ಬೆಂಗಳೂರು:ಕೆಳಗೆ ಬಿದ್ದ ಶಾಸಕಿ ಸೌಮ್ಯರೆಡ್ಡಿಯನ್ನು ಕಾರ್ಯಕರ್ತರು ಆಕಸ್ಮಿಕವಾಗಿ ಕಾರ್ಯಕರ್ತರು ತುಳಿದ ಘಟನೆ ಬಿಬಿಎಂಪಿ ಕಚೇರಿ ಮುಂಭಾಗ ಸೋಮವಾರ ಸಂಭವಿಸಿದೆ.
ಬೆಂಗಳೂರು ನಾಗರಿಕರ ಮೇಲೆ ತೆರಿಗೆ ಹೊರೆಯನ್ನು ಖಂಡಿಸಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ನಗರದ ಪ್ರತಿಭಟನೆ ನಡೆಯಿತು. ಬೆಂಗಳೂರು ಕೇಂದ್ರ, ಬೆಂ. ದಕ್ಷಿಣ ಮತ್ತು ಬೆಂ. ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ಸೇರಿದಂತೆ ಮಾಜಿ ಸಚಿವ ರಾಮಲಿಂಗರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಮೇಯರ್ ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ಇದನ್ನೂ ಓದಿರಿಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ನಗರದ ಮೈಸೂರು ಬ್ಯಾಂಕ್​ ಸರ್ಕಲ್​ನಿಂದ ಬಿಬಿಎಂಪಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ಹೊರಟ ಕಾಂಗ್ರೆಸ್​ ಪಡೆ, ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತ್ತು. ಮುತ್ತಿಗೆ ಹಿನ್ನೆಲೆ ಬಿಬಿಎಂಪಿ ಕಚೇರಿಯ ಗೇಟ್ ಬಂದ್ ಮಾಡಲಾಗಿತ್ತು. ತದನಂತರ ಗೇಟ್ ತೆಗೆಯುತ್ತಿದ್ದಂತೆ ಕಾರ್ಯಕರ್ತರು ನಾ ಮುಂದು- ತಾ ಮುಂದು ಎಂಬಂತೆ ಒಳ ನುಗ್ಗಿದರು. ಈ ವೇಳೆ ಗೇಟ್ ಮುಂಭಾಗದಲ್ಲೇ ನಿಂತಿದ್ದ ಸೌಮ್ಯರೆಡ್ಡಿ ನಿಯಂತ್ರಣತಪ್ಪಿ ಕೆಳಗೆ ಬಿದ್ದರು.
ಶಾಸಕಿ ಕೆಳಗೆ ಬಿದ್ದಿರುರುವ ಬಗ್ಗೆ ಅರಿವಿಲ್ಲದ ಕೆಲ ಕಾರ್ಯಕರ್ತರು ಅವರನ್ನು ತುಳಿದುಕೊಂಡೇ ಹೋದರು. ಬಳಿಕ ಪಕ್ಕದಲ್ಲೇ ಇದ್ದ ಇತರರು ಶಾಸಕಿಯನ್ನ ಮೇಲಕ್ಕೆತ್ತಿದರು. ಕಾಂಗ್ರೆಸ್​ ಪ್ರತಿಭಟನೆ ಹಿನ್ನೆಲೆ ಹಡ್ಸನ್ ವೃತ್ತ, ಕಾರ್ಪೋರೇಷನ್ ಸರ್ಕಲ್​ನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿ ವಾಹನ ಸವಾರರು ಪರದಾಡಿದರು.
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಮೆಜೆಸ್ಟಿಕ್​ನಿಂದ ವಿಮಾನನಿಲ್ದಾಣಕ್ಕೆ ಕೇವಲ 10 ರೂ.ನಲ್ಲಿ ಪ್ರಯಾಣಿಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
