ಕೊಪ್ಪಳ:ಇತ್ತೀಚೆಗೆ ಸಾರಿಗೆ ಸಿಬ್ಬಂದಿಗೆ ಅಶ್ಲೀಲ ಪದ ಬಳಿಸಿ‌ ಶಾಸಕರೊಬ್ಬರು ನಿಂದಿಸಿದ್ದರು. ಈಗ ಕಡೆಗೂ ಒತ್ತಡಕ್ಕೆ ಮಣಿದು ಈಗ ಸಿಬ್ಬಂದಿ ಬಳಿ ಕ್ಷಮೆ ಯಾಚಿಸಿದ್ದಾರೆ.
ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಭಯ್ಯಾಪೂರ, ಮೊನ್ನೆ ಸಾರಿಗೆ ಸಿಬ್ಬಂದಿಗೆ ಅಶ್ಲೀಲ ಪದ ಬಳಿಸಿ ಬೈದಿದ್ದರು. ಅದಲ್ಲದೇ ಮಹಿಳಾ ಸಿಬ್ಬಂದಿಗೂ ರಾಕ್ಷಸಿ ಎಂದಯ ಬೈದಿದ್ದರು. ಈ ಬಗ್ಗೆ ದುಃಖಿತರಾದ ಸಾರಿಗೆ ಸಿಬ್ಬಂದಿ, ಶಾಸಕ ಭಯ್ಯಾಪೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಕೊನೆಗೂ ಸಾರಿಗೆ ಸಿಬ್ಬಂದಿ ಬಳಿ ಶಾಸಕ ಭಯ್ಯಾಪೂರ ಕ್ಷಮೆ ಕೋರಿದ್ದಾರೆ.
‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ನಾನು ಆ ರೀತಿ ಬೈಯುವುದು ಅನಿವಾರ್ಯವಾಗಿತ್ತು. ಸಾರಿಗೆ ಸಿಬ್ಬಂದಿಗಳು ಕೆಲ ವಿದ್ಯಾರ್ಥಿಗಳನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಅನೇಕ ವಿದ್ಯಾರ್ಥಿಗಳು ಬಸ್ ಹತ್ತುವಾಗ ಬಿದ್ದಿದ್ದಾರೆ. ಈ ಹಿಂದೆ ಮೂರು,ನಾಲ್ಕು ಬಾರಿ ಸಾರಿಗೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದೆ. ಆದರೆ ಸಮಸ್ಯೆ ಮಾತ್ರ ಬಗೆಹರಿದ್ದಿಲ್ಲ. ಈ ಕಾರಣಕ್ಕಾಗಿ ನಾನು ಬೈದಿರಬಹುದು. ನನ್ನ‌ ಮಾತಿನಿಂದ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ಶಾಸಕ ಭಯ್ಯಾಪೂರ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
