ಬಾಗಲಕೋಟೆ:ಇಂದು ಕಾರ್ಯಕರ್ತರ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್​ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಪೇಂದ್ರ ಚಿತ್ರದ ಗೀತೆ ಏನಿಲ್ಲ ಏನಿಲ್ಲ…ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ….ಎಂದು ಹಾಡಿದರು. ಇದು ಮೊದಲಿಗೆ ನಗು ತರಿಸಿದರು, ಹಾಡಿದರ ಹಿಂದಿನ ಉದ್ದೇಶವೇನು ಎಂಬುದು ಸದ್ಯ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ:ಅನ್ಯ ರಾಜ್ಯದವರಿಂದ 2 ಕಡೆ ಮತದಾನ, ಪರಿಶೀಲನೆಗೆ ಕರ್ನಾಟಕ ಸಮತಾ ಪಕ್ಷ ಆಗ್ರಹ
ಚುನಾವಣೆ ಪ್ರಚಾರ ಸಭೆಯಲ್ಲಿ ಹಾಡು ಹೇಳಿದ ಬಾಗಲಕೋಟೆ ಶಾಸಕ ವಿಜಯಾನಂದ ಕಾಶಪ್ಪನವರ್​, ಇಳಕಲ್ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ವೈರಲ್ ಹಾಡನ್ನು ಹಾಡಿದ್ದಾರೆ. ಹುನಗುಂದ ಕ್ಷೇತ್ರದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಏನಿಲ್ಲ ಗೀತೆಯನ್ನು ಹಾಡಿದ್ದಾರೆ. ತಮ್ಮ ಪತ್ನಿ ವೀಣಾ ಕಾಶಪ್ಪನವರ್​ಗೆ ಕಾಂಗ್ರೆಸ್​ ಲೋಕಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಜನರಲ್ಲಿ ಇದ್ದ ಗೊಂದಲಕ್ಕೆ ಮಾತಿನ ಮೂಲಕ ಸ್ಪಷ್ಟನೆ ನೀಡಿದರು.
“ಕಾಂಗ್ರೆಸ್ ಪಕ್ಷ ಅಂದ್ರೆ ಕಾಶಪ್ಪನವರ ಕುಟುಂಬ. ಕಾಶಪ್ಪನವರ ಕುಟುಂಬ ಅಂದ್ರೆ ಕಾಂಗ್ರೆಸ್. ಇಡೀ ಜಿಲ್ಲೆಯಲ್ಲಿ ಈಗ ಬಹಳಷ್ಟು ಜನರು ಕಾತುರದಿಂದ ಏನಾಗುತ್ತೆ, ಮುಂದೇನು ಆಗಬಹುದು ಅಂತ ಕಾಯುತ್ತಿದ್ದಾರೆ. ಏನು ಆಗಲ್ಲ, ನಾನು ಹುಟ್ಟಿದ್ದು ಕಾಂಗ್ರೆಸ್​ನಲ್ಲೆ, ಸಾಯೋದು ಸಹ ಕಾಂಗ್ರೆಸ್ಸಿಗನಾಗೆ ಸಾಯ್ತೇನೆ” ಎಂದರು.
ಇದನ್ನೂ ಓದಿ:ತಣ್ಣೀರ ಸ್ನಾನ ಎಷ್ಟು ಪ್ರಯೋಜನಕಾರಿ? ಈ ಸಂಗತಿ ತಿಳಿದ್ರೆ, ಇನ್ಮುಂದೆ ಬಿಸಿ ನೀರೇ ಮುಟ್ಟಲ್ಲ ನೀವು!
“ಈಗ ಇಡೀ ಕ್ಷೇತ್ರದ ಜನರ ಕಣ್ಣು ನನ್ನ ಮೇಲಿದೆ. ಕಾರಣ ನನ್ನ ಹೆಂಡತಿಗೆ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ. ನಮಗಿಂತ ಪಕ್ಷವೇ ದೊಡ್ಡದು ಎಂದು ನಂಬಿರುವ ಕುಟುಂಬ ನಮ್ಮದು. ನನಗೆ ಸಿಟ್ಟು ಬರುತ್ತೆ, ಆದರೆ, ಮನಸ್ಸು ಆ ರೀತಿ ಇಲ್ಲ. ಯಾರಾದ್ರೂ ಬಂದು ವಿರೋಧ ಮಾಡು (ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿರುದ್ದ ಕೆಲಸ) ಅಂದ್ರೂ ನಾನು ವಿರೋಧ ಮಾಡಲ್ಲ” ಎಂದರು.
“ಇದು ನನ್ನ ತಾಯಿ ಸಾಕ್ಷಿಯಾಗಿ ಹೇಳುತ್ತಿರುವ ಮಾತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಮಾಡ್ತಿದ್ದೀನಿ.ಪತ್ನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷದ ವಿರುದ್ಧ ಕೆಲಸ ಮಾಡಲ್ಲ” ಎಂದು ತಮ್ಮ ಪಕ್ಷ ನಿಷ್ಠೆ ಸ್ಪಷ್ಟಪಡಿಸಿದರು.
ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + four =
Remember me
