ಚಾಮರಾಜನಗರ:ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗೆಗಿನ ಸ್ವಾರಸ್ಯಕರ ಪ್ರಸಂಗವೊಂದನ್ನು ಬಿಚ್ಚಿಡುವ ಮೂಲಕ ಕೊಳ್ಳೇಗಾಲ ಶಾಸಕ ಎನ್. ಮಹೇಶ್​ ಕೆಡಿಪಿ ಸಭೆಯಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ಸೋಮವಾರ ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ನಾನು ಕುಡಿಯುವ ನೀರಿನ ಯೋಜನೆ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹಲವಾರು ಬಾರಿ ಫೋನ್ ಕರೆ ಮಾಡಿದೆ. ಆದರೆ, ಅವರು ಸ್ವೀಕರಿಸಲಿಲ್ಲ. ಬಳಿಕ ಒಂದೇ ಒಂದು ಮೆಸೇಜ್ ಮಾಡಿದ ಬೆನ್ನಲ್ಲೇ ಅವರಾಗಿಯೇ ನನಗೆ ಫೋನ್ ಮಾಡಿದರು ಎಂದರು.
ಇದನ್ನೂ ಓದಿರಿ:ನಿನ್ನ ಆರೋಗ್ಯ ಸರಿಯಿಲ್ಲ…ನಾನು 2ನೇ ಮದುವೆಯಾಗ್ತೀನಿ ಎಂದ ಎರಡು ಮಕ್ಕಳ ತಂದೆಯ ಗತಿ ಏನಾಯ್ತು?
ಅಂದಹಾಗೆ ಶಾಸಕರು ಮಾಡಿದ ಆ ಮಸೇಜ್​ ಯಾವುದೆಂದರೆ, “ನಾನು ಕೊಳ್ಳೇಗಾಲ ಎಂಎಲ್ಎ ಎನ್. ಮಹೇಶ್, ಸಾರಾ ಮಹೇಶ್ ಅಲ್ಲ ಎಂದು ಮೆಸೇಜ್ ಮಾಡಿದರಂತೆ. ಆ ಬಳಿಕವಷ್ಟೇ ರೋಹಿಣಿ ಅವರು ತಾನಾಗಿಯೇ ಪೋನ್ ಮಾಡಿದ್ರು ಎಂದು ಶಾಸಕರು ಮಾತು ಹೇಳ್ತಿದ್ದಂತೆ ಕೆಡಿಪಿ ಸಭೆ ನಗೆಗಡಲಲ್ಲಿ ತೇಲಿತು.
ಇನ್ನು ಸಾರಾ ಮಹೇಶ್​ ಮತ್ತು ರೋಹಿಣಿ ಸಿಂಧೂರಿ ನಡುವೆ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಅವರು ನೇಮಕವಾಗುತ್ತಿದ್ದಂತೆ ಮೊದಲು ಅದರ ವಿರುದ್ಧ ಧ್ವನಿಯೆತ್ತಿದ್ದೇ ಸಾರಾ ಮಹೇಶ್​. ಅಲ್ಲದೆ, ಸಭೆಗಳಲ್ಲಿಯೂ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎನ್​ ಮಹೇಶ್​ ನಗೆ ಚಟಾಕಿ ಹಾರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೊಟ್ಟೆಯಲ್ಲಿ ತಿಂಗಳು ತುಂಬಿದ ಮಗುವಿದ್ದರೂ ಕೋಟಿ ಕೋಟಿ ದುಡಿಯುತ್ತಾರೆ ಸೆಲೆಬ್ರಿಟಿಗಳು! ಅದು ಹೇಗೆ ಗೊತ್ತಾ?

ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

PHOTO GALLERY| ವರುಣ್​ ಧವನ್​ ಮತ್ತು ನತಾಶಾ ಮದುವೆಯ ಸುಂದರ ಕ್ಷಣಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + ten =
Remember me
