ಬೆಂಗಳೂರು:ರಾಜ್ಯದಲ್ಲಿ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ಭುಗಿಲೆದ್ದಿದ್ದು, ಈ ಬಗ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಎಲ್ಲಾ ಧರ್ಮದ ಸ್ನೇಹಿತರಿದ್ದಾರೆ, ನಿನ್ನೆ ಇಂದ ನಮಗೆ ರಂಜಾನ್ ಉಪವಾಸ ಶುರುವಾಗಿದೆ. ನನ್ನ ಹಿಂದು ಸ್ನೇಹಿತರೊಬ್ಬರು ನಿನ್ನೆ ಹಬ್ಬದ ಊಟಕ್ಕೆ ಬನ್ನಿ ಎಂದು ಕರೆ ಮಾಡಿ ಹೇಳಿದ್ರು. ಹಲಾಲ್ ಕಟ್ ಮಾಡ್ಸಿ ರೆಡಿ ಮಾಡ್ಸಿದ್ದೀನಿ ಅಂತ ಹೇಳಿದ್ರು. ಕಾರಣ, ಹಲಾಲ್ ಮಾಡದೇ ಮುಸ್ಲಿಂ ಧರ್ಮದ ಜನ ಮಾಂಸ ತಿನ್ನುವುದಿಲ್ಲ. ಇದು ನನ್ನ ಭಾರತ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು.
ಅಲ್ಲದೇ ಜಾತಿ, ಧರ್ಮ ಎಂದು ಜಗಳವಾಡಿಕೊಂಡ್ರೆ, ರಾಜ್ಯಕ್ಕೆ ಬಂಡವಾಳ ಹೂಡಿಕೆ ಬರುವುದಿಲ್ಲ. ಇದನ್ನ ಸ್ವತ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಸಹ ಹೇಳಿದ್ದಾರೆ ಎಂದರು.
ಮನೆಗೆ ಕನ್ನ ಹಾಕಲು ಬಂದು ಬಾಲಕಿಯನ್ನು ಕದ್ಯೊಯ್ದ ಖದೀಮ!
Sign in to your account
Please enter an answer in digits:two × three =
Remember me
