್ತಾಲಯವು ದಂಡ ವಿಧಿಸಿದೆ.
ಇದೇ ವರ್ಷದ ಜ.29ರಂದು ಮರಿಮಲ್ಲಪ್ಪ ಪಿಯು ಕಾಲೇಜಿನ ಕಾರ್ಯದರ್ಶಿ ಅವರು ಮರಿಮಲ್ಲಪ್ಪ ಕಾಲೇಜು ಆರ್‌ಟಿಐ ಕಾನೂನಿನ ಅಡಿಯಲ್ಲಿ ಬರುವುದಿಲ್ಲವೆಂದು ಲಿಖಿತ ಹೇಳಿಕೆಯನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಉದ್ದೇಶಪೂರ್ವಕವಾಗಿ ಆಯೋಗವನ್ನು ದಾರಿತಪ್ಪಿಸುವಂತಹ ಕೆಲಸವನ್ನು ಮಾಡಿದ್ದಾರೆ.
ಈ ಸಂಬಂಧ ಆಯೋಗವು ಮೇ 30ರಂದು ಪಿಯು ಮಂಡಳಿ ನಿರ್ದೇಶಕಿ ಸಿಂಧು ಬಿ. ರೂಪೇಶ್ ಅವರನ್ನು ಮಾಹಿತಿ ಕೇಳಿದೆ. ಮರಿಮಲ್ಲಪ್ಪ ಕಾಲೇಜು ಆರ್‌ಟಿಐ ಅಡಿ ಬರುತ್ತದೆಯೋ ಇಲ್ಲವೋ ಎಂಬ ಅಂಶವನ್ನು ಪರಿಶೀಲಿಸಿ ವರದಿ ನೀಡುವಂತೆ ಆದೇಶ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕರು ಮೈಸೂರು ಸರ್ಕಾರದ ಅನುದಾನಕ್ಕೆ ಮರಿಮಲ್ಲಪ್ಪ ಕಾಲೇಜು ಒಳಪಟ್ಟಿರುತ್ತದೆ ಎಂದು ದಾಖಲೆ ಸಹಿತ ಆಯೋಗಕ್ಕೆ ವರದಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆಯೋಗವನ್ನು ದಾರಿತಪ್ಪಿಸಿದ ಕಾಲೇಜಿನ ಸಾರ್ವಜನಿಕ ಅಧಿಕಾರಿ ಪಂಚಾಕ್ಷರಿಗೆ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ. ಪ್ರಕರಣದ ಮೇಲ್ಮನವಿದಾರರಾದ ಮಲ್ಲಿಕಾರ್ಜುನಸ್ವಾಮಿ ಎ.ಎಸ್. ಅವರು ಅನುಭವಿಸಿದ ಕಷ್ಟ ಮತ್ತು ಇತರೆ ವೆಚ್ಚಗಳಿಗಾಗಿ ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕಾರ ನಾಲ್ಕು ಪ್ರಕರಣಗಳಲ್ಲಿ ಕ್ರಮವಾಗಿ ತಲಾ 15 ಸಾವಿರ ರೂ.ಗಳ ಮೊತ್ತವನ್ನು ಕೊಡಿಸಲು ಆಯೋಗವು ಆದೇಶಿಸಿದೆ.
ಪ್ರಕರಣದ ಮೇಲ್ಮನವಿ ಪ್ರಾಧಿಕಾರಿಯಾದ ಪಿಯು ಇಲಾಖೆಯ ಮೈಸೂರು ಜಿಲ್ಲಾ ಉಪ ನಿರ್ದೇಶಕ ಮರಿಸ್ವಾಮಿ ಎಂ. ಅವರು ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಆಯೋಗಕ್ಕೆ ದಾರಿತಪ್ಪಿಸುವಂತಹ ವರದಿಯನ್ನು ಸಲ್ಲಿಸಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಸ್ತುಕ್ರಮಕ್ಕೆ ಶೋಕಾಸ್ ನೋಟಿಸ್ ಜಾರಿಮಾಡುವಂತೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಡಾ. ಎಚ್.ಸಿ. ಸತ್ಯನ್ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
