ಬೆಂಗಳೂರು:‘ಹೆಣ್ಣು ಒಂದು ಹೆಜ್ಜೆ ಮುಂದೆ ಇಟ್ಟರೆ ಸಮಾಜ ಒಂದು ಹಂತ ಮೇಲಕ್ಕೇರುತ್ತದೆ. ಎಲ್ಲಾ ಮಹಿಳೆಯರಲ್ಲೂ ಒಂದಿಲ್ಲೊಂದು ಕನಸು ಅಥವಾ ಕಲೆ ಅಡಗಿರುತ್ತದೆ. ಅವುಗಳಿಗೆ ಸರಿಯಾದ ಪೋಷಣೆ ನೀಡುವುದು ಕುಟುಂಬದ ಹೊಣೆ. ಹಾಗೆಯೇ ಅವಕಾಶ ದೊರಕಿಸಿಕೊಡುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಹೆಣ್ಣು ಮಕ್ಕಳು ಆಟದ ಮೈದಾನದಿಂದ ಬೋರ್ಡ್‌ ರೂಮಿನ ವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಹಬ್ಬಿ ಬೆಳೆಯಬೇಕು’ ಎಂದು ‘ಅವಳ ಹೆಜ್ಜೆ’ ಸಂಸ್ಥಾಪಕಿ ಶಾಂತಲಾ ದಾಮ್ಲೆ ಹೇಳಿದರು.
ಮಹಾಲಕ್ಷ್ಮೀ ಲೇಔಟ್‌ನಲ್ಲಿ ‘ಕನ್ನಡತಿ ಉತ್ಸವ-2022’ರ ಅಂಗವಾಗಿ ನಡೆದ ‘ಮಿಸ್‌ ಮಹಾಲಕ್ಷ್ಮೀ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆಗಳಿಗೆ ವಿವೇಕ ಬಣ್ಣ…! 8 ಸಾವಿರ ಕೊಠಡಿಗಳು ಆಗಲಿವೆಯೇ ಕೇಸರಿಮಯ…?
‘ಮಿಸ್‌ ಮಹಾಲಕ್ಷ್ಮೀ’ ಫ್ಯಾಷನ್‌ ಶೋನಲ್ಲಿ 7 ವರ್ಷದಿಂದ 75 ವರ್ಷ ವಯೋಮಾನದವರೆಗಿನ ಮಹಿಳೆಯರು ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು. ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್‌ ಡಿಸೈನಿಂಗ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರೆಕ್ಕಿಂಗ್, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಿದರು.

ಇದರೊಂದಿಗೆ, ‘ಹಳೆ ಬೇರು ಹೊಸ ಚಿಗುರು’ ಶೀರ್ಷಿಕೆಯಡಿ ಹೆಣ್ಣು ಸಂತತಿಯ ಮೂರು ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು ಒಟ್ಟಾಗಿ ರ‍್ಯಾಂಪ್ ವಾಕ್ ಮೇಲೆ ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.
ಎಲೆಕ್ಷನ್‌ಗೆ ಟಿಕೆಟ್ ಸಿಗಲಿಲ್ಲವೆಂದು ಟವರ್ ಏರಿ ಕುಳಿತ ಆಪ್ ನಾಯಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
