ಬೆಂಗಳೂರು:ತಾವು ಪದೇ ಪದೇ ಅಮೆರಿಕಾಗೆ ಭೇಟಿ ನೀಡುವ ಕುರಿತು ಸ್ಪಷ್ಟನೆ ನೀಡಿರುವ ಮಂಡ್ಯದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣಯ್ಯ, ನನಗೆ ಸಮಸ್ಯೆಗಳು ಇರುವ ಕಾರಣದಿಂದ ಪರಿಹಾರ ಮಾಡಿಕೊಳ್ಳಲು ಹೋಗ್ತಿದ್ದಿನಿ ಅಷ್ಟೇ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ:ಡ್ರೋನ್​​ ಪ್ರತಾಪ್​ ಕುರಿತು ಈಶಾನಿ ಹೇಳಿಕೆ; ಸುದೀಪ್​ ಕೊಟ್ಟ ರಿಯಾಕ್ಷನ್​ ಹೀಗಿದೆ
ಶಾಸಕರಾಗಿ ಆಯ್ಕೆಯಾದ ಏಳು ತಿಂಗಳಲ್ಲಿ ನಾಲ್ಕು ಬಾರಿ ಅಮೆರಿಕಾಗೆ ಹೋಗಿದ್ದ ದರ್ಶನ್ ಪುಟ್ಟಣಯ್ಯ, ಪದೇ ಪದೇ ಅಲ್ಲಿಗೆ ಹೋಗಲು ಕಾರಣವೇನು? ಈ ರೀತಿ ಹೋದರೆ ಮುಂದೆ ಹೇಗೆ? ಎಂದು ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ದರ್ಶನ್​, “ನಾನು ಪದೇ ಪದೇ ಅಮೆರಿಕಾಗೆ ಹೋಗ್ತಿರುವುದು ತಪ್ಪು. ನನಗೆ ಸಮಸ್ಯೆಗಳು ಇವೆ, ಅದನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ” ಎಂದು ಹೇಳಿದರು.
“ನನ್ನ ಟೀಮ್ ಇದೆ, ಇಲ್ಲಿ ಜನರ ಕೆಲಸ ಮಾಡ್ತಿದ್ದಾರೆ. ಕ್ಷೇತ್ರದಲ್ಲಿ ಫೋನ್ ಮಾಡಿ ಹೇಳಿದ್ರೆ ಮಾತ್ರ ಯಾವುದಾದರು ಕೆಲಸ ಆಗೋದು. ನಮ್ಮ ಕ್ಷೇತ್ರದಲ್ಲಿ 5ರಿಂದ 10 ಸಾವಿರ ಜನಕ್ಕೆ ಕೆಲಸ ಮಾಡಿಕೊಡಲು ಅಷ್ಟೇ ಸಾಧ್ಯ. ಜನರು ಸಮಸ್ಯೆ ಹೇಳ್ತಾರೆ, ನಾನು ಅಧಿಕಾರಿಗೆ ಹೇಳಿ ಮಾಡಿಸುತ್ತೇನೆ ಅಷ್ಟೇ. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕನ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿ ಬಳಿಗೆ ಹೋಗಬೇಕು‌” ಎಂದರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತೇವೆ.. ಪಾಕ್ ಭಯೋತ್ಪಾದಕ ಸಂಘಟನೆ ಜೈಶ್ ಬೆದರಿಕೆ!
“ಸಿಸ್ಟಮ್ ಬದಲಾವಣೆ ಆಗಬೇಕು. ನಾನು ಈಗಾಗಲೇ ನನ್ನ ಕಂಪನಿಗಳನ್ನು ಮಾರಾಟ ಮಾಡಿದ್ದೇನೆ. ಮೇ 21, 2021ರಲ್ಲಿ ಮಾರಾಟವಾಗಿದೆ, ಬೇಕಾದರೆ ಗೂಗಲ್​ನಲ್ಲಿ ಚೆಕ್ ಮಾಡಿ. ಅದಕ್ಕೂ ನನಗು ಸಂಬಂಧವಿಲ್ಲ. ಮೈಸೂರಿನಲ್ಲೂ ಸಹ ನನ್ನ ಆಫಿಸ್ ಇತ್ತು ಅದರ ಮಾಲೀಕರ ಹೆಸರು ಕೂಡ ಬೇರೆಯೇ ಇದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾನು ಸರಿಪಡಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ನರೆಗಾ ಕಾಮಗಾರಿಯಲ್ಲಿ ಅಕ್ರಮ! 27 ಪಿಡಿಓ ಅಧಿಕಾರಿಗಳು ಸಸ್ಪೆಂಡ್​

ಆ*ತ್ಮಹತ್ಯೆಗೆ ಶರಣಾದ ವೈದ್ಯ ದಂಪತಿ! ಡೆತ್​ ನೋಟ್​ನಲ್ಲಿ ಬಯಲಾಯ್ತು ಶಾಕಿಂಗ್ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
