ರಾಮನಗರ:ಬಿಡದಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ಕಾರ್ಖಾನೆಯನ್ನು ಯಾವ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪ ನೌಕರರಿಂದ ಕೇಳಿ ಬಂದ ಬೆನ್ನಲ್ಲೇ ಕಂಪನಿಯು ಪ್ರತಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ನಷ್ಟದ ಹಿನ್ನೆಲೆ ಬಿಡದಿ ಘಟಕವನ್ನು ಮುಚ್ಚಲಾಗಿದೆ. 54 ನೌಕರರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ತಿಳಿಸಿದೆ.
ಬೆಮೆಲ್​ ಹಾಗೂ ಮೆಟ್ರೋಗೆ ಅಗತ್ಯವಾದ ಎಲೆಕ್ಟ್ರಾನಿಕ್​ ವಸ್ತುಗಳನ್ನು ಸರಬರಾಜು ಮಾಡುವ ಕಂಪನಿ ಇದಾಗಿದ್ದು, ನ.5ರಂದು 54 ನೌಕರರ ಖಾತೆಗೂ 4 ಲಕ್ಷ ರೂಪಾಯಿಯನ್ನು ಹಾಕಲಾಗಿದೆ. ಇದನ್ನು ನೋಡಿದ ನೌಕರರು ಕಂಪನಿಯ ಎಚ್​.ಆರ್​. ಅವರನ್ನು ಸಂಪರ್ಕ ಮಾಡಿದ್ದಾರೆ. ಆದರೆ ಎಚ್​ಆರ್​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಸೋಮವಾರ ಎಂದಿನಂತೆ ಕೆಲಸಕ್ಕೆ ನೌಕರರು ಬಂದಿದ್ದರು. ಆದರೆ ಭದ್ರತಾ ಸಿಬ್ಬಂದಿ ಕಾರ್ಮಿಕರನ್ನು ಕಂಪನಿಯ ಒಳ ಪ್ರವೇಶಿಸಲು ಬಿಡಲಿಲ್ಲ. ಈ ವಿಚಾರವಾಗಿ ಕಂಪನಿಯ ಎಚ್​ಆರ್​ ಬಂದು ಕಂಪನಿಯನ್ನು ಕೆಲ ಕಾರಣಗಳಿಂದ ಮುಚ್ಚಲಾಗುತ್ತಿದೆ. ಹಾಗಾಗಿ ನಿಮಗೆ ಕಂಪನಿ ಕಡೆಯಿಂದ ಬರಬೇಕಿದ್ದ ಹಣವನ್ನು ಈಗಾಗಲೇ ಖಾತೆಗಳಿಗೆ ಹಾಕಲಾಗಿದೆ ಎಂದು ತಿಳಿಸಿ ಹೋಗಿದ್ದರು.
ಕಂಪನಿಯವರು ಇದೀಗ ನಮಗೆ ಏಕಾಏಕಿ ಶಾಕ್​ ನೀಡಿದ್ದಾರೆ. ನಾವು ಕಂಪನಿಯನ್ನು ನಂಬಿ ಜೀವನ ನಡೆಸುತ್ತಿದ್ದೆವು. ಇದೀಗ ನಮ್ಮ ಖಾತೆಗೆ ಹಣ ಹಾಕಿ ಕೈತೊಳೆದುಕೊಂಡಿದ್ದಾರೆ. ಕಂಪನಿಯವರು ನಮಗೆ ನಿಖರ ಕಾರಣ ನೀಡಬೇಕು. ಯಾವ ಕಾರಣಕ್ಕೆ ಲಾಕ್​ಔಟ್​ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಬೇಕು ಎಂದು ಯೂನಿಯನ್​ ಅಧ್ಯಕ್ಷ ಹರೀಶ್​ ಸೇರಿದಂತೆ ನೌಕರರು ಆಗ್ರಹಿಸಿದ್ದರು.
‘ವಿದ್ಯುತ್ ಮತ್ತು ವಿದ್ಯುನ್ಮಾನ ಸಾಧನ ವಲಯದಲ್ಲಿನ ಮುಂಚೂಣಿಯ ಸಂಸ್ಥೆ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ ಇಂದು ತನ್ನ ಕರ್ನಾಟಕದ ಬಿಡದಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್ ಮೋಟಾರ್​ಗಳು ಮತ್ತು ವಿವಿವಿಎಫ್ ಇನ್ವರ್ಟರ್​ಗಳ ಉತ್ಪಾದನೆಯನ್ನು ಆರ್ಡರ್​ಗಳ ತೀವ್ರವಾದ ಕುಸಿತದಿಂದಾಗಿ ದುರಾದೃಷ್ಟವಶಾತ್ ಸ್ಥಗಿತಗೊಳಿಸಬೇಕಾಗಿದೆ ಎಂದು ಪ್ರಕಟಿಸಿದೆ. ಇದರ ಕಾರಣದಿಂದಾಗಿ ಟ್ರಾನ್ಸ್​ಪೋರ್ಟ್ ಸಿಸ್ಟಂ ವಿಭಾಗದ ಭಾಗವಾಗಿದ್ದ ಈ ಘಟಕದಲ್ಲಿರುವ 56 ಕಾರ್ಮಿಕರನ್ನು ಉದ್ಯೋಗದಿಂದ ಬಿಡುಗಡೆ ನೀಡಲಾಗಿದೆ. 2022ರ ನವೆಂಬರ್ 5ರಿಂದ ಅನ್ವಯವಾಗುವಂತೆ ಈ ಕ್ರಮ ಅನ್ವಯಿಸುತ್ತದೆ ಮತ್ತು ಸಂಬಂಧಿಸಿದ ಉದ್ಯೋಗಿಗಳಿಗೆ ಸಮಾನ ಹಾಗೂ ಕಾನೂನುಬದ್ಧವಾಗಿ ಪರಿಹಾರ ನೀಡಲಾಗಿದೆ. ಕಂಪನಿಯು ಕಾರ್ಯ ನಿರ್ವಹಣೆಯ ಅಗತ್ಯಗಳಿಗೆ ಕೆಲ ಸಿಬ್ಬಂದಿಯನ್ನು ಉಳಿಸಿಕೊಂಡಿದೆ ಮತ್ತು ಉತ್ಪಾದನಾ ಘಟಕವನ್ನು ಮುಚ್ಚುವ ಯಾವುದೇ ತಕ್ಷಣದ ಯೋಜನೆಗಳಿಲ್ಲ. ಉದ್ಯೋಗಪಡೆಯ ಕಡಿತಗೊಳಿಸುವ ಕ್ರಮವನ್ನು ಹಲವು ಪರ್ಯಾಯಗಳನ್ನು ಪರಿಗಣಿಸಿದ ನಂತರ ಮತ್ತು ಅನ್ವಯಿಸುವ ಕಾನೂನು ಹಾಗೂ ಸಂಬಂಧಿಸಿದ ಎಲ್ಲ ಪಾಲುದಾರರ ಹಿತಾಸಕ್ತಿಗೆ ಅನುಗುಣವಾಗಿ ವಸ್ತುನಿಷ್ಠವಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದೆ.
ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿದೆ ತಾಯಿಯ ಅಸಲಿ ಮುಖವಾಡ

ಸತೀಶ್​ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿ ಪಡೆ: ‘ನಾನು ಸ್ವಾಭಿಮಾನಿ ಹಿಂದು’ ಅಭಿಯಾನ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
