|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಜೆಡಿಎಸ್ ಅಲ್ಪಸಂಖ್ಯಾತ ವಿರೋಧಿ, ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಿಗೆ ಮತ್ತು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂಬ ಅಂಶವನ್ನು ಮುಂದಿನ ಒಂದಷ್ಟು ದಿನ ಒತ್ತಿಹೇಳುವ ಮೂಲಕ ನಾಡಿನ ಮೂಲೆ ಮೂಲೆಗೂ ಸಂದೇಶ ಕಳಿಸಲು ಕಾಂಗ್ರೆಸ್ ಬಯಸಿದೆ. ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ತರುವಾಯ ಇಂತಹದ್ದೊಂದು ಚರ್ಚೆ ಪಕ್ಷದಲ್ಲಿದ್ದು, ಮುಂಬರುವ ರಾಜಕೀಯ ಸಭೆಗಳಲ್ಲಿ ಜೆಡಿಎಸ್ ಗುರಿಯಾಗಿಸಿ ‘ಅಲ್ಪಸಂಖ್ಯಾತ ವಿರೋಧಿ’ ಎಂದು ಬಿಂಬಿಸಲು ಕಾರ್ಯತಂತ್ರ ಸಿದ್ಧವಾಗುತ್ತಿದೆ. ವಿಭಾಗವಾರು ವಿವಿಧ ವಿಷಯ ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದ ರ್ಯಾಲಿ, ಜನಸಂಪರ್ಕ ಸಭೆ ನಡೆಸುವ ಉದ್ದೇಶವಿದ್ದು, ಈ ಸಭೆಗಳಲ್ಲೆಲ್ಲ ರಾಜ್ಯಸಭಾ ಚುನಾವಣೆ ಉದಾಹರಣೆ ಕೊಡಲು ಕೈ ನಾಯಕರು ಬಯಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿರುವ ಜೆಡಿಎಸ್ ತಂತ್ರ ಗುಟ್ಟಾಗೇನು ಉಳಿದಿಲ್ಲ. ಸಿ.ಎಂ.ಇಬ್ರಾಹಿಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದೂ ಇದೇ ಕಾರಣಕ್ಕೆ. ಜತೆಗೆ 25ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದೂ ಆ ಪಕ್ಷದ ನಾಯಕರು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಅರಿತ ಕೈ ನಾಯಕರು ತಿರುಗೇಟು ನೀಡಲು ರಾಜ್ಯಸಭೆ ಚುನಾವಣೆ ಫಲಿತಾಂಶ ಬಳಸಿಕೊಳ್ಳುವವರಿದ್ದಾರೆ. ಅಂದಹಾಗೆ, ಕಾಂಗ್ರೆಸ್​ನಲ್ಲಿ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದ ನಿರ್ಧಾರದ ಬಗೆಗಿನ ಬೇಸರ ತಣ್ಣಗಾಗಿಲ್ಲ. ಪಕ್ಷದ ಪದಾಧಿಕಾರಿಯೊಬ್ಬರೇ ಅನೌಪಚಾರಿಕವಾಗಿ ಮಾತಿಗೆ ಸಿಕ್ಕಾಗ, ಈ ಒಂದು ನಿರ್ಧಾರಕ್ಕೆ ನಮ್ಮ ಆಕ್ಷೇಪ ಇತ್ತು. ಮನ್ಸೂರ್ ಅಲಿಖಾನ್ ಸೋಲು ವಿವಿಧ ಆಯಾಮಗಳಲ್ಲಿ ಪಕ್ಷಕ್ಕೆ ಹಾನಿ ಮಾಡುವ ಅವಕಾಶವೂ ಇದೆ ಎಂದು ವ್ಯಾಖ್ಯಾನಿಸಿದರು. ಜೆಡಿಎಸ್​ನವರು ಸುಮ್ಮನೆ ಕೂರುವ ಜಾಯಾನವಲ್ಲ, ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ತನ್ನದೇ ದಾಟಿಯಲ್ಲಿ ವರಸೆ ತೆಗೆಯಬಹುದು. ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ರಾಜಕೀಯವಾಗಿ ಮುಗಿಸಲು ಹೊರಡುತ್ತಿದೆ ಎಂಬ ಸಂದೇಶವನ್ನು ಖಂಡಿತವಾಗಿ ಹರಿಯಬಿಡುತ್ತದೆ, ಇದು ಪಕ್ಷಕ್ಕೆ ಪೆಟ್ಟುಕೊಡಬಹುದು. ಜತೆಗೆ ಮನ್ಸೂರ್ ಅವರನ್ನು ಉದ್ದೇಶಪೂರ್ವಕವಾಗಿ ಕಣಕ್ಕಿಳಿಸಿ, ಬಲಿಪಶು ಮಾಡಿದರು ಎಂದು ಮುಸ್ಲಿಮರಲ್ಲಿ ಅಭಿಪ್ರಾಯ ಹೋದರೆ ಒಂದಷ್ಟು ಕ್ಷೇತ್ರಗಳಲ್ಲಾದರೂ ಮತ ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಒಳ ಹೊಡೆತ ಬೀಳಬಹುದೆಂದು ವಿವರಣೆ ನೀಡಿದರು.
ಹೆಚ್ಚುವರಿ ಮತ ಯಾರದ್ದು?:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ 69 ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದು ಎರಡು ಮತ ಹೆಚ್ಚುವರಿಯಾಗಿ ಬಂದಿತ್ತು. ಈ ಹೆಚ್ಚುವರಿ ಯಾರದ್ದೆಂಬುದನ್ನು ಕೆಪಿಸಿಸಿ ಅಧ್ಯಕ್ಷರೇ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಕ್ಷದ 69 ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಓರ್ವ ಪಕ್ಷೇತರ ಶಾಸಕ ಹಾಗೂ ಜೆಡಿಎಸ್ ಶಾಸಕರೊಬ್ಬರು ಸೇರಿ ನಮ್ಮ ಪಕ್ಷಕ್ಕೆ 71 ಮತಗಳು ಬಂದಿದೆ ಎಂದು ವಿವರಿಸಿದ್ದಾರೆ. ನಮಗೆ ಆಧಾರಸ್ತಂಭವಾಗಿರುವ ಎಲ್ಲ ಶಾಸಕರಿಗೆ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಬೆಂಬಲಿಸಿ ನಮ್ಮ ಅಭ್ಯರ್ಥಿ ಪರ ಮತ ಹಾಕಿದ ಶ್ರೀನಿವಾಸ ಗೌಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳುವ ಮೂಲಕ ಗುಬ್ಬಿ ಶ್ರೀನಿವಾಸ್ ಮತ ಕಾಂಗ್ರೆಸ್ ಕಡೆ ಬಂದಿಲ್ಲ ಎಂದರು. ಎರಡನೇ ಪ್ರಾಶಸ್ತ್ಯ ಮತಗಳು ಬಿಜೆಪಿಗೆ ಹೋಗಿವೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಬಿಜೆಪಿಗೆ ಮತ ಹಾಕಿರುವುದನ್ನು ಯಾರೂ ನೋಡಿಲ್ಲ. 69 ಮತಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಬೇರೆ ಪಕ್ಷಕ್ಕೆ ಹೆಚ್ಚುವರಿ ಮತಗಳು ಬಂದಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fourteen =
Remember me
