ಬೆಂಗಳೂರು:ಕರೊನಾ ರೋಗಿಗಳ ಬೆಡ್​ ಬ್ಲಾಕಿಂಗ್​ ದಂಧೆ ಬಗ್ಗೆ ವರದಿಗಳು ಹೊರ ಬೀಳುತ್ತಿದ್ದಂತೆಯೇ ಅನೇಕ ರಾಜಕೀಯ ನಾಯಕರು ಕಿಡಿ ಕಾರಲಾರಂಭಿಸಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ಕೂಡ ಬೇಸರ ಹೊರಹಾಕಿದ್ದಾರೆ.
ನಾನೊಬ್ಬ ಶಾಸಕನಾಗಿ ಬೇಡಿಕೊಂಡರೂ ನನಗೆ ಬೆಡ್​ ಸಿಗುತ್ತಿಲ್ಲ. ಚಾಮರಾಜನಗರದಲ್ಲಿ ಆದ ಪ್ರಕರಣ ನಮ್ಮ ಬೆಂಗಳೂರಿನಲ್ಲಿ ಸಂಭವಿಸಬಾರದು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ವೆಂಟಿಲೇಟರ್​ ಮತ್ತು ಐಸಿಯು ಬೆಡ್​ ಸಿಗಬೇಕು. ಅಮಿತ್​ ಹೆಸರಿನ ವ್ಯಕ್ತಿ ಬೆಡ್​ ಬ್ಲಾಕ್​ ಮಾಡಿಕೊಳ್ತಾನೆ, ಅದಾದ ಮೇಲೆ ಅದೇ ಬೆಡ್​ನ್ನ ಕರೊನಾ ರೋಗಿಯೊಬ್ಬನಿಗೆ 20 ಸಾವಿರ ರೂಪಾಯಿಗೆ ಬಿಟ್ಟುಕೊಡುತ್ತಾನೆ. ಈಗ ಆತ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ನಗರಕ್ಕೆ 780 ವೆಂಟಿಲೇಟರ್​ ಬಂದು ಒಂದೂವರೆ ತಿಂಗಳಾಗಿದೆ. ಆದರೆ ಅಷ್ಟರಲ್ಲಾಗಲೇ ವೆಂಟಿಲೇಟರ್​ ಇಲ್ಲ ಎನ್ನಲಾಗುತ್ತಿದೆ. ವೆಂಟಿಲೇಟರ್​ ಸಿಗದೆ ಜನ ಸಾವಿಗೀಡಾಗುತ್ತಿದ್ದಾರೆ. ಇದಕ್ಕಿಂತ ದೊಡ್ಡ ಅವಾಂತರ ಬೇರೆ ಇಲ್ಲ. ಬೇಕಿರೋರಿಗೆ ಬೆಡ್​ ಕೊಡೋ ದಂಧೆ ನಡೀತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.
ಆರು ವರ್ಷ ಜೈಲಲ್ಲಿದ್ದವ ಈಗ ಗ್ರಾಮದ ಮುಖ್ಯಸ್ಥ! ಜೈಲಿಂದನೇ ನಾಮಪತ್ರ ಸಲ್ಲಿಸಿದ್ದವ ಭಾರೀ ಅಂತರದೊಂದಿಗೆ ಗೆದ್ದ

ಹಾರ ಹಾಕುವ ಮೊದಲು 2ರ ಮಗ್ಗಿ ಹೇಳು ಎಂದ ವಧು! ಸ್ವಲ್ಪ ಹೊತ್ತಲ್ಲಿ ಮದುವೆಯೇ ಕ್ಯಾನ್ಸಲ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
