ಬೆಂಗಳೂರು:ವಿಧಾನ ಪರಿಷತ್​ನಲ್ಲಿ ನಿನ್ನೆ ನಡೆದ ಗದ್ದಲದ ನಡುವೆ ಸದಸ್ಯ ಆಯನೂರು ಮಂಜುನಾಥ್ ಅವರ ಶರ್ಟ್​ ಬಟನ್ ಕಿತ್ತು ಹೋಗಿತ್ತಂತೆ. ಬಿಗುವಾಗಿದ್ದ ಪ್ರಸಂಗದ ಕಾರಣ ಬಿಗುವಿನ ವಾತಾವರಣ ತಿಳಿಗೊಳಿಸಲು ಮತ್ತು ಮುಜುಗರ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದನ್ನು ಆಯನೂರು ಮಂಜುನಾಥ್ ಅವರು ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ.
ಸವದಿ ಕಚೇರಿಯಲ್ಲಿ ಊಟ
ವಿಧಾನ ಪರಿಷತ್​ಗೆ ಬಂದಿದ್ದ ಬಿಜೆಪಿ ಸದಸ್ಯರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಚೇರಿಯಲ್ಲಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇವತ್ತು ನಾನ್​ವೆಜ್ ಊಟ ಹಾಕಿಸಬೇಕಿತ್ತು ಎಂದು ಕೆಲ ಸದಸ್ಯರು ಗೇಲಿ ಮಾಡಿದ್ದೂ ನಡೆಯಿತು.
ಅಂಗಿಯ ಒಂದು ಗುಂಡಿ ಕಿತ್ತುಕೊಂಡು ಹೋದ ಕಾರಣ ಮುಜುಗರವಾಗಿತ್ತು. ಸುತ್ತಮುತ್ತ ಪಕ್ಷದ ಇತರೆ ಸದಸ್ಯರಿದ್ದರು. ಮುಜುಗರದಿಂದ ಪಾರಾಗುವುದಕ್ಕಾಗಿ ಅವರ ಬಳಿ, ‘ಸಚಿವ ಮಾಧುಸ್ವಾಮಿ’ ಅವರು ಶರ್ಟ್ ಗುಂಡಿ ಇದ್ದರೂ ಹಾಕುವುದಿಲ್ಲ. ನನ್ನ ಪರಿಸ್ಥಿತಿ ಅದಲ್ಲವಲ್ಲ’ ಎಂದು ಹೇಳಿಕೊಂಡು ನನಗೆ ನಾನೇ ಸಮಾಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೆ ಎಂದು ಆಯನೂರು ಹೇಳಿಕೊಂಡರು.
ಇದನ್ನೂ ಓದಿ:ಗೋಹತ್ಯೆ ನಿಷೇಧಿಸಿದ್ರೆ ಸಮಾಜದಲ್ಲಿ ಅಶಾಂತಿ, ಜನರ ಬಾಳು ಅಲ್ಲೋಲ-ಕಲ್ಲೋಲ: ಎಚ್​.ಡಿ.ದೇವೇಗೌಡ
ರಾತ್ರಿಯಿಡಿ ಎಲ್ಲವನ್ನು ಓದಿ ನಿಯಮಾವಳಿ ಪ್ರಕಾರವೇ ನಮ್ಮ ಹಕ್ಕು ಮಂಡನೆ ಮಾಡುವ ಸುಧೀರ್ಘ ಪತ್ರವನ್ನು ಸಿದ್ಧಪಡಿಸಲಾಗಿತ್ತು. ಸಭಾಪತಿ ತೆಗೆದುಕೊಳ್ಳಬಹುದಾದ ತೀರ್ಮಾನದ ಅಂದಾಜಿನಲ್ಲಿಯೇ ಸಭಾ ನಡವಳಿಕೆ ಮತ್ತು ಸದನ ಕಲಾಪ ನಿಯಾಮವಳಿಗಳ ಅಧ್ಯಯನ ಮಾಡಿದ್ದು, ಅದರ ಆಧಾರದ ಮೇಲೆ ಸದನದಲ್ಲಿ ವಾದ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೆ ಅವಕಾಶವೇ ಸಿಗದೆ ಹೋಗಿದ್ದು ನೋವಿನ ಸಂಗತಿ. ಅವಿಶ್ವಾಸ ನಿರ್ಣಯ ಬಗ್ಗೆ ಸಭಾಪತಿ ಅವರು ಗೌರವಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ, ಅವರ ಹಿಂದೆ ಕಾಂಗ್ರೆಸ್ ರಾಜಕೀಯ ಏನಿದೆ ಎನ್ನುವುದು ಜಗಜ್ಜಾಹೀರಾಯಿತು ಎಂದು ಆಯನೂರು ವಿಷಾದಿಸಿದರು..
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಇದೇನು ಬನಾನ ರಿಪಬ್ಲಿಕಾ? – ಬಿಜೆಪಿ ಶಾಸಕರು ಗೂಂಡಾಗಳು | ಸಿದ್ದರಾಮಯ್ಯ ಟೀಕಾಪ್ರಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
