ಚಿಕ್ಕಮಗಳೂರು:ತನ್ನ ನೆಚ್ಚಿನ ನಾಯಕ ಸಿಎಂ ಆಗಬೇಕು ಎಂದು ಚೌಡಮ್ಮ ದೇವಿಯಲ್ಲಿ ಸಂಕಲ್ಪ ಮಾಡಿದ್ದ ಶಾಸಕರೊಬ್ಬರು ಕುರಿ ಮತ್ತು ಕೋಳಿ ಬಲಿ ಕೊಟ್ಟಿದ್ದಾರೆಂದು ತಿಳಿದು ಬಂದಿದೆ.
ಬಿ.ಎಸ್​. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಮೂಡಿಗೆರೆ ತಾಲೂಕಿನ ಭೈರಾಪುರದ ಸಮೀಪದ ಉಳಿಯೊ ಮನೆ ಚೌಡಮ್ಮ ದೇವಿಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಹರಕೆ ಹೊತ್ತಿದ್ದರಂತೆ. ಇಷ್ಟಾರ್ಥ ಸಿದ್ಧಿಸಿದ ಒಂದು ವರ್ಷದ ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಕಾಡಿನ ನಡುವೆ ಇರುವ ದೇವಿ ಸನ್ನಿಧಿಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಶಾಸಕರು ಪೂಜೆ ನೆರವೇರಿಸಿದರು.
ಇದನ್ನೂ ಓದಿರಿಪ್ರೇಯಸಿಯನ್ನೇ ಕೊಂದ ಮಾಜಿ ಲವರ್​.. ಟ್ರೈಂಗಲ್​ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದ್ಹೇಗೆ?
ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿ ಒಂದು ವರ್ಷ ಪೂರೈಸಿದ್ದಾರೆ. ಈ ಖುಷಿಯಲ್ಲಿರುವ ಎಂ.ಪಿ. ಕುಮಾರಸ್ವಾಮಿ, ಬಿಎಸ್​ವೈ ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕು. ಅವರಿಗೆ ಮತ್ತಷ್ಟು ಯಶಸ್ಸು ಸಿಗಬೇಕು ಎಂದು ದೇವಿ ಮುಂದೆ ಕೋರಿದರು.
ಈ ವೇಳೆ ಶಾಸಕರು ಕುರಿ-ಕೋಳಿಯನ್ನು ಚೌಡಮ್ಮ ದೇವಿಗೆ ಒಪ್ಪಿಸಿದರು ಎನ್ನಲಾಗಿದ್ದು, ಪ್ರಾಣಿ ಬಲಿ ನಿಷೇಧವಿದ್ದರೂ ಶಾಸಕರು ಕೊಟ್ಟಿದ್ದಾರೆನ್ನಲಾದ ಹರಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿರಿVideo/ ದಾರೀಲಿ ಒಂಟಿಸಲಗ ಪ್ರತ್ಯಕ್ಷ, ಮಹಿಳೆ ಬಚಾವ್​ ಆಗಿದ್ದೇ ರೋಚಕ!
ಇಷ್ಟಾರ್ಥ ಸಿದ್ಧಿಸಲಿ ಎಂದು ಸಾಮಾನ್ಯವಾಗಿ ಎಲ್ಲರೂ ದೇವರ ಮೊರೆ ಹೋಗುವುದು ಸಹಜ. ಇದು ರಾಜಕೀಯ ಕ್ಷೇತ್ರವನ್ನೂ ಹೊರತಾಗಿಲ್ಲ. ತನ್ನ ನೆಚ್ಚಿನ ನಾಯಕ ಗೆಲುವು ಸಾಧಿಸಿದರೆ ಮುಡಿ ಕೊಡುವ, ಪಾದಯಾತ್ರೆ, ತೆಂಗಿನಕಾಯಿ ಹೊಡೆಯುವ, ಅನ್ನದಾನ.. ಹೋಮ.. ಹೀಗೆ ವಿವಿಧ ಹರಕೆಗಳನ್ನು ಆಯಾ ಪಕ್ಷದ ಕಾರ್ಯಕರ್ತರು ಇಲ್ಲವೇ ಅಭಿಮಾನಿಗಳು ಮಾಡಿಕೊಳ್ಳುತ್ತಾರೆ. ಇಲ್ಲಿ ಶಾಸಕರೇ ಖುದ್ದು  ಹರಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 12 =
Remember me
