ವಿಜಯಪುರ:ಆರು ಬಾರಿ ವಿಧಾನ ಸಭೆಗೆ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದ ಮಾಜಿ ಸಚಿವ ದಿವಂಗತ ಎಂ.ಸಿ. ಮನಗೂಳಿ ಗೆದ್ದಾಗೊಮ್ಮೆ ಮಂತ್ರಿಯಾಗಿದ್ದರು.
ಜ. 28 ರಂದು ಮಧ್ಯರಾತ್ರಿ ವಿಧಿವಶರಾಗಿರುವ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (84) ಕೊನೆಗೂ ತಮ್ಮ ಕೊನೆಯಾಸೆ ಈಡೇರಿಸಿಕೊಂಡಿದ್ದು ಶಾಸಕರಾಗಿಯೇ ಕೊನೆಯುಸಿರೆಳೆದರು.

2018ರ ವಿಧಾನಸಭೆ‌ ಚುನಾವಣೆಯಲ್ಲಿ ಇದೇ‌ ನನ್ನ ಕೊನೆಯ ಚುನಾವಣೆ ಎಂದಿದ್ದ ಮನಗೂಳಿ ಮುತ್ಯಾ ಕೊನೆಗೂ ಅಧಿಕಾರವಧಿಯಲ್ಲೇ ಕೊನೆಯುಸಿರೆಳೆದರು. ಕಳೆದ ಹದಿನೈದು ದಿನಗಳಿಂದ ಉಸಿರಾಟದ ತೊಂದರೆಯಿಂದಾಗಿ‌ ಶಾಸಕ ಮನಗೂಳಿ ಬಳಲುತ್ತಿದ್ದರು. ಜ.9 ರಂದು ಏರ್ ಲಿಫ್ಟ್ ಮಾಡಲಾಗಿತ್ತು. ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಕೊನೆಗೂ ಚಿಕಿತ್ಸೆ ಫಲಿಸದೇ ವಿಧಿವಶರಾದರು.
1994 ಹಾಗೂ 2018 ರ ವಿಧಾನಸಭೆ ಚುನಾವಣೆಯಲ್ಲಿ ವಿಜೇತರಾದ ಮನಗೂಳಿ ಮುತ್ಯಾ ಗೆದ್ದಾಗೊಮ್ಮೆ ಮಂತ್ರಿ ಪಟ್ಟ ಫಿಕ್ಸ್ ಎನ್ನುತ್ತಿದ್ದರು. ಮೊದಲ ಬಾರಿ ಶಾಸಕರಾದಾಗ ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಎರಡನೇ ಬಾರಿ ತೋಟಗಾರಿಕೆ ಮಂತ್ರಿಯಾಗಿ ಬರದ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ.

ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಭಾಗ್ಯವೂ ಒಲಿದು ಬಂತು. ತೋಟಗಾರಿಕೆ ಇಲಾಖೆ ಸಚಿವರಾಗಿ ಮನಗೂಳಿ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಕೊಡಿಸುವಲ್ಲಿ ಸಫಲರಾಗಿದ್ದರು‌. ಅಲ್ಲದೇ ಸದರಿ ಕಾಲೇಜು ತಮ್ಮ ಕ್ಷೇತ್ರದ ಆಲಮೇಲದಲ್ಲಿಯೇ ಆಗಬೇಕೆಂಬ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು.
ಗುತ್ತಿ‌ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ:ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಾಗಿ ಎಂ.ಸಿ.‌ಮನಗೂಳಿ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಹೋರಾಡದ ಫಲವಾಗಿ ಯೋಜನೆ ಜಾರಿಯಾಗಿತ್ತು. ಮಾಜಿ ಪ್ರಧಾನಿ ದೇವೆಗೌಡರ ಮಾನಸ ಪುತ್ರ ಎಂದೇ‌ ಖ್ಯಾತರಾಗಿದ್ದ ದಿ.ಮನಗೂಳಿ ಗೋಲಗೇರಿಯಲ್ಲಿ ತಮ್ಮ ಹಾಗೂ ದೇವೇಗೌಡರ ಪ್ರತಿಮೆ ಸ್ಥಾಪಿಸಿದ್ದರು. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಸಾಕಾರದ ಫಲವಾಗಿ ಕಂಚಿನ ನಿರ್ಮಿಸಿದ ಕಂಚಿನ ಪುತ್ಥಳಿಗೆ ಈಚೆಗಷ್ಟೇ ಬೆಂಕಿ ಹಚ್ಚಿ ಕೆಲವರು ರಾಜಕೀಯ ಹಗೆತನ ಸಾಧಿಸಲು ಮುಂದಾಗಿದ್ದರು. ಅದಕ್ಕಾಗಿ‌ ಮನಗೂಳಿ ಮುತ್ಯಾ ಬೇಸರ ಸಹ ವ್ಯಕ್ತಪಡಿಸಿದ್ದರು.

ಜೀವ ಇರೋವರೆಗೂ ಜೆಡಿಎಸ್ ತ್ಯಜಿಸಲ್ಲ‌ ಎನ್ನುತ್ತಿದ್ದ ಮನಗೂಳಿ ಮುತ್ಯಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸುದೀರ್ಘಾವಧಿ ಪಕ್ಷ ಮುನ್ನಡೆಸಿದರು. ಶಾಸಕರಾದ ಬಳಿಕ ಆ ಹುದ್ದೆಗೆ ತಾವೇ ಮುಂದೆ ನಿಂತು ಬೇರೆಯವರಿಗೆ ಅವಕಾಶ ಕಲ್ಪಿಸಿದರು. ಜೆಡಿಎಸ್​ಗೆ ಭದ್ರ ಬುನಾದಿ ಹಾಕಿದ್ದಲ್ಲದೇ ಕೊನೇ ಉಸಿರು ಇರುವವರೆಗೂ ಜೆಡಿಎಸ್ ಬಿಡದ ಪಕ್ಷ ನಿಷ್ಠ ಎಂಬ ಹೆಗ್ಗಳಿಕೆ ಹೊತ್ತರು. ಸದ್ಯ ಅವರನ್ನು ಕೆಳೆದುಕೊಂಡು ಜೆಡಿಎಸ್ ಬಡವಾಗಿದ್ದು, ಅವರ ಅಂತಿಮ ದರ್ಶನಕ್ಕಾಗಿ ಸಿಂದಗಿಯ ಅವರದ್ದೇ ಶಿಕ್ಷಣ ಸಂಸ್ಥೆಯಲ್ಲಿ ಸಿದ್ದತೆ ಕಲ್ಪಿಸಲಾಗುತ್ತಿದೆ.

ಸಿಂದಗಿ ಜೆಡಿಎಸ್​ ಶಾಸಕ ಎಂ‌ ಸಿ ಮನಗೂಳಿ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eighteen =
Remember me
