ಬೆಂಗಳೂರು:ಎರಡು ವಾರಗಳ ಹಿಂದೆ ನಗರದಲ್ಲಿ ಕಾಣೆಯಾಗಿದ್ದ ಸಹೋದರಿ ರಕ್ಷಬಂಧನದ ದಿನವಾದ ಇಂದೇ ಪತ್ತೆಯಾಗಿದ್ದು, ಸಹೋದರನಿಗೆ ರಾಖಿ ಕಟ್ಟುವ ಮೂಲಕ ಮತ್ತೆ ಮನೆ ಸೇರಿಕೊಂಡಿದ್ದಾಳೆ. ನಾಪತ್ತೆ ಆಗಿದ್ದ ರಿಮಿ ಅಡ್ಡಿ ಕುರಿತು ಆಕೆಯ ಅಣ್ಣ ವಿವೇಕ್ ಅಡ್ಡಿ ಆಗಸ್ಟ್ 6ರಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸ್, ನೂರಾರು ಸಿಸಿಟಿವಿ ಕ್ಲಿಪ್ಪಿಂಗ್ಸ್ ಪರಿಶೀಲಿಸಿ, ನಗರದ ವಿವಿಧೆಡೆ ಹುಡುಕಾಟ ನಡೆಸಿ, ನಾನಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ್ದು, ಇಂದು ರಿಮಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಸಿಕ್ಕ ಬಳಿಕ ಸಹೋದರನನ್ನು ಠಾಣೆಗೆ ಕರೆಸಿ, ಆಕೆಯಿಂದ ರಾಖಿ ಕಟ್ಟಿಸಿ, ಕೇಕ್ ಕತ್ತರಿಸಿ, ರಕ್ಷಾಬಂಧನ ಆಚರಿಸುವ ಮೂಲಕ ಶುಭ ಹಾರೈಸಿ ಇಬ್ಬರನ್ನೂ ಅಮೃತಹಳ್ಳಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಹೆಣ್ಣು ನೋಡುವ ಶಾಸ್ತ್ರಕ್ಕೆಂದು ಹೋದವರು ಹೆಣವಾಗಿ ಹೋದರು; ಸ್ಥಳದಲ್ಲೇ ಸಾವಿಗೀಡಾದ ದಂಪತಿ
ಅಷ್ಟಕ್ಕೂ ಆಕೆ ಕಾಣೆಯಾಗಿದ್ದು ಯಾಕೆ ಎಂಬ ಬಗ್ಗೆ ಪೊಲೀಸರು ನಡೆಸಿದ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ರಿಮಿ ಅಡ್ಡಿ ಪತ್ತೆಯಾದ ಬಳಿಕ ಆಕೆಯನ್ನು ವಿಚಾರಿಸಿದ ಪೊಲೀಸರು, ನಡೆದಿದ್ದನ್ನೆಲ್ಲ ಹೇಳುವಂತೆ ಸೂಚಿಸಿದ್ದರು. ಆಗ ರಿಮಿ ಅಡ್ಡಿ, ರಾಂಚಿ ಮೂಲದವರಾಗಿದ್ದು, ಕನ್ನಡ ಬರುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಆಕೆಗೆ ಬಂಗಾಳಿ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲವಾದ್ದರಿಂದ ತಪ್ಪಿಸಿಕೊಳ್ಳುವಂತಾಗಿತ್ತು ಎಂಬುದು ತಿಳಿದು ಬಂದಿದೆ.
ಕಾಣೆಯಾಗಿದ್ದ ತಂಗಿ ರಕ್ಷಾಬಂಧನದಂದೇ ಪತ್ತೆ; ಪೊಲೀಸ್ ಠಾಣೆಯಲ್ಲೇ ಅವಿಸ್ಮರಣೀಯ ರಕ್ಷಾಬಂಧನ

ಜಲದುರಂತಕ್ಕೆ ಅಪ್ಪ-ಮಗಳ ಸಹಿತ ಒಂದೇ ಕುಟುಂಬದ ಮೂವರು ಬಲಿ; ಒಬ್ಬರನ್ನು ರಕ್ಷಿಸಲೆಂದು ಇಬ್ಬರು ನೀರಿಗೆ ಧುಮುಕಿದ್ದರು..

‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twenty =
Remember me
