ಕೊಳ್ಳೆಗಾಲ:ರಾಜ್ಯ ಸರ್ಕಾರದ ವಿರುದ್ಧ ಆರೋಪ ಎಸಗಿರುವ ಕೊಳ್ಳೆಗಾಲ ಮಾಜಿ ಶಾಸಕ ಎನ್​​. ಮಹೇಶ್, ಸುಳ್ಳು ಹೇಳುವುದು ಕಾಂಗ್ರೆಸ್​​ನ ‘ಡಿಎನ್‌ಎ’ಯಲ್ಲಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಜಮೀನು ಗುತ್ತಿಗೆ ನೀಡದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ?
“ಸುಳ್ಳು ಹೇಳುವುದು ಕಾಂಗ್ರೆಸ್​​ನ ಡಿಎನ್‌ಎಯಲ್ಲಿದೆ. 1965 ರಲ್ಲಿ ಕಾಂಗ್ರೆಸ್ ಇಬ್ಬಾಗ‌ವಾಯ್ತು, ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಹಠಾವೋ ದೇಶ್ ಬಚಾವೋ ಎಂದು ಘೋಷಣೆ ಕೂಗಿದ್ದರು. ಅದೇ ವೇಳೆ ಗರೀಬೀ ಹಠಾವೋ ದೇಶ್ ಬಚಾವೋ ಎಂಬ ಮತ್ತೊಂದು ಘೋಷಣೆಯನ್ನು ಕೂಗಿದ್ದರು” ಎಂದು ಹೇಳಿದರು.
“ರಾಜ್ಯದಲ್ಲಿ 4 ಕೋಟಿ 40 ಲಕ್ಷ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಕಾಂಗ್ರೆಸ್ ಕಳೆದ 75 ವರ್ಷದಲ್ಲಿ 65 ವರ್ಷ ಅಧಿಕಾರ ನಡೆಸಿದೆ. ಬಡವರನ್ನು ಬಡವರಾಗಿಡೋದು ಕಾಂಗ್ರೆಸ್​​ನ ನೀತಿ. ಸಿಎಂ ಸಿದ್ದರಾಮಯ್ಯ ರಾಜ್ಯಪಾಲರು ಸುಳ್ಳು ಹೇಳುವಂತೆ ಮಾಡಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ:ಜಮೀನಿಗಾಗಿ ಗಲಾಟೆ; ನಟಿ ಅನಿತಾ ಗೌಡ ಮೇಲೆ ಹಲ್ಲೆ
“5 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. 2013 ರಲ್ಲಿ ಪುಡ್ ಸೆಕ್ಯುರಿಟಿ ಆ್ಯಕ್ಟ್ ಬಂದಾಗ ಅಂದಿನ ಯುಪಿಎ ಸರ್ಕಾರ 13 ರಾಜ್ಯಗಳಿಗೂ ಅಷ್ಟೇ ಪ್ರಮಾಣದಲ್ಲಿ ವಿತರಿಸಿತ್ತು. ನಮ್ಮ ಮೋದಿ ಸರ್ಕಾರ ಕೋವಿಡ್​​ ಸಂಧರ್ಭದಲ್ಲಿ ಎಲ್ಲಾ ರಾಜ್ಯಗಳಿಗೆ ಅಕ್ಕಿ ನೀಡುವಲ್ಲಿ ಯಶಸ್ವಿಯಾಗಿತ್ತು” ಎಂದು ಹೇಳುವ ಮುಖೇನ ರಾಜ್ಯ ಸರ್ಕಾರದ ವಿರುದ್ಧ ಸರಣಿ ಆರೋಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
