ಬೆಂಗಳೂರು:ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​​ ಕಾರ್ಯಕ್ರಮ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಚ್ಚಿನ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ರಿಯಾಲಿಟೀ ಶೋವೊಂದು ಇದೀಗ ಒಂದು ಕುಟುಂಬದಲ್ಲಿ ಮುಚ್ಚಲ್ಪಟ್ಟ ಸತ್ಯವನ್ನು ಹೊರಗೆ ಹಾಕಿದೆ.
ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬುವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. 2017ರಲ್ಲಿ ಲಕ್ಷ್ಮಣ್ ಸಾಲದ ವಿಚಾರಕ್ಕೆ ಜಿಗುಪ್ಸೆಗೊಂಡು ಮನೆಯಿಂದ ನಾಪತ್ತೆಯಾಗಿದ್ದ. ಗಂಡನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪತ್ನಿ ಐಜೂರು ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದರು.ಆದರೆ ಆತನ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಬರೊಬ್ಬರಿ ಆರು ವರ್ಷಗಳ ಬಳಿಕ ಇದೀಗ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ.
ಇತ್ತೀಚೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ನೀತು ವನಜಾಕ್ಷಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನಲ್ಲಿ ತೃತೀಯ ಲಿಂಗಿಗಳು ಅವರನ್ನು ಸ್ವಾಗತಕ್ಕೆ ತೆರಳಿ ಸನ್ಮಾನಿಸಿದ್ದರು. ಈ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಹೆಂಡತಿಯ ಕಣ್ಣೀಗೂ ಬಿದ್ದಿದೆ. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಶ್ಮಿಕಾ ಹೆಸರಿನ ರೀಲ್ಸ್ ಪ್ರೊಫೈಲ್ ಪರಿಶೀಲಿಸಿದಾಗ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ. ವಿಳಾಸ ಕೊಡುವುದಾಗಿ ರಶ್ಮಿಕಾ ಹೇಳಿದ್ದಾರೆ. ವಿಳಾಸ ಹುಡುಕುತ್ತಾ ಪೊಲೀಸರು ಹೋಗಿದ್ದಾರೆ.
ಪೊಲೀಸರು ನೀವು ಲಕ್ಷ್ಮಣ್ ಅಲ್ಲವೇ ಎಂದು ಕೇಳಿದಾಗ, ನಾನು ವಿಜಯಲಕ್ಷ್ಮೀ ಎಂದು ಉತ್ತರಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ . ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸುವ ಕಾರಣ ವಿಚಾರಿಸಲು ಬಂದೆವು ಎಂದು ಹೇಳಿ ಪೊಲೀಸರು ವಾಪಸ್​​ ಹೊರಟಿದ್ದಾರೆ. ಪೊಲೀಸರು ವಾಪಾಸ್ ಹೋಗೊ ವೇಳೆ ಲಕ್ಷ್ಮಣ್ ಎಂದು ಕೂಗಿದ್ದಾರೆ. ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ. ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.
2017ರಲ್ಲಿ ರಾಮನಗರ ಬಿಟ್ಟು ಹೋಗಿದ್ದ ಲಕ್ಷ್ಮಣ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ. ನನಗೆ ಸಂಸಾರವೆ ಬೇಡ ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ನನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಿದ್ದಾರೆ.
ವಾರದಲ್ಲಿ 36 ಗಂಟೆ ಉಪವಾಸ ಇರ್ತಾರೆ ಸುಧಾಮೂರ್ತಿ ಅಳಿಯ ಸುನಕ್ !; ಈ ಬಗ್ಗೆ ತಜ್ಞರು ಹೇಳೋದು ಕೇಳಿದ್ರೆ ಅಚ್ಚರಿ ಪಡ್ತೀರಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nineteen =
Remember me
