| ಮೃತ್ಯುಂಜಯ ಕಪಗಲ್ ಬೆಂಗಳೂರುಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗಾಗಿ ಶಾಸಕರ ಡಿಮಾಂಡ್ ಹೆಚ್ಚಿದ್ದು, ಆಪ್ತ ಸಹಾಯಕರನ್ನಾಗಿ ನಿಯೋಜಿಸುವಂತೆ ದುಂಬಾಲು ಬಿದ್ದಿದ್ದಾರೆ. ಈ ಮನವಿ ಪುರಸ್ಕಾರ ಅಥವಾ ಪೂರ್ಣವಾಗಿ ತಳ್ಳಿಹಾಕಲಾಗದೆ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ.
ರಾಜ್ಯ ಸರ್ಕಾರದ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿವೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯಾಪ್ತಿಗೆ ಬರುವ ಅಭಿವೃದ್ಧಿ ಇಲಾಖೆಗಳಲ್ಲಿ ಹುದ್ದೆಗಳ ಖಾಲಿ ಪ್ರಮಾಣ ಹೆಚ್ಚಿದೆ. ದೀರ್ಘಾವಧಿಯಿಂದ ಗ್ರಾ.ಪಂ. ಪಿಡಿಒ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿಲ್ಲ. ತತ್ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಪಿಡಿಒಗಳಿಗೆ ಎರಡಕ್ಕಿಂತ ಹೆಚ್ಚು ಗ್ರಾ.ಪಂ.ಗಳ ಪ್ರಭಾರವಹಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಈ ಸಂಖ್ಯೆ ನಾಲ್ಕಕ್ಕೂ ತಲುಪಿದೆ.
ಈ ನಡುವೆ ಮುಕ್ಕಾಲು ಭಾಗ ಗ್ರಾಮೀಣ ಪ್ರದೇಶವುಳ್ಳ ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಶಾಸಕರು, ಗ್ರಾಮೀಣ, ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ಪೈಕಿ ಬಹುಪಾಲು ಪ್ರತಿನಿಧಿಗಳು ಪಿಡಿಒಗಳನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಳ್ಳಲು ಬಯಸಿದ್ದಾರೆ.
ನಿಯೋಜನೆಗೆ ನಿರ್ಬಂಧ:ಪರಿಷತ್ ಹಾಗೂ ವಿಧಾನಸಭೆ ಸೇರಿ 50ಕ್ಕೂ ಹೆಚ್ಚು ಶಾಸಕರು ಸರ್ಕಾರಕ್ಕೆ ಪತ್ರ ಬರೆದು, ಆಪ್ತ ಸಹಾಯಕರನ್ನಾಗಿ ಪಿಡಿಒಗಳ ನೇಮಕಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ, ಸಿಬ್ಬಂದಿ ನಿಯೋಜನೆಗೆ ಅವಕಾಶ ನೀಡದಂತೆ ಇಲಾಖೆ ಉನ್ನತಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಕೆಲವರು ಇಲಾಖೆ ಹಂತದಲ್ಲಿ ನಿಯೋಜನೆಗೆ ಒತ್ತಡ ತಂದರೂ ಕಾರ್ಯರೂಪಕ್ಕೆ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸ್ಪೀಕರ್ ಗಮನಸೆಳೆದು, ಮನವಿ ಪೂರೈಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಸ್ತುಸ್ಥಿತಿ ಮನವರಿಕೆ:ಆಪ್ತ ಸಹಾಯಕರಾಗಿ ಪಿಡಿಒ ನಿಯೋಜನೆ ಬಯಸಿದ ಪತ್ರಗಳು ಇಲಾಖೆಗೆ ಬಂದಿರುವ ವಿಷಯ ತಿಳಿದ ಪ್ರಿಯಾಂಕ್ ಖರ್ಗೆ, ಗ್ರಾಪಂ ಹುದ್ದೆಗಳು ಅದರಲ್ಲೂ ಪಿಡಿಒ ಹುದ್ದೆಗಳ ವಸ್ತುಸ್ಥಿತಿ ಮನವರಿಕೆ ಮಾಡಿಕೊಂಡಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೂ ಭೇಟಿ ಮಾಡಿ ನಿವೇದಿಸಿದ್ದಲ್ಲದೆ, ಮನವಿ ಸಲ್ಲಿಸಿದ ಅನೇಕ ಶಾಸಕರೊಂದಿಗೆ ನೇರವಾಗಿ ರ್ಚಚಿಸಿ ಸಹಕಾರವನ್ನೂ ಕೋರಿದ್ದಾರೆ.
