ಕೋಲಾರ:ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿಗಳು ಯಾವ ಮಟ್ಟಕ್ಕೆ ಇಳಿದಿವೆಯೆಂದರೆ ಜನಪ್ರತಿನಿಧಿ ಎನಿಸಿಕೊಂಡವರು ಸಾರ್ವಜನಿಕವಾಗಿ ಆತ್ಮಹತ್ಯೆಯ ಮಾತನ್ನಾಡುವಂಥ ಪ್ರಸಂಗ ನಡೆದಿದೆ. ಕೋಲಾರದಲ್ಲಿ ಸಂಸದ-ಶಾಸಕರ ನಡುವೆ ಇಂಥದ್ದೊಂದು ಸನ್ನಿವೇಶ ನಡೆದಿದೆ.
ಸಂಸದ ಮುನಿಸ್ವಾಮಿ ವಿರುದ್ಧ ಕೋಲಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಈ ಸವಾಲೆಸೆದಿದ್ದಾರೆ. ನಿಮ್ಮಪ್ಪನಿಗೆ ನೀನು ಹುಟ್ಟಿದ್ರೆ ನಾನು ಕೊಲೆ ಮಾಡಿದ್ದೇನೆಂದು ಸಾಬೀತುಪಡಿಸು, ಆಗ ನಾನು ಬಜಾರ್​ನಲ್ಲಿ ನೇಣು ಹಾಕಿಕೊಳ್ಳುವೆ. ಇಲ್ಲ ಎಂದರೆ ನೀನು ಏನು ಮಾಡುತ್ತೀಯ? ಎಂದು ನಾರಾಯಣಸ್ವಾಮಿ ಸವಾಲ್ ಎಸೆದಿದ್ದಾರೆ.
ಇದನ್ನೂ ಓದಿ:ಅನ್ನ-ನೀರು ಇಲ್ಲದೆ ಪರದಾಡಿದ ಚುನಾವಣಾ ನಿಯೋಜಿತ ಸಿಬ್ಬಂದಿ; ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಆ ಮುನಿಸ್ವಾಮಿ ನಾಲಿಗೆಗೆ ಮೆದುಳಿಗೂ ಸಂಪರ್ಕ ಇಲ್ಲ. ಡಿ.ಕೆ.ರವಿ ಹಾಗೂ ತಹಸೀಲ್ದಾರ್ ಚಂದ್ರಮೌಳೇಶ್ವರ ಸಾವಿಗೆ ನಾನು ಹೇಗೆ ಕಾರಣ? ಚಂದ್ರಮೌಳೇಶ್ವರ ನನಗೆ ಪ್ರೀತಿಯ ಶಿಷ್ಯ, ನಾನೇ ಬೇಕು ಎಂದು ಇಲ್ಲಿಗೆ ಹಾಕಿಸಿಕೊಂಡು ಬಂದಿದ್ದು. ಅವರನ್ನು ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿತ್ತಿರುವ ನೀನು ಸಾಬೀತುಪಡಿಸು ಎಂದು ಚಾಲೆಂಜ್ ಹಾಕಿದ್ದಾರೆ.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!
ಗಾಳಿಯಲ್ಲಿ ಬಂದವನು ನೀನು, ಈ ಬಾರಿ ನೀನು ಬೋರ್ಡಿಗೂ ಇರಲ್ಲ. ನಾಲ್ಕು ವರ್ಷಗಳಲ್ಲಿ ನೀನು ಮಾಡಿರುವ ಅಭಿವೃದ್ದಿ ಝೀರೋ. ಬಂಗಾರಪೇಟೆಯಲ್ಲಿ ಸರ್ಕಾರಿ ಗೋಮಾಳ ನುಂಗಿದ್ದಾನೆ ಎಂದು ಆರೋಪ ಮಾಡ್ತಿ. ಎರಡೂ ಕೆರೆಗಳಲ್ಲಿ ಒಂದು ಅಡಿ ಜಾಗ ಒತ್ತುವರಿ ಮಾಡಿದ್ರೆ ಚುನಾವಣೆಗೇ ನಿಲ್ಲುವುದಿಲ್ಲ. ಸಾಯುವ ತನಕ ನಿನ್ನ ಮನೆಯಲ್ಲಿ ಜೀತಕ್ಕಿರುವೆ ಎಂದಿದ್ದಾರೆ.
ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eleven =
Remember me
