ಬೆಂಗಳೂರು:ಈ ಮಿತ್ರನ ಹಾಡು ಇನ್ನು ನಿಮ್ಮವೇ ಆಗಲಿವೆ. ಅರ್ಥಾತ್, ಮಿತ್ರ ಹೆಗಡೆ ಎಂಬ ಈ ಯುವ ಪ್ರತಿಭೆಯ ಮ್ಯೂಸಿಕ್ ವಿಡಿಯೋ ಆಲ್ಬಂ ‘ನಿನ್ನನೇ’ ಇದೇ ಗುರುವಾರ ಬಿಡುಗಡೆ ಆಗಲಿದೆ. ಸಿನಿಮಾ, ಸಂಗೀತ ಹೀಗೆ ಹಲವು ಕಲಾಪ್ರಕಾರಗಳಲ್ಲಿ ಹೊಸ ಪ್ರತಿಭೆಗಳು, ಹೊಸತನದಿಂದ ಗಮನಸೆಳೆದಿರುತ್ತಾರೆ. ಅಂತಹ ಹಲವು ಉದಾಹರಣೆಗಳ ಸಾಲಿಗೆ ಸೇರಲು ಈಗ ಯುವ ಸಂಗೀತಗಾರ ಮಿತ್ರ ಹೆಗಡೆ ಸಜ್ಜಾಗಿದ್ದಾರೆ.
ಬಿ.ಕಾಂ ಓದುತ್ತ, ಸಿ.ಎ ಪರೀಕ್ಷೆಗೆ ಸಿದ್ಧತೆ ನಡೆಸುತ್ತಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡು ಹೊಸದೊಂದು ಮ್ಯೂಸಿಕ್ ಆಲ್ಬಂ ಬಿಡುಗಡೆ ಮಾಡುತ್ತಿದ್ದಾರೆ. ಇಂಡೀ ಮ್ಯೂಸಿಕ್ ಮಾದರಿಯ ಹಾಡಿನ ಶೀರ್ಷಿಕೆ ‘ನಿನ್ನನೇ’. ಈ ಆಲ್ಬಂ ಬಗ್ಗೆ ವಿವರಿಸುವ ಮಿತ್ರ ‘ತಂದೆ ಹಿಂದೂಸ್ತಾನಿ ಸಂಗೀತ ಕೇಳುತ್ತಿರುತ್ತಾರೆ. ಅವರಿಂದಲೇ ನನಗೂ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿದ್ದು. ನಂತರ ಪಾಶ್ಚಾತ್ಯ ಸೇರಿ ಹಲವು ಪ್ರಕಾರಗಳನ್ನು ಕೇಳಲು ಶುರು ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಸೋಷಿಯಲ್ ಮೀಡಿಯಾದಲ್ಲಿ ಕವರ್ ಹಾಡುಗಳನ್ನು ಮಾಡುತ್ತಿದ್ದೆ. ಇದು ಮೊದಲ ಒರಿಜಿನಲ್ ಹಾಡು. ಸುಮೇದ್, ಮನೀಷ್, ಹರ್ಷಿತ್, ಆದಿತ್ಯಾ ವಿನೋದ್, ಅಮನ್ ಸ್ವರೂಪ್, ಹೇಮಂತ್ ಆಚಾರ್ ನಮ್ಮ ಟೀಮ್. ಎಲ್ಲರೂ ಸೇರಿ ಈ ಮ್ಯೂಸಿಕ್ ಆಲ್ಬಂ ಮಾಡಿದ್ದೇವೆ, ಇದರ ಸಾಹಿತ್ಯಕ್ಕೆ ತಂದೆ ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ.
ಸಿನಿಮಾ ಸ್ಫೂರ್ತಿ:ಈ ಹಾಡಿನ ಕಾನ್ಸೆಪ್ಟ್‌ಗೆ ‘ದಿ ಲಾಬ್‌ಸ್ಟರ್’ ಸಿನಿಮಾ ಸ್ಫೂರ್ತಿ ಎನ್ನುವ ಮಿತ್ರ, ‘ಹಾಡಿನ ಮೂಲಕ ಒಂದು ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಇಂತಹ ಹಲವು ಹಾಡುಗಳನ್ನು ಮಾಡಿ ಒಂದು ಸರಣಿ ಮಾಡುವ ಆಸೆ ಇದೆ. ಸದ್ಯ 20 ಹಾಡುಗಳ ಟ್ಯೂನ್, ಮೆಲೊಡಿ ರೆಡಿ ಇದೆ’ ಎನ್ನುತ್ತಾರೆ.
ಈ ಹಾಡಿನಲ್ಲಿ ಏನಿದೆ, ಇದು ಯಾವ ಅನುಭವ ಕೊಡಲಿದೆ ಎಂಬ ಕುರಿತು ವಿವರ ನೀಡುವ ಮಿತ್ರ ಹೆಗಡೆ, ‘ನಿನ್ನನೇ’ ಹಾಡು ನಿಮ್ಮ ಹಳೆಯ ನೆನಪುಗಳನ್ನು ಸ್ಮರಿಸುವಂತೆ ಮಾಡುತ್ತದೆ. ಆ ಹಾಡು ನಿಮಗೆ ಯಾರನ್ನೋ ಕಳೆದುಕೊಂಡ ಅನುಭವ ನೀಡುತ್ತದೆ, ಅದು ಎಂದೂ ಆಗದ ಅನುಭವ. ಇಲ್ಲಿ ವಾತ್ಸಲ್ಯ, ಬಾಂಧವ್ಯ, ಪ್ರೀತಿ ಕೂಡ ತುಂಬಿದೆ ಎನ್ನುತ್ತಾರೆ. ಈ ಹಾಡು ಕೇಳುಗರನ್ನು ರಿಫ್ರೆಶ್ ಮಾಡುವುದಷ್ಟೇ ಅಲ್ಲದೆ ಏಕತಾನತೆಯನ್ನು ಮುರಿಯುತ್ತದೆ. ಇಲ್ಲಿ ವಿಶಿಷ್ಟ ರಾಗಗಳ ಸಂಯೋಜನೆ ಇದೆ. ಈ ಹಾಡು ತಂಪಾದ ರಾತ್ರಿಯಲ್ಲಿ ಬೆಚ್ಚಗಿನ ಅಪ್ಪುಗೆಯಂತೆ ಅನಿಸುತ್ತದೆ, ಅಷ್ಟೇ ಅಲ್ಲದೆ ಕಂಗಳನ್ನು ಆರ್ದ್ರಗೊಳಿಸುತ್ತದೆ ಎಂದೂ ಹೇಳಿದ್ದಾರೆ.
ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 15 =
Remember me
