ದಾವಣಗೆರೆ:ನಿಮಗೆ ತಾಕತ್ತಿದ್ದರೆ ಬಜರಂಗದಳ, ವಿಶ್ವ ಹಿಂದು ಪರಿಷತ್ ಸಂಘ ಪರಿವಾರವನ್ನು ಮುಟ್ಟಿ ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರಿಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ಸಂಘಟನೆಗಳನ್ನು ಮುಟ್ಟಿ, ಆಮೇಲೆ ನಿಮ್ಮ ಕತೆ ಏನಾಗುತ್ತದೆ ನೋಡಿ.ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿವಾದಾತ್ಮಕ ಹೇಳಿಕೆ ಗೌರವ, ಶೋಭೆ ತರುವಂತದಲ್ಲ. ವೋಟು ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ
ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಹಿಂದು ಪರ ಸಂಘಟನೆ ಕಟ್ಟಲು ಆಗುವುದಿಲ್ಲ. ಇದು ಹಿಂದು ದೇಶ. ಹಿಂದು ದೇಶದಲ್ಲಿ ನಾವಿದ್ದೇವೆ. ನಾವೇನು ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹೊಡೆದು ಓಡಿಸುತ್ತಿದ್ದೇವಾ? ಪಿಎಫ್ಐ, ಎಸ್​ಡಿಎಫ್​ಐ ಇದೆ. ಅದರ ಬಗ್ಗೆ ನೀವು ಏಕೆ ಚಕಾರ ಎತ್ತಲ್ಲ. ಕೇವಲ ಹಿಂದು ಪರ ಸಂಘಟನೆಗಳ ಮೇಲೆ ಟಾರ್ಗೆಟ್ ಮಾಡುತ್ತೀರಲ್ಲ ನಿಮ್ಮ ಉದ್ದೇಶ ಏನು? ಎಂದು ಡಿಕೆಶಿಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಇಂತಹ ಹೇಳಿಕೆಯಿಂದ ತನ್ನ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ. ಈ ದೇಶದಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ. ರಾಜ್ಯದಲ್ಲೂ ಮುಕ್ತ ಆಗುತ್ತದೆ ಎಂದು ಭವಿಷ್ಯ ನುಡಿದರು.(ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್ ಪ್ರಣಾಳಿಕೆಯನ್ನು ಬೆಂಕಿಯಿಂದ ಸುಟ್ಟು ಆಕ್ರೋಶ ಹೊರಹಾಕಿದ ಕೆ.ಎಸ್.ಈಶ್ವರಪ್ಪ!

ಅಭಿವೃದ್ಧಿ ನೋಡಿ ಮತ ನೀಡಿ, ಕಣ್ಣೀರಿಗಲ್ಲ: ಎಸ್.ಟಿ. ಸೋಮಶೇಖರ್ ಹೇಳಿಕೆ

ಸಪ್ತಗಿರಿಗೌಡ ಪರ ಅಣ್ಣಾಮಲೈ ರೋಡ್ ಶೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
