ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಅವರ ಜತೆ ಊಟಕ್ಕೆ ತೆರಳುತ್ತಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರನ್ನು ಹಿಮ್ಸ್​ ನಿರ್ದೇಶಕರು ತಡೆದ ಘಟನೆ ಜರುಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಶಿವಲಿಂಗೇಗೌಡ , ಬಾಲಕೃಷ್ಣ, ಎಮ್ ಎಲ್ ಸಿ ಗೋಪಾಲಸ್ವಾಮಿ ಪಾಲ್ಗೊಂಡಿದ್ದರು. ನಂತರ ಜನಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಚಿವರ ಜತೆ ಶಾಸಕರು ಊಟಕ್ಕೆ ತೆರಳುತ್ತಿದ್ದರು. ಈ ವೇಳೆ ಹಿಮ್ಸ್​ ನಿರ್ದೇಶಕ ರವಿಕುಮಾರ್​ ಶಿವಲಿಂಗೇಗೌಡರನ್ನು ತಡೆದು ಇಲ್ಲಿ ಸಚಿವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿದೆ. ನಿಮಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿಬೆಳಗಾವಿಯಲ್ಲಿ ಮತ್ತೆ ಧಾರಾಕಾರ ಮಳೆ
ಇದಕ್ಕೆ ಶಿವಲಿಂಗೇಗೌಡ ಆಕ್ರೋಶಗೊಂಡು ನಾವು ಜನಪ್ರತಿನಿಧಿಗಳು. ನಾವೇನು ಊಟಕ್ಕೆ ಗತಿ ಇಲ್ಲದೆ ಇಲ್ಲಿಗೆ ಬಂದಿಲ್ಲ. ನೀನು ಯಾವ ಸೀಮೆ ನಿರ್ದೇಶಕ, ಎಲ್ಲ ಜನಪ್ರತಿನಿಧಿಗಳಿಗೂ ಒಂದೇ ಕಡೆ ಊಟದ ವ್ಯವಸ್ಥೆ ಮಾಡಬೇಕಿತ್ತು ಅಂತ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ನಿರ್ದೇಶಕ ರವಿ ಕುಮಾರ್​ ಕೂಡ ಶಾಸಕರಿಗೆ ಎದುರು ಉತ್ತರ ನೀಡಿದರು. ಕೊನೆಗೆ ಮೂವರು ಶಾಸಕರು ಊಟ ಮಾಡದೆ ಹೊರಗೆ ತೆರಳಿದರು.
https://www.facebook.com/VVani4U/videos/1884175785049258/
ರೂಪದರ್ಶಿ ಜೆಸ್ಸಿಕಾ ಲಾಲ್​ ಹಂತಕನಿಗೆ ಕೊನೆಗೂ ಸಿಕ್ಕಿತು ಬಿಡುಗಡೆ ಭಾಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
