ಹಾವೇರಿ:ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್​ ಸರ್ಕಾರ ಸಾಕಷ್ಟು ಸರ್ಕಸ್ ಮಾಡಿ ಕೊನೆಗೂ ನೂತನ ಸಚಿವರನ್ನು ಆಯ್ಕೆ ಮಾಡಿ ಖಾತೆ ಹಂಚಿಕೆಯನ್ನೂ ಮುಗಿಸಿದೆ. ಈ ನಡುವೆ ಸಚಿವ ಸ್ಥಾನ ಸಿಗದ ಕುರಿತು ಅಲ್ಲಲ್ಲಿ ಬೇಸರ ವ್ಯಕ್ತವಾಗುತ್ತಿದ್ದು, ಶಾಸಕರೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಶಾಸಕ ರುದ್ರಪ್ಪ ಲಮಾಣಿ ತಮಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರವಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಾವೇರಿಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಜಾರ ಸಮುದಾಯದಿಂದ ಐವರಿಗೆ ಟಿಕೆಟ್ ನೀಡಿದ್ದರು, ಆ ಪೈಕಿ ನಾನು ಮಾತ್ರ ಗೆದ್ದಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಕೊಡಬೇಕು ಅಂತ ತೀರ್ಮಾನಿಸಿದ್ದರು. ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದರು, ಹೀಗಾಗಿ ನಾನು ಆಯ್ಕೆ ಸುಲಭದಲ್ಲಿ ಆಗಲಿದೆ ಅಂತ ಭಾವಿಸಿದ್ದಾಗಿ ಹೇಳಿದರು.
ಇದನ್ನೂ ಓದಿ:ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್
“ತಾಂಡಾ ಬಚಾವೊ, ಬಿಜೆಪಿ ಹಠಾವೊ” ಎಂಬ ಸಂದೇಶದೊಂದಿಗೆ ನಾವು ಚುನಾವಣೆ ಎದುರಿಸಿದ್ದೇವೆ. ಇಡೀ ನಮ್ಮ ಸಮುದಾಯ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗದ್ದಕ್ಕೆ ನಮ್ಮ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ-ಡಿಸಿಎಂ ಕರೆದು ಮಾತಾಡಿದ್ದಾರೆ. ಅಲ್ಲಿಯತನಕ ನಮ್ಮ ಸಮಾಜದವರನ್ನು ಸಮಾಧಾನ ಮಾಡಬೇಕಾಗಿದೆ ಎಂದೂ ಲಮಾಣಿ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣವಾಗಲಿ: ನಟ-ನಿರ್ದೇಶಕ ರಿಷಬ್ ಶೆಟ್ಟಿ
ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಆದರೆ ನಮ್ಮ ಸಮುದಾಯ ಅದಕ್ಕೆ ಒಪ್ಪುವುದಿಲ್ಲ. ಮಂತ್ರಿಸ್ಥಾನ ಸಿಗದಿದ್ದಕ್ಕೆ ನನಗೆ ಬಹಳ ಮುಜುಗರ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಹಾವೇರಿಗೆ ಅನ್ಯಾಯ ಆಗುತ್ತಿರುವುದು ದುರದೃಷ್ಟಕರ, ಇನ್ನೊಬ್ಬರು ಇಲ್ಲಿಗೆ ಉಸ್ತುವಾರಿ ಆಗಿ ಬರುತ್ತಾರೆ ಎಂಬುದು ಬೇಸರದ ಸಂಗತಿ. ಸಚಿವ ಸ್ಥಾನ ಸಿಗದ ಬೇಸರದಿಂದಾಗಿ ನಾನು ಯಾವ ಸಭೆಗೂ ಹೋಗಿಲ್ಲ ಎಂಬುದಾಗಿ ಲಮಾಣಿ ಹೇಳಿಕೊಂಡಿದ್ದು, ಇದಕ್ಕೆಲ್ಲ ಹೈಕಮಾಂಡ್ ಬೇಗ ಇತಿಶ್ರೀ ಹಾಡಬೇಕು ಎಂದೂ ಹೇಳಿದ್ದಾರೆ.
ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಮಕ್ಕಳಿಗೆ ಹೊಸ ಪುಸ್ತಕ ಕೊಡಿ: ಸಿಎಂಗೆ ಸಮಾನ ಮನಸ್ಕರ ಒಕ್ಕೂಟದ ಮನವಿ

ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