ಶಾಸಕರು ಕೋರಿದ್ದರಲ್ಲಿ ತಪ್ಪೇನಿಲ್ಲ. ಆದರೆ, ಕೆಲಸಗಳಿಗೆ ಅಡಚಣೆಯಾಗಲಿದ್ದು, ನರೇಗಾ ಸೇರಿ ಪ್ರಮುಖ ಅಭಿವೃದ್ಧಿ ಕೆಲಸಗಳು ಕುಂಠಿತವಾಗಲಿವೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸಗಳಾಗುತ್ತಿಲ್ಲವೆಂದು ಅಧಿವೇಶನದಲ್ಲಿ ಶಾಸಕರು ಪ್ರಶ್ನೆ ಎತ್ತುತ್ತಾರೆ ಎಂಬ ಇಕ್ಕಟ್ಟಿನ ಸ್ಥಿತಿಯನ್ನು ಸಿಎಂ ಬಳಿ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಯವಾಗಿ ತಿರಸ್ಕಾರ:ಪಿಡಿಒಗಳನ್ನು ಪಿಎಗಳನ್ನಾಗಿ ನೇಮಕ ಮಾಡಿಕೊಳ್ಳಲು ಬಯಸಿದವರ ಪೈಕಿ 8-10 ಶಾಸಕರ ಮನವಿಗಳನ್ನು ಸರ್ಕಾರ ನಯವಾಗಿಯೇ ತಿರಸ್ಕರಿಸಿದ್ದು, ಅದಕ್ಕೂ ಪ್ರಿಯಾಂಕ್ ಖರ್ಗೆ ಶಾಸಕರ ಮನವೊಲಿಸಿದ್ದಾರೆ. ಪಿಎಗಳನ್ನಾಗಿ ಬೇರೆ ಇಲಾಖೆಗಳ ಸಿಬ್ಬಂದಿ ನೇಮಿಸಿಕೊಳ್ಳಲು ಶಾಸಕರಿಗೆ ಅವಕಾಶವಿದೆ. ಈ ಹಿಂದೆ ಶಿಕ್ಷಣ, ಕಂದಾಯ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಗಳೇ ಪಿಎಗಳಾಗುತ್ತಿದ್ದರು. ಈಗಲೂ ಅನೇಕ ಸಚಿವರು ಹಾಗೂ ಶಾಸಕರು ಬೇರೆ ಇಲಾಖೆ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು, ಪಿಡಿಒಗಳನ್ನಾಗಿ ನೇಮಕಕ್ಕೆ ಸ್ಪಷ್ಟ ನೀತಿ ರೂಪಿಸಿ ಸಿಎಂ ಸೂಚಿಸಿದರೆ ಪಾಲನೆಗೆ ಸಿದ್ಧವೆಂದು ಮನವಿ ಮಾಡಿಕೊಂಡ ಶಾಸಕರಿಗೆ ಪ್ರಿಯಾಂಕ್ ನಿವೇದಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಶಾಸಕರ ಮನವಿ, ಗ್ರಾ.ಪಂ.ಗಳ ಪಿಡಿಒ ಕಾರ್ಯಭಾರದ ಬಗ್ಗೆ ಮುಖ್ಯಮಂತ್ರಿ ಜತೆಗೆ ರ್ಚಚಿಸಿರುವೆ. ಶಾಸಕರ ಆಪ್ತ ಸಹಾಯಕರನ್ನಾಗಿ ಪಿಡಿಒಗಳನ್ನು ನಿಯೋಜಿಸಬೇಕು ಇಲ್ಲವೇ ನಿಯೋಜಿಸಬಾರದು ಎಂಬ ನೀತಿಯಿಲ್ಲ, ಸಿಎಂ ನಿರ್ದೇಶನದಂತೆ ಮುಂದಿನ ಹೆಜ್ಜೆಯಿಡುವೆ.
| ಪ್ರಿಯಾಂಕ್ ಖರ್ಗೆ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ
2. ಅನ್ಯ ಇಲಾಖೆಗಳ ಸಿಬ್ಬಂದಿ ನಗರ-ಪಟ್ಟಣ ಕೇಂದ್ರಿತ, ಗ್ರಾಮೀಣ ಸಮಸ್ಯೆಗಳ ಬೇಗ ಗ್ರಹಿಕೆ ಕಷ್ಟ
3. ಹಳ್ಳಿಗಳ ಅಭಿವೃದ್ಧಿ ಉದ್ದೇಶಿತ ಕೇಂದ್ರ ಪುರಸ್ಕೃತ, ರಾಜ್ಯದ ಯೋಜನೆಗಳನ್ನು ಪಿಡಿಒಗಳು ಬಲ್ಲರು
4. ಅಹವಾಲು ಹೊತ್ತು ಬರುವ ಗ್ರಾಮೀಣ ಜನತೆಗೆ ಸ್ಪಂದನೆ, ತ್ವರಿತ ಪರಿಹಾರೋಪಾಯಕ್ಕೂ ಶಕ್ತರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
