ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಡಿಪಿಐ ಸಂಘಟನೆ ತೋಡಿದ ಹಳ್ಳಕ್ಕೆ ಆರೋಪಿ ನವೀನ್​ ಬಿದ್ದನಾ ಎಂಬ ಅನುಮಾನ ಮೂಡತೊಡಗಿದೆ.
ಅಲ್ಪ ಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಎರಡು ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ಇದು ಎಸ್​ಡಿಪಿಐ ಮುಖಂಡರಲ್ಲಿ ಅಸಹನೆ ಮೂಡಿಸಿತ್ತು ಎನ್ನಲಾಗಿದೆ. ಹೀಗಾಗಿ ಶಾಸಕರ ರಾಜಕೀಯ ಏಳಿಗೆಗೆ ತಡೆಯೊಡ್ಡಲು ಎಸ್​ಡಿಪಿಐ ಯೋಜನೆ ರೂಪಿಸುತ್ತಿತ್ತು ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ:ಉದ್ವೇಗದಿಂದ ಬೊಗಳುತ್ತಾ ಸಾಗಿದ ಶ್ವಾನ ಹಿಂಬಾಲಿಸಿದ ರಕ್ಷಣಾಗಾರರಿಗೆ ಕಾದಿತ್ತು ಶಾಕ್​!
ಎಸ್​ಡಿಪಿಐ ಯೋಜನೆಗೆ ದಾಳವಾಗಿ ಸಿಕ್ಕಿದೆ ನವೀನ್ ಎಂದು ಹೇಳಲಾಗಿದೆ. ಅದಕ್ಕೆ ಕಾರಣ ನವೀನ್ ಫೇಸ್​ಬುಕ್ ಖಾತೆಯ ಫ್ರೆಂಡ್ ಲಿಸ್ಟ್​ನಲ್ಲಿ ಫೈರೋಜ್ ಪಾಷ ಹೆಸರಿದೆ. ನವೀನ್ ಈ ಹಿಂದೆ ಪಾದರಾಯನಪುರ ಗಲಭೆ ಹಾಗೂ ತಬ್ಲಿಘಿಗಳ ಪ್ರಕರಣಗಳನ್ನು ಟೀಕಿಸಿ ತನ್ನ ಎಫ್​ಬಿಯಲ್ಲಿ ಪೊಸ್ಟ್ ಮಾಡಿಕೊಂಡಿದ್ದ. ಇದನ್ನು ಗಮನಿಸಿದ್ದ ಫೈರೋಜ್ ಪಾಷ ನವೀನ್​ನನ್ನು ಪ್ರಚೋದಿಸುತ್ತಾ ಬಂದಿದ್ದನಂತೆ.
ಹೀಗೆ ನಿರಂತರವಾಗಿ ಪ್ರಚೋದಿಸುತ್ತಾ ಕೊನೆಗೆ ನವೀನ್​ಗೆ ಫೇಸ್​ಬುಕ್​ನಲ್ಲೇ ಖೆಡ್ಡಾ ತೋಡಿ ಫೈರೋಜ್​ ಪಾಷ ಗಲಭೆಗೆ ಕಾರಣವಾಗಿದ್ದಾನೆನ್ನಲಾಗಿದೆ.(ದಿಗ್ವಿಜಯ ನ್ಯೂಸ್​)
ಉದ್ಯಮಿ ಆನಂದ ಮಹೀಂದ್ರಾ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಆಚರಣೆಗೂ ಮೊದಲು ಈ ವಿಡಿಯೋ ನೋಡುತ್ತಾರಂತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 14 =
Remember me
