ಬಳ್ಳಾರಿ:ಶಾಸಕ ನಾಗೇಂದ್ರಗೆ ಬೆದರಿಕೆ ಹಾಕಲು ಬಂದವರಿಗೆ ಗೂಸಾ ಸಿಕ್ಕಿದೆ.
ಮತ ಏಣಿಕೆ ಕೇಂದ್ರದಿಂದ ನಗರದಲ್ಲಿ ಮೆರವಣಿಗೆ ನಡೆಸಲು ತೆರಲುತ್ತಿರುವಾಗ ಈ ಘಟನೆ ನಡೆದಿದ್ದು ಗೆಲುವಿನ ಶುಭಾಶಯ ಕೋರುವ ನೆಪದಲ್ಲಿ ಕಾರ್ ನಿಲ್ಲಿಸಿ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರಗೆ ನಾಲ್ವರು ಬೆದರಿಕೆ ಹಾಕುವ ಯತ್ನ ಮಾಡಿದ್ದರು. ಶನಿವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರ್ ನಲ್ಲಿ ತೆರಳುತ್ತಿದ್ದ ನಾಗೇಂದ್ರ ಅವರನ್ನ ಶುಭಾಶಯ ಕೊರಲು ನಾಲ್ವರು ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ನಾಗೇಂದ್ರ, ಯುವಕರ ಬಳಿ ಹೊದಾಗ ಬೆದರಿಕೆ ಹಾಕಲು ಈ ನಾಲ್ವರು ಪುಂಡರು ಯತ್ನಿಸಿದ್ದಾರೆ. ಈ ಸಂದರ್ಭ ಈ ನಾಲ್ವರ ಗುಂಪಿನ ಕೆಲವರ ಕೈಯಲ್ಲಿ ಮಾರಕಾಸ್ತ್ರ ಇರುವುದನ್ನ ಗಮನಿಸಿದ ನಾಗೇಂದ್ರ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಈ ನಾಲ್ವರನ್ನು ತಡೆದಿದ್ದಾರೆ.
ಈ ನಾಲ್ವರ ಗುಂಪಿನಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದು, ಅವರನ್ನು ಬಳ್ಳಾರಿಯ ನಿವಾಸಿಗಳಾದ ರಮೇಶ್ ಮತ್ತು ವೆಂಕಟೇಶ್ ಎಂದು ಗುರುತಿಸಲಿದೆ. ಜೀವ ಬೆದರಿಕೆ ಹಾಕಲು ಯತ್ನಿಸಿದ್ದಕ್ಕೆ ಸ್ಥಳದಲ್ಲೇ ಇಬ್ಬರನ್ನು ಹಿಡಿದ ನಾಗೇಂದ್ರ ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬಳಿಕ ಇಬ್ಬರನ್ನ‌ ಪೊಲೀಸರಿಗೆ ಒಪ್ಪಿಸಿ, ಆರೋಪಿಗಳ ವಿರುದ್ಧ ಐಪಿಸಿ 504 ಮತ್ತು 506 ಸೆಕ್ಷನ್ ಅಡಿ ಜೀವ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಕೌಲ್ ಬಜಾರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದೇ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fourteen =
Remember me
