ವಿಜಯಪುರ:‘ನಾನು ದಳದಿಂದಲೂ ಗೆದ್ದಿದ್ದೇನೆ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದಲೂ ಗೆದಿದ್ದೇನೆ. ಹಾಗೆ ಯತ್ನಾಳ ಕಾಂಗ್ರೆಸ್, ದಳದಿಂದ ಗೆದ್ದು ಬರಲಿ ನೋಡೋಣ. ಕೇವಲ ಬಿಜೆಪಿ, ಹಿಂದುತ್ವದ ಹೆಸರಿನ ಮೇಲೆ ಗೆದ್ದು ಬರಬೇಕಿದೆಯಾ? ನಾನು ಬೇಕಾದರೆ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ, ಸ್ವತಂತ್ರವಾಗಿ ಸ್ಪರ್ಧಿಸಲು ಅವರು ಸಿದ್ಧರಿದ್ದಾರಾ ಕೇಳಿ…’ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಸವಾಲೆಸೆದಿದ್ದಾರೆ.
ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆಂದು ಪರೋಕ್ಷವಾಗಿ ಶಾಸಕ ಶಿವಾನಂದ ಪಾಟೀಲ ಹಾಗೂ ಯಶವಂತರಾಯಗೌಡ ಪಾಟೀಲರ ಮೇಲೆ ವಾಗ್ದಾಳಿ ನಡೆಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಾನಂದ ಪಾಟೀಲ, ‘ನಾನಿಲ್ಲಿಯತನಕ ಅವರ ಉಸಾಬರಿ ಮಾಡಿಲ್ಲ. ಅವರು ಯಾವಾಗ ಏನು ಮಾತನಾಡಿದರೂ ನಾನು ಪ್ರತಿಕ್ರಿಯೆ ಕೊಟ್ಟಿಲ್ಲ. ಮೇಲೆ ಮೇಲೆ ಮಾತನಾಡೋದು ಅವರ ಘನತೆಗೆ ತಕ್ಕುದಲ್ಲ. ಅಷ್ಟು ನೇರವಾಗಿ ನನ್ನ ಮೇಲೆ ಆಕ್ರೋಶ ಇದ್ದರೆ ನಾನೂ ಬಂದು ವಿಜಯಪುರ ನಗರ ಕ್ಷೇತ್ರಕ್ಕೆ ನಿಲ್ಲುತ್ತೇನೆ. ಅವರು ಬೇಕಾದರೆ ಪಕ್ಷೇತರ ನಿಲ್ಲಲಿ, ನಾನೂ ಪಕ್ಷೇತರ ನಿಲ್ಲುತ್ತೇನೆ. ಯಾರು ಗೆಲ್ಲುತ್ತಾರೋ ಅವರು ರಾಜಕೀಯವಾಗಿ ಮುಂದುವರಿಸಲಿ’ ಎಂದು ಸವಾಲೆಸೆದರು.
‘ಅವರು ಸ್ವಯಂ ಪ್ರೇರಣೆಯಿಂದ ಮಾತನಾಡಲ್ಲ. ಯಾರೋ ಅವರನ್ನು ಪ್ರಚೋದಿಸುತ್ತಿದ್ದಾರೆ ಅನಿಸುತ್ತದೆ. ಅಷ್ಟಕ್ಕೂ ಅವರಿಗೆ ನಾನು ಬರೋದು ಹೋಗೋದರಿಂದ ಬಾಧಕ ಆಗುತ್ತಿತ್ತೆಂದರೆ ನಾನೂ ಸಿದ್ಧನಿದ್ದೇನೆ. ನಾನೇ ವಿಜಯಪುರಕ್ಕೆ ಬಂದು ನಿಲ್ಲುತ್ತೇನೆ. ಬಿಜೆಪಿಯಿಂದ, ಕಾಂಗ್ರೆಸ್‌ನಿಂದ ಯಾವ ಪಕ್ಷದಿಂದಲೂ ಸಿದ್ಧ. ಆವಾಗ ನಾನು ಗೆಲ್ಲುತ್ತೇನೋ, ಅವರು ಗೆಲ್ಲುತ್ತಾರೋ ಜನ ತೀರ್ಮಾನ ಮಾಡಿದ ಮೇಲೆ ಮಾತಾಡಬೇಕು’ ಎಂದರು.
