ಮಂಡ್ಯ:ಸರ್ಕಾರದ ಸಚಿವರು ಹಾಗೂ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮದ ವೇದಿಕೆಯೊಂದರ ಮೇಲೆಯೇ ಜಗಳವಾಡಿಕೊಂಡಿದ್ದು, ಕೆಲಕಾಲ ಭಾರಿ ವಾಕ್ಸಮರ ನಡೆಸಿದ ಪ್ರಸಂಗ ಉಂಟಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ.
ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಮತ್ತು ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ಈ ಜಟಾಪಟಿ ನಡೆದಿದೆ. ಕಾರ್ಯಕ್ರಮದ ಸಂದರ್ಭ ತಹಸೀಲ್ದಾರ್ ರೂಪಾ ವಿರುದ್ಧ ಶಾಸಕ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಹಸೀಲ್ದಾರ್​ ಕಂದಾಯ ಅದಾಲತ್ ಮಾಡುತ್ತಿಲ್ಲ ಎಂದು‌ ರೂಪಾ ವಿರುದ್ಧ ಶಾಸಕರು ಆರೋಪ ಮಾಡಿದ್ದಕ್ಕೆ, ತಾವು ಮಾಡಿರುವ ಕೆಲಸಕ್ಕೆ ಸಾಕ್ಷಿ ನೀಡುವುದಾಗಿ ರೂಪಾ ಸ್ಪಷ್ಟನೆ ನೀಡಿದ್ದಾರೆ. ಆಗ ಶಾಸಕ ರವೀಂದ್ರ ಅವರು ತಹಸೀಲ್ದಾರ್ ವಿರುದ್ಧ ಏರುದನಿಯಲ್ಲಿ ಏಕವಚನದಲ್ಲೇ ಮಾತನಾಡಿದ್ದಾರೆ.
ಅದುವರೆಗೂ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದ ಸಚಿವ ನಾರಾಯಣ ಗೌಡ, ಬಳಿಕ ಮಧ್ಯಪ್ರವೇಶಿಸಿ ಶಾಸಕರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಭಾರಿ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಪೊಲೀಸರಿದ್ದರೂ ಮೂಕಪ್ರೇಕ್ಷಕರ ಹಾಗೆ ನೋಡುವಂತಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವ ಅರಿವಾಗಿ ಬಳಿಕ ಶಾಸಕ-ಸಚಿವರು ಸಮಾಧಾನಗೊಂಡರು.

ವಾಟ್ಸ್​ಆ್ಯಪ್​ನಲ್ಲಿದೆ ಸಮಸ್ಯೆ; ಸೈಬರ್ ಸೆಕ್ಯುರಿಟಿ ಏಜೆನ್ಸಿಯಿಂದ ಎಚ್ಚರಿಕೆ

ಇನ್ನೆರಡು ತಿಂಗಳು 10ಕ್ಕಿಂತ ಹೆಚ್ಚು ಜನ ಸೇರದಂತೆ ನಿಷೇಧಿಸಿ; ಕರೊನಾ ನಿಯಂತ್ರಣಕ್ಕೆ ಇದು ಅಗತ್ಯವೆಂದ ಕಾರ್ಯಪಡೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − five =
Remember me
