ಬೆಂಗಳೂರು:ಥಿಯೇಟರ್ ಬಂದ್ ಹೈ, ಪಿಚ್ಚರ್ ಕೈಸೆ ಚಾಲೂ ಹೋತಾ ಹೈ ಎಂದು ಸಚಿವ ಆನಂದ್ ಸಿಂಗ್ ಕಾಲೆಳೆದಿರುವುದಾಗಿ ಶಾಸಕ ರಾಜೂ ಗೌಡ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆನಂದ್ ಸಿಂಗ್ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿರುವುದನ್ನು ನಾನು ನೋಡಿದೆ. ಅವರಿಗೆ ಫೋನ್​ ಮಾಡಿ, ಪಿಚ್ಚರ್ ಅಭಿ ಬಾಕಿ ಹೈ ಎಂದು ಹೇಳಿದ್ದೀರಿ. ಆದರೆ ಕರೊನಾದಿಂದ ಥಿಯೇಟರ್ ಎಲ್ಲ ಬಂದ್ ಆಗಿವೆ ಎಂದು ಅವರಿಗೆ ತಮಾಷೆ ಮಾಡಿದೆ” ಎಂದರು.
ಆನಂದ್ ಸಿಂಗ್ ಸಮಾಧಾನವಾಗಿಯೇ ಇದ್ದಾರೆ. ಅವರು ಕ್ಷೇತ್ರದಲ್ಲಿಯೇ ಇದ್ದಾರೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಾಧಾನ ಇದ್ದದ್ದು ನಿಜ. ಆದರೆ, ನಾವೆಲ್ಲ ಸ್ನೇಹಿತರು ಅವರ ಜೊತೆ ಮಾತಾಡಿದ್ದೇವೆ. ಈಗ ಸಮಾಧಾನವಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಧ್ವಜಾರೋಹಣ ಕೂಡ ಮಾಡಿದ್ದಾರೆ. ಉಪರಾಷ್ಟ್ರಪತಿ ಬಂದಾಗ ಕೂಡ ಭೇಟಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಹೇಳಿದ್ದೇವೆ. ಆ ಬಗ್ಗೆ ಹೈಕಮಾಂಡ್ ಬದಲಾಗಿ, ಮುಖ್ಯಮಂತ್ರಿಗಳ ಬಳಿಯೇ ಚರ್ಚಿಸಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದಾರೆ ಎಂದು ರಾಜೂ ಗೌಡ ತಿಳಿಸಿದರು.
ಇದನ್ನೂ ಓದಿ:ತಾಯ್ನಾಡಿಗೆ ಹೊರಟ ಭಾರತೀಯರನ್ನು ವಿಚಾರಣೆಗೆ ಕರೆದೊಯ್ದ ತಾಲಿಬಾನ್​!
ವಿಕಾಸಸೌಧದ ಕಚೇರಿಯಲ್ಲಿ ಆನಂದ್ ಸಿಂಗ್ ಬೋರ್ಡ್ ಹಾಕಿರುವ ಕುರಿತ ಪ್ರಶ್ನೆಗೆ, ಸಚಿವರಾದ ಮೇಲೆ ನಾಮಫಲಕ ಹಾಕುವುದು ಸರ್ಕಾರದ ಕೆಲಸ. ಅವರು ಆ ಕೆಲಸ ಮಾಡಿದ್ದಾರೆ ಎಂದು ರಾಜೂಗೌಡ ಪ್ರತಿಕ್ರಿಯಿಸಿದರು.
ಸೋಮವಾರದಿಂದ ಶಾಲೆ ಆರಂಭ: ಕೆಲವು ಶಾಲೆಗಳಿಗೆ ಸಿಎಂ ಭೇಟಿ!

VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!

ವರ್ಲ್ಡ್​​ ಅಥ್ಲೆಟಿಕ್ಸ್​​ನಲ್ಲಿ ಭಾರತಕ್ಕೆ ಎರಡನೇ ಪದಕ: ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಅಮಿತ್​​ ಕುಮಾರ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × 5 =
Remember me