ಇನ್ನು ಪಕ್ಷ ಬದಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ನಾನು ಬಿಜೆಪಿಗೆ ಹೋಗಬಾರದು, ಹೋಗಬೇಕು ಅಥವಾ ಕಾಂಗ್ರೆಸ್‌ನಲ್ಲಿ ಉಳಿಯಬೇಕು ಎಂಬುದು ನನ್ನ ತೀರ್ಮಾನ. ನಾನೆಂದೂ ಸೀಮಿತ ರಾಜಕಾರಣ ಮಾಡಿಲ್ಲ. ನನ್ನಿಂದ ಕಾಂಗ್ರೆಸ್‌ಗೆ ಲಾಭ ಇರಬಹುದು, ಕಾಂಗ್ರೆಸ್‌ನಿಂದ ನನಗೆ ಲಾಭ ಆಗಿರಬಹುದು, ಹಿಂದೆ ಬಿಜೆಪಿಗೆ ಇದ್ದಾಗ ಬಿಜೆಪಿಗೆ ನನ್ನಿಂದ ಲಾಭ ಆಗಿತ್ತು. ಇದೇ ಯತ್ನಾಳರನ್ನು ಎಂಪಿ ಮಾಡುವಾಗ ನಾನೇ ಇದ್ದೆನಲ್ಲವಾ? ಅದೆಲ್ಲ ಮರೆಯಬಾರದು ಮನುಷ್ಯ ಆಗಿರೋರು?’ ಎಂದರು.
ಇನ್ನು ಕ್ಷೇತ್ರ ತ್ಯಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆ ಸಿಕ್ಕಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಶಿವಾನಂದ ಪಾಟೀಲ, ‘ಸ್ಪಷ್ಟತೆ ಬೇಕಿಲ್ಲ. ನಾನೆಲ್ಲಿ ಇರಬೇಕೆಂಬುದು ನನಗೆ ಗೊತ್ತಿದೆ. ನಾನು ಯಾರಿಗೂ ಅಪ್ರೋಚ್ ಆಗಿಲ್ಲ. ನನಗೆ ಅವರೇ ಅಪ್ರೋಚ್ ಆಗಬಹುದು. ವ್ಯಕ್ತಿ ಮತ್ತು ಪಕ್ಷ ಕೂಡಿದಾಗ ಸ್ವಲ್ಪ ರಾಜಕೀಯದಲ್ಲಿ ಜೀವನ ಮಾಡಲು ಸಾಧ್ಯ, ನಾನು ಯಾವಾಗಲು ಕ್ಷೇತ್ರ ಬದಲು ಮಾಡುತ್ತಿರುತ್ತೇನೆ’ ಎಂದರು.
ಬ್ಲ್ಯಾಕ್​ಮೇಲ್​ ಚಟ:ಶಾಸಕ ಶಿವಾನಂದ ಪಾಟೀಲರಿಗೆ ಬ್ಲ್ಯಾಕ್​ಮೇಲ್​ ಮಾಡುವ ಚಟ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ಶಿವಾನಂದ ಪಾಟೀಲರ ಸವಾಲು ಎದುರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದ ಯತ್ನಾಳರು, ನಾನು ಬಿಜೆಪಿಯಿಂದ ಸ್ಪರ್ಧಿಸುತ್ತೇನಲ್ಲ. ಅವರೇನು ಹೇಳೋದು? ಅವರಿಗೆ ಬ್ಲ್ಯಾಕ್​ಮೇಲ್ ಮಾಡುವ ಚಟ ಐತಿ. ಎಂ.ಬಿ. ಪಾಟೀಲರಿಗೆ ಬ್ಲ್ಯಾಕ್​ಮೇಲ್​ ಮಾಡಿದಂತೆ ನನಗೆ ಮಾಡಲು ಆಗಲ್ಲ ಎಂದರು.
ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ

ಮತ್ತೆ ಹಿಜಾಬ್ ಸದ್ದು; ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದ್ದಕ್ಕೆ ಟಿ.ಸಿ. ಕೇಳಿದ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
