ಚಿಕ್ಕಬಳ್ಳಾಪುರ:ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ತನಗೆ ದೈವ ಬಲ ಇರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ನಿದರ್ಶನಗಳನ್ನೂ ಪ್ರಸ್ತಾಪಿಸಿ, ಬೆನ್ನು ತಟ್ಟಿಕೊಂಡಿದ್ದಾರೆ.ನಾನು 9 ತಿಂಗಳಲ್ಲಿ ಟೀಕೆ ಮಾಡಿದ ಬಿಜೆಪಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಸಂಸದರಾದ ಮುನಿಸ್ವಾಮಿ, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಮಾಜಿ ಸಚಿವ ಈಶ್ವರಪ್ಪ ಇದಕ್ಕೆ ಉದಾಹರಣೆ. ನನಗೆ ದೈವ ಬಲ ಇದೆ ಎಂದು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾ ರಾಮಯ್ಯ ಪರ ಪ್ರಚಾರ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.ಬಿಜೆಪಿಯವರು ಹೇಗೆ ಅಷ್ಟು ಸ್ಥಾನ ಗೆಲ್ಲುತ್ತಾರೋ ಗೊತ್ತಿಲ್ಲ. ನಮ್ಮ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 23 ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದ್ದಾರೆ.ನಾನು ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಬಗ್ಗೆ ಮಾತನಾಡಬಾರದು ಎಂದುಕೊಂಡಿರುತ್ತೇನೆ. ನನ್ನ ಮೇಲೆ ಅವರು 22 ಪ್ರಕರಣಗಳನ್ನು ದಾಖಲಿಸಿದಾಗ ನಾನು ಹತ್ತು ತಿಂಗಳು ಅಜ್ಞಾತವಾಸದಲ್ಲಿದ್ದೆ. ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುಧಾಕರ್, ಚಿಕ್ಕಬಳ್ಳಾಪುರಕ್ಕೆ 185 ಕೋಟಿ ರೂ ಮೊತ್ತದ ಯೋಜನೆಗಳನ್ನು ತಂದಿರುವುದಾಗಿ ಹೇಳಿದ್ದಾರೆ. ಇವೆಲ್ಲವೂ ಸುಳ್ಳು. ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಯಾಗ್ನಾಸ್ಟಿಕ್ ಸೆಂಟರ್ ಗೆ ಕಾಂಗ್ರೆಸ್ ಸರ್ಕಾರ 8.5 ಕೋಟಿ ರೂ ನೀಡಿದೆ. ಕಂದವಾರ ಕೆರೆ ಪುನಶ್ಚೇತನಕ್ಕಾಗಿ 200 ಕೋಟಿ ರೂ ಹಣ ದೊರೆತಿದೆ ಎಂದರು.ತಾಖತ್ತಿದ್ದರೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸುವಂತೆ ಸುಧಾಕರ್ ಸವಾಲು ಹಾಕುತ್ತಾರೆ. ನಾನು ನಿನ್ನೆ ಮೊನ್ನೆ ಗೆದ್ದಿದ್ದೇನೆ. ಬಿಸ್ಲೆರಿ ನೀರು ಕುಡಿದ ನಿಮಗೆ, ಅಷ್ಟೊಂದು ತಾಖತ್ತಿದ್ದರೆ, ಕಾರ್ಪೋರೇಷನ್ ನೀರು ಕುಡಿದ ನನಗೆಷ್ಟು ತಾಖತ್ತಿರಬೇಕು? ಎಂದು ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 6 =
Remember me
