ಬೆಂಗಳೂರು:ಕರೊನಾ ಅತಿ ವೇಗದಲ್ಲಿ ಹಬ್ಬುತ್ತಿದೆ. ಪ್ರತಿನಿತ್ಯ ನೂರಾರು ಸೋಂಕಿತರಿಗೆ ಆಸ್ಪತ್ರೆಯ ಅವಶ್ಯಕತೆ ಕಾಣಿಸಿಕೊಳ್ಳುತ್ತಿದೆ. ಆದರೆ ಬೆಡ್ ಬ್ಲಾಕ್​ ದಂಧೆಯಿಂದಾಗಿ ಅನೇಕರಿಗೆ ಅಗತ್ಯ ಸಮಯದಲ್ಲಿ ಬೆಡ್​ ಸಿಗದೆ ಪ್ರಾಣ ಬಿಡುವಂತಾಗಿದೆ. ಬೇರೆ ಯಾರೋ ಅಲ್ಲ, ಕ್ಷೇತ್ರದ ಶಾಸಕರೇ ಕೇಳಿದರೂ ಬೆಡ್​ ಇಲ್ಲ ಎನ್ನುವ ಉತ್ತರ ಕೇಳಿಬರಲಾರಂಭಿಸಿದೆ. ಈ ಕುರಿತಾಗಿ ಶಾಸಕ ರವಿ ಸುಬ್ರಹ್ಮಣ್ಯ ಕೂಡ ಮಾತನಾಡಿದ್ದಾರೆ.
ನಾನು ಬಸವನಗುಡಿಯ ಶಾಸಕ. 2 ಲಕ್ಷ ಜನಸಂಖ್ಯೆ ಇರುವ ಕ್ಷೇತ್ರ ನನ್ನದು. ಅದಕ್ಕಾಗಿಯೇ ಒಂದು ದಿನಕ್ಕೆ 5 ಬೆಡ್​ ಮತ್ತು 2 ಗಂಟೆ ನನಗೆ ಕೊಡಿ ಎಂದು ಕೇಳಿದ್ದೇನೆ. ಆದರೆ ನನಗೆ ಈವರೆಗೂ ಒಂದೇ ಒಂದು ಬೆಡ್​ ಕೂಡ ಸಿಕ್ಕಿಲ್ಲ. ನಾನು ಶಾಸಕನಾಗಿ ಫೋನ್ ಮಾಡಿದ್ರೂ ಫೋನ್ ಎತ್ತುವುದಿಲ್ಲ. ಒಂದು ವೇಳೆ ಎತ್ತಿಬಿಟ್ಟರೆ ಬೆಡ್ ಇಲ್ಲ ಎನ್ನುವ ರೆಡಿಮೇಡ್ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದ್ದಾರೆ.
ಬೆಡ್​ ವ್ಯವಸ್ಥೆ ಮಾಡುತ್ತಿಲ್ಲ ಎಂದು ಜನಪ್ರತಿನಿಧಿಗಳಾದ ನಮಗೆ ಬೈಯುತ್ತಾರೆ. ಆದರೆ ಇಲ್ಲಿ ನಾವು ಏನೇ ಸರ್ಕಸ್​ ಮಾಡಿದರೂ ನಮಗೆ ಬೆಡ್​ ಸಿಗುತ್ತಿಲ್ಲ. ರಾಮಯ್ಯ ಆಸ್ಪತ್ರೆಯಲ್ಲಿ ರಾಮನಾಥ್ ಅವರ ಹೆಸರಲ್ಲಿ‌ 5 ಬಾರಿ ಬೆಡ್ ಬ್ಲಾಕ್ ಆಗುತ್ತೆ. ಅವರಿಗೆ ಬೇಕಿರೋ ವ್ಯಕ್ತಿಗಳಿಗೆ ಬೆಡ್ ಒದಗಿಸಲು ಈ ದಂಧೆ ಮಾಡುತ್ತಿದ್ದಾರೆ. ರೆಮಿಡಿಸಿವರ್ ಇಂಜೆಕ್ಷನ್ ಕೂಡ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ. 11,316 ಬೆಡ್​ ನನ್ನ ಕ್ಷೇತ್ರದಲ್ಲಿದೆ. ಅದರಲ್ಲಿ 9,690 ಬೆಡ್​ ಭರ್ತಿ ಆಗಿದೆ. ಇನ್ನುಳಿದ ಬೆಡ್​ನಲ್ಲಿ ಒಂದೇ ಒಂದು ಬೆಡ್​ ಕೂಡ ನನಗೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 5 =
Remember me
