ಬೆಂಗಳೂರು:ಸ್ವಂತ ಬಳಕೆಗೆ ಖರೀದಿಸುವ ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ವಾಣಿಜ್ಯ ಬಳಕೆಗೆ ಬಳಸುವುದು ನಿಯಮ ಬಾಹಿರ. ಟ್ಯಾಕ್ಸಿಯಾಗಿ ಸಂಚರಿಸುವ ವೇಳೆ ಅಪಘಾತ ಸಂಭವಿಸಿದರೆ ವಿಮಾ ಮೊತ್ತ ಸಿಗುವುದಿಲ್ಲ. ಆದರೆ, ಕೆಲ ಇನ್ಸುರೆನ್ಸ್ ಏಜೆನ್ಸಿಗಳು ಸುಳ್ಳು ವರದಿ ಕೊಟ್ಟು ವಿಮೆ ಹಣ ಸಿಗುವಂತೆ ಮಾಡುತ್ತಿರುವುದರಿಂದ ರಾಜಾರೋಷವಾಗಿ ಟ್ಯಾಕ್ಸಿಗಳಾಗಿ ಬಾಡಿಗೆಗೆ ಸಂಚರಿಸುತ್ತಿರುವ ಆರೋಪ ಕೇಳಿಬಂದಿದೆ. ಬೆಂಗಳೂರು, ಮೈಸೂರು, ಮಂಗಳೂರಿ ನಂತಹ ನಗರ ಗಳಲ್ಲಿ ರೆಂಟ್ ಎ ಸರ್ವೀಸ್ ಕಂಪನಿಗಳಿಗೆ ವೈಟ್
ಬೋರ್ಡ್ ಕಾರು ಗಳನ್ನು ಅಟ್ಯಾಚ್ ಮಾಡಿ ಓಡಿಸಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಾಲೀಕರೇ ವೈಟ್​ಬೋರ್ಡ್ ವಾಹನಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿಕೊಂಡು ಟ್ಯಾಕ್ಸಿಯಾಗಿ ಓಡಿಸುತ್ತಿದ್ದಾರೆ. ಮಹಾರಾಷ್ಟ್ರದಂತಹ ಗಡಿಭಾಗದಲ್ಲಿ ಒಂದೊಂದು ಜಿಲ್ಲೆಯಲ್ಲಿ ಕನಿಷ್ಠ 200 ವೈಟ್​ಬೋರ್ಡ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುತ್ತಿವೆ.
ವೈಟ್​ಬೋರ್ಡ್ ಟ್ಯಾಕ್ಸಿಯಲ್ಲಿ ಬಾಡಿಗೆಗೆ ಹೋಗಿ ಅಪಘಾತವಾದರೆ ಯಾವ ಪ್ರಯಾಣಿಕನಿಗೂ ವಿಮೆ ಪರಿಹಾರ ಸಿಗುವುದಿಲ್ಲ. ಜತೆಗೆ ವಾಹನ ಡ್ಯಾಮೇಜ್ ಆದರೂ ಪರಿಹಾರ ಪಡೆಯಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೆಲ ವಿಮಾ ಏಜೆನ್ಸಿಗಳು, ಅಪಘಾತವಾದಾಗ ವಾಹನದಲ್ಲಿದ್ದವರೆಲ್ಲ ಕುಟುಂಬ ಸದಸ್ಯರು ಎಂದು ಸುಳ್ಳು ವರದಿ ಕೊಟ್ಟು, ವಿಮಾ ಪರಿಹಾರ ಕ್ಲೇಮ್ ಆಗುವಂತೆ ಮಾಡುತ್ತಾರೆ. ಬಂದ ಹಣದಲ್ಲಿ ಇಂತಿಷ್ಟು ಪಡೆಯುತ್ತಾರೆ. ವಾಮ ಮಾರ್ಗದಲ್ಲಿ ಪರಿಹಾರ ಹಣ ಸಿಗುವುದರಿಂದ ಟ್ಯಾಕ್ಸಿಯಾಗಿ ಬಳಸಲು ಯಾರೂ ಹಿಂಜರಿಯುತ್ತಿಲ್ಲ ಎಂದು ಟ್ಯಾಕ್ಸಿ ಮಾಲೀಕರು ಹೇಳುತ್ತಾರೆ.
