ಹಾಸನ:ಕೆಲವೇ ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್​ ಬ್ಲಾಸ್ಟ್ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಹಾಸನದಲ್ಲಿ ಇದೀಗ ಮಿಕ್ಸರ್​ ಬ್ಲಾಸ್ಟ್​ ಆಗಿದ್ದು ಮಂಗಳೂರಿನ ಪ್ರಕರಣವನ್ನೆ ಊಈ ಘಟನೆ ನೆನಪಿಸುತ್ತಿದೆ.
ಹಾಸನ ಕೆ.ಆರ್​ ಪುರಂನಲ್ಲಿ ಶಶಿ ಎಂಬುವರು ಪಾರ್ಸೆಲ್ ಕೊರಿಯರ್ ಆಫೀಸ್ ನಡೆಸುತ್ತಿದ್ದು ಕಚೇರಿಗೆ ಮಿಕ್ಸರ್​ ಬಂದಿದೆ. ಮಾಮೂಲಿ ವಸ್ತುಗಳು ಬರುತ್ತಿದ್ದಂತೆಯೇ ಇದೂ ಬಂದಿದೆ ಎಂದು ಶಶಿ ಭಾವಿಸಿದ್ದರು. ಆದರೆ ದುರದೃಷ್ಟವಶಾತ್​ ಈ ಮಿಕ್ಸರ್​ ಬ್ಲಾಸ್ಟ್​ ಆಗಿದ್ದು, ಶಶಿ ಅವರಿಗೆ ಗಂಭೀರ ಗಾಯಗಳು ಉಂಟಾಗಿವೆ. ವಿಚಿತ್ರ ಎಂದರೆ ಈ ಮಿಕ್ಸರ್​ಅನ್ನು ಯಾರು ಕಳಿಸಿದ್ದು ಎನ್ನುವುದನ್ನು ಪತ್ತೆ ಹಚ್ಚಲು ಕಳಿಸಿದವರ ವಿಳಾಸವೂ ಇಲ್ಲ. ಯಾರೋ ಬೇಕಂತಲೇ ಅಡ್ರೆಸ್ ಇಲ್ಲದೆ ಈ ಮಿಕ್ಸರ್ ಕಳಿಸಿರುವುದಂತೂ ಸ್ಪಷ್ಟ.
ಮಿಕ್ಸಿ ಬ್ಲಾಸ್ಟ್ ನಿಂದ ಗಾಯಗೊಂಡ ಶಶಿ ಅವರಿಗೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದ ಹಾಸನ ಎಸ್ಪಿ ‌ಹರಿರಾಮ್ ಶಂಕರ್ ಭೇಟಿ ನೀಡಿದ್ದಾರೆ. ‘ಶಶಿ‌ ಔಟ್ ಆಫ್ ಡೇಂಜರ್ ಇದ್ದಾರೆ. ಸಧ್ಯಕ್ಕೆ ಯಾರು ಆತಂಕ ಪಡುವ ವಿಚಾರ ಇಲ್ಲ . ಯಾವ ವಿಳಾಸದಿಂದ ಬಂದಿದೆ. ಏನು ವಿಚಾರ ಅನ್ನುವ ಬಗ್ಗೆ ನಾಳೆ ಮಾಹಿತಿ ನೀಡಲಾಗುವುದು. ಫೊರೆನ್ಸಿಕ್​ ಲ್ಯಾಬ್ ತಜ್ಞರು ಬಂದು ಪರೀಕ್ಷಿಸಿದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಹಾಸನ ಎಸ್ಪಿ‌ ಹರಿರಾಮ್ ಶಂಕರ್‌ ಹೇಳಿದ್ದಾರೆ.
ಈ ಹಿಂದೆ ಶಾರಿಕ್​ನ ಕುಕ್ಕರ್​ ಬ್ಲಾಸ್ಟ್​ ಪ್ರಕರಣದಿಂದಾಗಿ ಮೈಸೂರು ನಗರದಲ್ಲಿ ಬಾಡಿಗೆ ಮನೆಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನು ಬಂದು ಅನೇಕರಿಗೆ ತೊಂದರೆ ಉಂಟಾಗಿತ್ತು. ಇದೀಗ ಈ ಮಿಕ್ಸರ್​ ಬ್ಲಾಸ್ಟ್​ ಪ್ರಕರಣದಿಂದಾಗಿ ಎಷ್ಟು ಕೊರಿಯರ್​ ಆಫೀಸ್​ಗಳಿಗೆ ಹಾಗೂ ಜನರಿಗೆ ಕಷ್ಟಗಳು ಉಂಟಾಗಲಿವೆ ಎನ್ನುವುದು ತನಿಖೆ ನಡೆದ ನಂತರದ ದಿನಗಳಲ್ಲಿ ಗೊತ್ತಾಗಬೇಕಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
