ಬೆಂಗಳೂರು: ಮುಂಬರುವ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರು ಈಗಾಗಲೇ ಆ ರಾಜ್ಯ ಪ್ರವಾಸದಲ್ಲಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ತಯಾರಿ ಹಾಗೂ ತಂತ್ರಗಾರಿಕೆ ನಡೆಸುವ ಸಂಬಂಧ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ಸಭೆ ನಡೆಸಿ ಗಮನ ಸೆಳೆದಿದ್ದಾರೆ.
ಬಿಜೆಪಿ ವತಿಯಿಂದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ತೆಲಂಗಾಣ ಮತ್ತು ಮಿಜೊರಾಂ – ಈ 5 ರಾಜ್ಯಗಳ ಪ್ರತೀ ವಿಧಾನಸಭೆಯನ್ನು ‘ವಿಜಯೀ ವಿಧಾನಸಭೆ’ಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಶಾಸಕರ ಪ್ರವಾಸ ಅಭಿಯಾನವನ್ನು ಆಯೋಜಿದೆ. ಇದರಲ್ಲಿ ಕರ್ನಾಟಕವೂ ಸೇರಿ 18 ರಾಜ್ಯಗಳ 119 ಬಿಜೆಪಿ ಶಾಸಕರುಗಳಿಗೆ ಚುನಾವಣಾ ಜವಾಬ್ದಾರಿ ವಹಿಸಲಾಗಿದೆ. ಕೆ.ಗೋಪಾಲಯ್ಯಗೆ ತೆಲಂಗಾಣದ ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಬಿಜೆಪಿಯ ಮಂಡಲ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ಮೋರ್ಚಾ ಅಧ್ಯಕ್ಷರು, ಬೂತ್ ಕಮಿಟಿ ಪ್ರಮುಖರು ಭಾಗವಹಿಸಿದ್ದು, ಗೋಪಾಲಯ್ಯ ಎಲ್ಲರ ಸಹಕಾರವನ್ನು ಕೋರಿದರು. ಬಿಜೆಪಿ ಗೆಲ್ಲಬೇಕಾದರೆ ಇಲ್ಲಿ ಒಟ್ಟು 157 ಬೂತ್‌ಗಳಿದ್ದು, ಎಲ್ಲ ಬೂತ್‌ಗಳಿಗೂ ಸಮಿತಿಗಳನ್ನು ಮಾಡಬೇಕಾಗಿದೆ. ಶಕ್ತಿಕೇಂದ್ರದ ಪ್ರಮುಖರನ್ನು ನೇಮಿಸಬೇಕಾಗಿದೆ. ಮೋರ್ಚಾದಲ್ಲಿ ಅಧ್ಯಕ್ಷರ ಸಹಿತ ಎಲ್ಲ ಪದಾಧಿಕಾರಿಗಳು ಇಂತಹ ಸಭೆಗೆ ಹಾಜರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಮಲ್ಲೇಶ್ ಯಾದವ್, ಕಾರ್ಪೊರೇಟರ್ ನಾಗೇಶ್ ಪ್ರಶಾಂತ್, ಸ್ಥಳೀಯ ಮುಖಂಡರಾದ ಪ್ರೇಮ್ರಾಜ್ ರಂಜನ್ ಕುಮಾರ್, ನರೇಂದ್ರ ರೆಡಿ,್ಡ ವೈ ಶ್ರೀಧರ್, ಮಹಾಲಿಂಗ ಗೌಡ ಬೀರಪ್ಪ ಹಾಗೂ ಸ್ಥಳೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