ಟ್ಯಾಕ್ಸಿ ಮಾಲೀಕರಿಂದಲೇ ಪತ್ತೆ ಕಾರ್ಯ:ಕಾನೂನು ಪ್ರಕಾರ ತೆರಿಗೆ ಕಟ್ಟಿ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಓಡಿಸುತ್ತಿರುವ ಮಾಲೀಕರಿಗೆ ವೈಟ್​ಬೋಡ್ ಟ್ಯಾಕ್ಸಿಯಿಂದ ಸಮಸ್ಯೆ. ಹೀಗಾಗಿ ಟ್ಯಾಕ್ಸಿ ಮಾಲೀಕರೇ ಖುದ್ದು ವೈಟ್​ಬೋರ್ಡ್​ಗಳನ್ನು ಪತ್ತೆಹಚ್ಚಿ, ಅವುಗಳ ರಿಜಿಸ್ಟ್ರೇಷನ್ ನಂಬರ್ ಸಮೇತ ಸಾರಿಗೆ ಇಲಾಖೆ ಹಾಗೂ ಆಯಾ ಜಿಲ್ಲಾ ಪೊಲೀಸ್ ಎಸ್ಪಿಗಳಿಗೆ ದೂರು ಕೊಟ್ಟಿದ್ದಾರೆ. ಟ್ಯಾಕ್ಸಿ ಡ್ರೖೆವರ್ಸ್ ಆರ್ಗನೈಜೇಷನ್ ಸದಸ್ಯರು, ಈವರೆಗೆ 50ಕ್ಕೂ ಹೆಚ್ಚು ವೈಟ್​ಬೋರ್ಡ್ ಟ್ಯಾಕ್ಸಿಗಳನ್ನು ಹಿಡಿದು, ಆರ್​ಟಿಒ ಅಧಿಕಾರಿಗಳ ಮನವೊಲಿಸಿ, ನಿಯಮದ ಪ್ರಕಾರ ಸರ್ಕಾರಿ ತೆರಿಗೆ ಹಣ ಪಾವತಿಸಿ ಯೆಲ್ಲೋ ಬೋರ್ಡ್​ಗೆ ಬದಲಾಯಿಸಿಕೊಟ್ಟಿದ್ದಾರೆ.
ಕಣ್ಮುಚ್ಚಿ ಕುಳಿತ ಸಾರಿಗೆ ಇಲಾಖೆ:ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿಯೇ ವೈಟ್​ಬೋರ್ಡ್ ಕಾರುಗಳು ಬಾಡಿಗೆಗೆ ದೊರೆಯುತ್ತವೆ ಎಂದು ಪೋಸ್ಟ್​ಗಳನ್ನು ಹಾಕಿ ಜಾಹೀರಾತು ಮಾಡುತ್ತಿದ್ದಾರೆ. ಈ ವಿಚಾರ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.
ವೈಟ್​ಬೋರ್ಡ್ ಟ್ಯಾಕ್ಸಿಗಳ ಓಡಾಟ ದಿನೇದಿನೆ ಹೆಚ್ಚಾಗುತ್ತಿದೆ. ಇದರಿಂದ ತೆರಿಗೆ ಪಾವತಿಸಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಮಾಲೀಕರಿಗೆ ತೊಂದರೆ ಆಗುತ್ತಿದೆ. ವೈಟ್​ಬೋರ್ಡ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಸಾರಿಗೆ ಅಧಿಕಾರಿಗಳು, ಪೊಲೀಸರಿಗೆ ಮನವಿ ಪತ್ರ ನೀಡಲಾಗಿದೆ. ನಮ್ಮ ಸಂಘಟನೆ ಸದಸ್ಯರೇ ವೈಟ್​ಬೋರ್ಡ್ ಟ್ಯಾಕ್ಸಿ ಕಂಡರೆ ಬುದ್ಧಿ ಹೇಳಿ, ಸರ್ಕಾರಿ ಶುಲ್ಕದಲ್ಲೇ ಯೆಲ್ಲೋ ಬೋರ್ಡ್​ಗೆ ಬದಲಾಯಿಸುವ ಕೆಲಸ ಮಾಡಲಾಗುತ್ತದೆ.
|ಮಹಮದ್ ಹುಸೇನ್ಸಹಕಾರ್ಯದರ್ಶಿ, ರಾಜ್ಯ ಟ್ಯಾಕ್ಸಿ ಡ್ರೖೆವರ್ಸ್ ಆರ್ಗನೈಜೇಷನ್
ಅಪರಾಧ ಕೃತ್ಯಗಳಿಗೆ ಬಳಕೆ:ವೈಟ್​ಬೋರ್ಡ್ ಟ್ಯಾಕ್ಸಿಗಳಿಂದ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುವುದರ ಜತೆಗೆ ಅಪರಾಧ ಕೃತ್ಯಗಳಿಗೂ ಬಳಸುವ ಆರೋಪವಿದೆ. ಹೊರಗಿನವರು ಪ್ರಯಾಣದ ಹಿನ್ನೆಲೆಯಲ್ಲಿ ಯೆಲ್ಲೋ ಬೋರ್ಡ್ ವಾಹನಗಳನ್ನು ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರು ಕಡ್ಡಾಯವಾಗಿ ತಪಾಸಣೆ ನಡೆಸುತ್ತಾರೆ. ಆದರೆ, ಖಾಸಗಿ ವಾಹನವಾದ್ದರಿಂದ ವೈಟ್​ಬೋರ್ಡ್ ವಾಹನಗಳ ತಪಾಸಣೆ ಕಡಿಮೆ. ಇದು ಕಾನೂನು ಬಾಹಿರ ಕೃತ್ಯವೆಸಗುವವರಿಗೆ ಅನುಕೂಲವಾಗಿದೆ. ಮಾನವ ಕಳ್ಳಸಾಗಣೆ, ಹವಾಲಾ ಹಣ ಸಾಗಾಟ, ಡ್ರಗ್ಸ್, ಗಾಂಜಾ ಸರಬರಾಜು ಸೇರಿ ಇನ್ನಿತರ ಅಪರಾಧ ಕೃತ್ಯಗಳಿಗೆ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + three =
Remember me
