ಬೆಂಗಳೂರು:ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಪುಲಿಕೇಶಿ ನಗರದ ಟ್ಯಾನರಿ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 132ನೇ ಅಂಬೇಡ್ಕರ್ ಜಯಂತಿಯನ್ನು ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಪಾಯ ಹಾಕಿಕೊಟ್ಟ ಮಹನೀಯರು. ಸಮಾನತೆ ಸಮಾಜದ ಕನಸು ಕಂಡಂತಹ ಮಹನೀಯರಾದ ಅವರು ನಮ್ಮ ಭಾರತದ ಹೆಮ್ಮೆಯ ವ್ಯಕ್ತಿತ್ವ. ಸಂವಿಧಾನ ಎಂಬ ಮಹಾನ್ ಅರಿವನ್ನು ನೀಡಿದ ಅಂಬೇಡ್ಕರ್ ಅವರು ಬಹಳ ಕಷ್ಟ-ನೋವುಗಳ ನಡುವೆ ಬದುಕು ಕಟ್ಟಿಕೊಂಡವರು. ಅಸಮಾನತೆ, ಅಸ್ಪøಶ್ಯತೆಯನ್ನು ತೊಲಗಬೇಕೆಂಬ ನಿಟ್ಟಿನಲ್ಲಿ ಹೋರಾಟಗೈದು ಸಮಾನತೆಯ ಶಿಕ್ಷಣಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಡಿಎಂಕೆ ಪ್ರಶ್ನೆಗೆ 4.5 ಲಕ್ಷದ ಕೈ-ಗಡಿಯಾರದ ಬಿಲ್ ಬಿಡುಗಡೆ ಮಾಡಿದ ಅಣ್ಣಾಮಲೈ; ಎದ್ದವು ಇನ್ನಷ್ಟು ಪ್ರಶ್ನೆಗಳು!
ಪ್ರತಿಯೊಬ್ಬರು ಅಂಬೇಡ್ಕರ್ ಅವರ ನಿಲುವು, ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾರತದ ಸತ್ಪ್ರಜೆಯಾಗಲು ಪ್ರಯತ್ನಿಸಬೇಕು. ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅವರು, ತಮ್ಮ ಶಿಕ್ಷಣದ ಮೂಲಕ ಅವರನ್ನು ಕೀಳಾಗಿ ಕಂಡ ಸಮಾಜಕ್ಕೆ ಉತ್ತರ ನೀಡಿದರು. ಭಾರತದ ಅತ್ಯುನ್ನತ ಸ್ಥಾನಕ್ಕೇರಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಬದುಕಿನ ಹೋರಾಟದ ದಿನಗಳು ನಮಗೆಲ್ಲರಿಗೂ ಮಾದರಿಯಾಗಬೇಕು. ನಾವು ಕೂಡ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸೋಣ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿಗೂ ಶುಭಾಶಯ ತಿಳಿಸಿದ ಶಾಸಕನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರು ಕಾರ್ಯಕರ್ತರತ್ತ ಕೈ ಬೀಸಿ ನೆರೆದಿದ್ದವರಿಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು. ಇನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಬರುವ ವೇಳೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರಳಿ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಅವರು ಎದುರು ಬದುರಾದರು. ಆಗ ಅಖಂಡ ಶ್ರೀನಿವಾಸ್ ಅವರು ತಮ್ಮ ಎದುರಾಳಿ ಎಂದು ನೋಡದೆ ಆತ್ಮೀಯತೆ, ಸಹೋದರ ಭಾವದಿಂದ ಅವರನ್ನು ಅಭಿನಂದಿಸಿದರು.
ಕಾಂಗ್ರೆಸ್ ಪಕ್ಷದ ಪುಲಿಕೇಶಿ ನಗರದ ಟಿಕೆಟ್ ಆಕಾಂಕ್ಷಿಯಾಗಿರುವ ಅಖಂಡ ಶ್ರೀನಿವಾಸ್ ಅವರು ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ.
500 ದಿನ ಒಬ್ಬರೇ ಗುಹೆ ಒಳಗೆ ಇದ್ದ ಪರ್ವತಾರೋಹಿ! ಹೊರಗೆ ಬರುತ್ತಲೇ ಹೇಳಿದ್ದೇನು?

ಭಾಷಣ ಮಾಡುತ್ತಿದ್ದ ಸಮೀಪದಲ್ಲೇ ಬಾಂಬ್​ ಸ್ಫೋಟ: ಜಪಾನ್​ ಪ್ರಧಾನಿ ಸ್ಥಳಾಂತರ, ಓರ್ವನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nine =
Remember me
