ಉಡುಪಿ:ಇಲ್ಲೊಬ್ಬ ಯುವಕ ಕಾಡಿಗೆ ಹೋಗಿ ಕಾಣೆಯಾಗಿದ್ದ. ಊರಿನ ಜನ ವಾರವಿಡೀ ಹುಡುಕಾಡಿದರೂ ಈತನ ಪತ್ತೆಯಾಗಿರಲಿಲ್ಲ. ಆದರೆ ಏಳು ದಿನಗಳ ಬಳಿಕ ಅಚ್ಚರಿ ಎಂಬಂತೆ ಈತ ಇದ್ದಕ್ಕಿದ್ದಂತೆ ಮನೆಗೆ ಮರಳಿದ್ದಾನೆ. ಒಂದು ಕಲ್ಲಿಗೆ ಪೂಜೆ ಮಾಡುತ್ತಿದ್ದಂತೆ ಈತ ಮನೆಗೆ ಮರಳಿದ್ದಾನೆ ಎಂದೂ ಹೇಳಲಾಗುತ್ತಿದೆ.
ಇಂಥದ್ದೊಂದು ಘಟನೆ ಕುಂದಾಪುರ ತಾಲೂಕಿನ ಅಮಾವಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿ ತೊಂಬಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಿವೇಕಾನಂದ (28) ಕಾಣೆಯಾಗಿದ್ದ ವ್ಯಕ್ತಿ. ಈತನೊಂದಿಗೆ ಮನೆಯ ಸಾಕುನಾಯಿ ಕೂಡ ನಾಪತ್ತೆ ಆಗಿದ್ದು, ಬಳಿಕ ಅದು ಕೂಡ ಈತನೊಂದಿಗೇ ಮರಳಿದೆ. ಸೆ. 16ರಂದು ನಾಪತ್ತೆಯಾಗಿದ್ದ ಈತ ಶನಿವಾರ ಮಧ್ಯಾಹ್ನ ದಟ್ಟಾರಣ್ಯ ಪ್ರದೇಶದಿಂದ ಮನೆಗೆ ಮರಳಿದ್ದಾನೆ.
ಇದನ್ನೂ ಓದಿ:ಮೀನನ್ನು ತಿಂದ ಈ ಮಹಿಳೆ ಕೈ-ಕಾಲು ಎರಡೂ ಕಳೆದುಕೊಂಡಳು: ಆಗಿದ್ದಾದರೂ ಏನು?
ಇವರ ಮನೆ ಕಾಡಂಚಿನ ಪ್ರದೇಶದಲ್ಲಿದ್ದು, ಈತ ಕಾಡಿನೊಳಕ್ಕೆ ಹೋಗಿದ್ದು ಬಳಿಕ ದಾರಿ ತಪ್ಪಿಹೋಗಿದೆ. ಒಂದು ವಾರದಿಂದ ಊರಿನ ಮಂದಿ ಬಹಳಷ್ಟು ಹುಡುಕಾಡಿದರೂ ಈತ ಹಾಗೂ ಮನೆಯ ಸಾಕುನಾಯಿ ಪತ್ತೆ ಆಗಿರಲಿಲ್ಲ. ಪೊಲೀಸರಿಗೆ ದೂರು ನೀಡಿದ್ದ ಮನೆಯವರು ಬಳಿಕ ದೈವ, ದೇವರು ಎಂದೆಲ್ಲ ಮೊರೆ ಹೋಗುತ್ತಾರೆ. ಕೊನೆಗೆ ಕೊರಗಜ್ಜನ ಸನ್ನಿಧಿಯಲ್ಲಿ ಕೇಳಿದಾಗ ಯುವಕ ಬದುಕಿದ್ದಾನೆ, ವಾಪಸ್ ಬರುತ್ತಾನೆ ಎಂಬ ಭರವಸೆ ಸಿಗುತ್ತದೆ.
ಈ ಮಧ್ಯೆ ಮನೆಯವರು ಜ್ಯೋತಿಷಿಗಳ ಮೊರೆ ಕೂಡ ಹೋಗಿದ್ದು, ಆ ಪೈಕಿ ಒಬ್ಬರು ನೀಡಿದ್ದ ಮಾಹಿತಿಯಂತೆ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯೊಬ್ಬರು ಹೇಳಿದಂತೆ ಮನೆಯವರು ಮಾಡಿದ್ದಾರೆ ಎಂಬ ಮಾಹಿತಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು. ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆಗಾಗ ಕುಳಿತುಕೊಳ್ಳುತ್ತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟವಾಗಿ ಕಾಣುತ್ತಿದೆ, ಆ ದೇವಿಯ ಕೈಯಲ್ಲಿ ಕತ್ತಿ ಇದೆ, ಅವಳೇ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕ ಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ, ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ‌ ಕಟ್ಟಿ ಪ್ರಾರ್ಥಿಸಿ ಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ಎಂದು ಆಕೆ ಹೇಳಿದ್ದಳು ಹಾಗೂ ಮನೆಯವರು ಆ ಕಲ್ಲನ್ನು ಹುಡುಕಿ ಪೂಜೆ ಮಾಡಿ, ದೀಪವಿರಿಸಿ ಬೇಡಿಕೊಂಡರು, ಅದಾದ ಮರುದಿನವೇ ಈತ ಮನೆಗೆ ಮರಳಿದ ಎಂಬ ಸಂಗತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ.
ಕಾಡಿಗೆ ಹೋದವನಿಗೆ ದಾರಿ ತಪ್ಪಿತು, ಎಷ್ಟು ಅಲೆದಾಡಿದರೂ ವಾಪಸ್ ಬರಲು ಗೊತ್ತಾಗಲಿಲ್ಲ. ನಾನು ನಾಯಿ ಒಂದು ವಾರ ಕಾಡಲ್ಲೇ ಹರಿಯುವ ನೀರನ್ನು ಕುಡಿದು ಕಾಲ ಕಳೆದೆವು ಎಂದು ವಿವೇಕಾನಂದ ಮನೆಗೆ ಮರಳಿದ ಬಳಿಕ ಹೇಳಿಕೊಂಡಿದ್ದಾನೆ.
ಇದು ಮಹಿಳೆಯರಿಗೆ ಬಿಜೆಪಿ ಮಾಡಿರುವ ಪರಮ ವಂಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
