ವಿಜಯಪುರ:ಯಾವ ಯಾವುದೋ ಕಾರಣಕ್ಕೆ ಕೊಲೆ ಮಾಡುವುದನ್ನು ಕಂಡಿದ್ದೇವೆ. ಆದರೆ, ಇಲ್ಲಿ ಮಿಸ್ಡ್​​ ಕಾಲ್​ನಿಂದಾಗಿ ಉಂಟಾದ ಜಗಳ ಕೊಲೆಯಲ್ಲಿ ಮುಕ್ತಾಯ ಕಂಡಿದೆ!
ತಾಳಿಕೋಟೆಯ ಮೂಕಿಹಾಳ ರಸ್ತೆ ಹತ್ತಿರದ ಡೋಣಿ ನದಿಗೆ ಹೊಂದಿಕೊಂಡಿರುವ ಪ್ರಕಾಶ ಕುಲಕರ್ಣಿ ಎಂಬುವವರ ಜಮೀನಿನಲ್ಲಿ ಮಾ. 17ರಂದು ಈ ಘಟನೆ ನಡೆದಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆ ಮಾನಗಾಂವ ತಾಲೂಕಿನ ಪಾವಸುಳವಾಡಿ ಗ್ರಾಮದ ಸೋನು ಲಕ್ಷ್ಮಣ ಹೀಲಮ (35) ಎಂಬಾತ ಕೊಲೆಯಾಗಿದ್ದಾನೆ. ಗೋಪಾಲ ಮಾಧು ಜಾಧವ ಆರೋಪಿಯಾಗಿದ್ದು, ಈ ಬಗ್ಗೆ ಆತನ ಪತ್ನಿ ಮೀನಾ ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಡೋಣಿ ಹಳ್ಳದಲ್ಲಿ ಬೆಳೆದ ಜೀನಿ ಕಟ್ಟಿಗೆಗಳನ್ನು ಕಡಿದು ಸುಟ್ಟು ಇದ್ದಿಲು ತಯಾರಿ ಮಾಡಲೆಂದು ಮಹಾರಾಷ್ಟ್ರದಿಂದ ಸೋನು ಕುಟುಂಬ ವಲಸೆ ಬರುವುದು ವಾಡಿಕೆ. ಅದೇ ರೀತಿ ಈ ವರ್ಷ ತಾಳಿಕೋಟೆಯ ಶ್ರೀಕಾಂತ ಮಲ್ಲಪ್ಪ ಬೆಳ್ಳಗಿ ಎಂಬುವರು 20 ಸಾವಿರ ರೂ.ಮುಂಗಡ ನೀಡಿ ಸೋನು ಕುಟುಂಬವನ್ನೆ ಕೆಲಸಕ್ಕೆ ಕರೆತಂದಿದ್ದಾರೆ. ಮೂಕಿಹಾಳ ರಸ್ತೆಯ ಡೋಣಿ ನದಿಗೆ ಹೊಂದಿಕೊಂಡಿರುವ ಪ್ರಕಾಶ ಕುಲಕರ್ಣಿ ಇವರ ಜಮೀನಿನಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಸೋನು ಕುಟುಂಬ ವಾಸವಾಗಿತ್ತು. ಇವರ ಜೊತೆಗೆ ಮಹಾರಾಷ್ಟ್ರದಿಂದ ಕೆಲಸಕ್ಕೆ ಬಂದ ಗೋಪಾಲ ಮಾಧು ಜಾಧವ ಕುಟುಂಬ ಹತ್ತಿರದಲ್ಲಿಯೇ ಬೀಡು ಬಿಟ್ಟಿತ್ತು.
ಮಾ. 17ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದ ಸಮಯದಲ್ಲಿ ಸೋನು ತನ್ನ ಸಂಬಂಧಿಕರಿಗೆ ಕರೆ ಮಾಡುವಾಗ ಆಕಸ್ಮಿಕವಾಗಿ ಕರೆ ಗೋಪಾಲ ಮಾಧು ಜಾಧವಗೆ ಹೋಗಿದೆ. ಈ ವೇಳೆ ಗೋಪಾಲ ತನಗೇಕೆ ಕರೆ ಮಾಡಿದ್ದೆ ಎಂದು ಸೋನು ಜೊತೆಗೆ ಜಗಳ ಮಾಡಿದ್ದಾನೆ. ಸೋನು ತಪ್ಪಾಗಿ ಕರೆ ಬಂದಿದೆ ಎಂದು ಹೇಳಿದರೂ ಕೇಳದೆ ಗೋಪಾಲ ಸೋನುಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಕೂಡಲೇ ಸುತ್ತಲಿನವರೆಲ್ಲ ಸೇರಿ ಸೋನುಗೆ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸೋನು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಹೋಳಿ ಆಡಲು ಹೋದವನಿಗೆ ಶಾಕ್​; ಆಟಕ್ಕೂ ಮುನ್ನ ಪ್ರಾಣ ಕಳೆದುಕೊಂಡ ಬಾಲಕ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
