ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರಾಂತ ಅಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಿಸಲು ಅಡ್ಡಿಯಾಗಿದ್ದ ನಿಯಮಕ್ಕೆ ತಿದ್ದುಪಡಿ ತಂದಿದೆ. ಸಂವಿಧಾನ 371(ಜೆ) ರಚಿತ ನಿಯಮಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಾಂತದ ಯಾವುದಾದರೂ ಒಬ್ಬ ಸಚಿವರನ್ನು ನೇಮಿಸಬೇಕೆಂಬ ನಿಯಮವಿತ್ತು. ಇದೀಗ ಅದಕ್ಕೆ ತಿದ್ದುಪಡಿ ತರಲಾಗಿದ್ದು, ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲು ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ.
ಪ್ರಾಂತಕ್ಕೆ ‘ಕಲ್ಯಾಣ ಕರ್ನಾಟಕ’ವೆಂದು ಮರು ನಾಮಕರಣ ಮಾಡಿದ ಉತ್ಸಾಹದಲ್ಲಿದ್ದ ಸರ್ಕಾರ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರೊಬ್ಬರನ್ನು ನೇಮಿಸಲು ಹೊರಟಿತ್ತು. ಆದರೆ, ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳ ತೀವ್ರ ವಿರೋಧದಿಂದಾಗಿ ಉಪ ಚುನಾವಣೆ ಹೊಸ್ತಿಲಲ್ಲಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡವೆಂದು ಕೈಬಿಟ್ಟಿತ್ತು.
ವಿರೋಧವೇಕೆ?: ಉದ್ಯೋಗ ಭರ್ತಿ, ಬಡ್ತಿ, ಶಿಕ್ಷಣದ ಮೀಸಲು ಜತೆ ಅಗತ್ಯಕ್ಕೆ ತಕ್ಕಂತೆ ಕೈಗೊಂಡ ಪ್ರಮುಖ ನೀತಿ-ನಿರ್ಧಾರ ಪರಾಮರ್ಶೆ, ಅನುಷ್ಠಾನಕ್ಕೆ ಸಚಿವ ಸಂಪುಟದ ಸಮಿತಿಯಲ್ಲಿ ಸದಸ್ಯರಾಗುವುದಕ್ಕೆ ಸಚಿವರಿಗೆ ಮಾತ್ರ ಅವಕಾಶ. ಯೋಜನೆ, ಆರ್ಥಿಕ, ಅಭಿವೃದ್ಧಿಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಬಗ್ಗೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಶ್ರೇಣಿ ಅಧಿಕಾರಿಗಳ ಜತೆ ಚರ್ಚೆ ಹಾಗೂ ಪರಿಣಾಮಕಾರಿ ಅನುಷ್ಠಾನ ಮಾಡಲು ಶಾಸಕರು ಅಧ್ಯಕ್ಷರಾದರೆ ಸಾಧ್ಯವಿಲ್ಲ. ಸಂವಿಧಾನದ 371 (ಜೆ) ಅಡಿ ಲಭ್ಯ ಅವಕಾಶ ಸಮರ್ಪಕ ಬಳಕೆ, ಕಾನೂನು ಅಡೆತಡೆ ನಿವಾರಣೆ ಇತ್ಯಾದಿ ವಿಷಯಗಳಲ್ಲೂ ತೊಡಕಾಗಲಿದೆ. ಜತೆಗೆ ಪ್ರಾಂತಕ್ಕೆ ಸಿಗಬೇಕಾದ ಸಚಿವ ಸ್ಥಾನ ಪ್ರಾತಿನಿಧ್ಯವನ್ನೂ ಕಸಿದುಕೊಂಡಂತಾಗಲಿದೆ.
ಲಾಭಿ ಆರಂಭ:ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಆದರೆ, ಸಚಿವಸ್ಥಾನ ವಂಚಿತ ಕೆ.ಶಿವನಗೌಡ ನಾಯಕ್, ದತ್ತಾತ್ರೇಯ ಪಾಟೀಲ್ ರೇವೂರ್, ಡಾ.ಶಿವರಾಜ್ ಪಾಟೀಲ್, ಪರಣ್ಣ ಮುನವಳ್ಳಿ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದೆನ್ನಲಾಗಿದೆ.
ಶಾಸನಾತ್ಮಕ ಮಂಡಳಿ ಸ್ಥಾನವನ್ನು ಸರ್ಕಾರ ಸಾಮಾನ್ಯ ದರ್ಜೆಗೆ ಇಳಿಸಿದೆ. ಅನುದಾನ, ಅಧಿಕಾರ ಮತ್ತಷ್ಟು ಹೆಚ್ಚಿಸಿ ಬಲಪಡಿಸುವ ಬದಲು ದುರ್ಬಲಗೊಳಿಸಲಾಗಿದೆ.
| ಪ್ರಿಯಾಂಕ್ ಖರ್ಗೆ ಮಾಜಿ ಸಚಿವ
ಅಭಿವೃದ್ಧಿಗೆ ಮಾರಕವಾದ ನಿರ್ಣಯ. ಸಚಿವರೇ ಇದ್ದರೆ ಸಮರ್ಥವಾಗಿ ನಿಭಾಯಿಸಬಹುದಿತ್ತು. ನೇಮಕ, ಬಡ್ತಿ, ಹಾಗೂ ಮೀಸಲು ಸಂಬಂಧಿಸಿದಂತ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಪರಾಮಶಿಸುತ್ತದೆ. ಶಾಸಕರು ಅಧ್ಯಕ್ಷರಾದರೆ ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ಇರಲ್ಲ.
| ಡಾ.ರಜಾಕ್ ಉಸ್ತಾದ್ ಉಪಾಧ್ಯಕ್ಷ, ಹೈಕ ಹೋರಾಟ ಸಮಿತಿ
| ಮೃತ್ಯುಂಜಯ ಕಪಗಲ್ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
