ಬೆಂಗಳೂರು:ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತೆಯರು ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತೆ ಮಾಡಿದ್ದ ವಾಟ್ಸ್​ಆ್ಯಪ್​ ಮೆಸೇಜ್​ ಜಡೆ ಜಗಳಕ್ಕೆ ಕಾರಣವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತೆಯರು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.
ಎಸ್​.ಆರ್​. ವಿಶ್ವನಾಥ್​ ಕುರಿತು ಬಿಜೆಪಿ ಮಹಿಳಾ ಕಾರ್ಯಕರ್ತರ ಮೊಬೈಲ್‌ಗೆ ಕಾಂಗ್ರೆಸ್​ ಕಾರ್ಯಕರ್ತೆ ಭಾಗ್ಯ ಮೆಸೇಜ್​ ಮಾಡಿದ್ದರು. ಅಭಿಮಾನಿಗಳ ಮುಂದೆ ಮಾತ್ರ ವಿಶ್ವನಾಥ್ ಪವರ್, ಆದರೆ, ವಿಶ್ವನಾಥ್​ನಿಂದ ನೊಂದಿರುವ ಭಾಗ್ಯಳ ಮುಂದೆ ಆತನ ಪವರ್ ಆಫ್ ಆಗುತ್ತದೆ. ಪವರ್ ಇಲ್ಲದಿರುವ ವಿಶ್ವನಾಥ್, ಈ ಭೂಮಿ ಮೇಲೆ ಇರುವುದಕ್ಕೆ ನಾನೇ ಕಾರಣ ಎಂದು ಪೋಸ್ಟರ್ ಹಾಕಿ ಭಾಗ್ಯ ಮೆಸೇಜ್​ ಮಾಡಿದ್ದರು.
ಮೆಸೇಜ್ ಹಾಕಿದ ಕೂಡಲೇ ಭಾಗ್ಯ ವಿಳಾಸ ತಿಳಿದುಕೊಂಡು ಅವರ ಮನೆಯ ಬಳಿ ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ. ಅನಿತಾ, ಲಕ್ಷ್ಮೀ, ವೀಣಾ, ಶಕುಂತಲಾ ಅರ್ಚನಾ ಮುಂತಾದ ಬಿಜೆಪಿ ಕಾರ್ಯಕರ್ತೆಯರು ಭಾಗ್ಯಾನ ಮೀಟ್ ಮಾಡಲು ಹೋಗಿದ್ದರು. ಈ ವೇಳೆ ನಮ್ಮ ಶಾಸಕನ ಬಗ್ಗೆ ಯಾಕೆ ಈ ರೀತಿ ಶಬ್ದ ಬಳಸ್ತಿದ್ಯಾ ಎಂದು ಕೇಳಿದ್ದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಲ್ಲದೆ, ಎರಡೂ ಪಕ್ಷದ ಕಾರ್ಯಕರ್ತೆಯರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.
ಸದ್ಯ ಈ ಘಟನೆ ಸಂಬಂಧ ಯಲಹಂಕ ಠಾಣೆಗೆ ದೂರು ನೀಡಿರುವ ಬಿಜೆಪಿ ಕಾರ್ಯಕರ್ತೆಯರು ಭಾಗ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್

ಬಾಲ್ಯಕ್ಕೆ ಸ್ಮಾರ್ಟ್​ಫೋನ್ ಕೊಳ್ಳಿ: ವಿಡಿಯೋ, ಗೇಮಿಂಗ್, ಸೋಷಿಯಲ್ ಮೀಡಿಯಾ ವ್ಯಸನ; ಶೇ.47 ಮಕ್ಕಳಲ್ಲಿ ಗೀಳು

ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × one =
Remember me
