
ಬೆಂಗಳೂರು:ವಿಧಾನ ಪರಿಷತ್ ಟಿಕೆಟ್ ಗಳಿಸಲು ಬಿಜೆಪಿಯಲ್ಲಿ ಭರ್ಜರಿ ಪೈಪೋಟಿಯೇ ನಡೆಯುತ್ತಿದೆ. ಈ ಬಾರಿ ಯಾವ ನಟಿ ಮಣಿಯರಿಗೆ ಟಿಕೆಟ್ ಎನ್ನುವ ಬಗ್ಗೆಯೂ ಕುತೂಹಲಕರ ಚರ್ಚೆ ನಡೆದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೃಪೆಯಿಂದ ಹಿಂದೆ ಒಮ್ಮೆ ತಾರಾ ಅನೂರಾಧ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದಾದ ಬಳಿಕ ಮತ್ತೆ ಅವರಿಗೆ ಎರಡನೇ ಬಾರಿಗೆ ಆ ಅವಕಾಶ ಒದಗಿಬರಲಿಲ್ಲ. ಮೇಲ್ಮನೆಯಲ್ಲಿ ತಮ್ಮ ಮಾತಿನ ಲಹರಿಯಿಂದ ಗಮನ ಸೆಳೆದಿದ್ದ ತಾರಾ ಅವರಿಗೆ ಮತ್ತೊಮ್ಮೆ ಅವಕಾಶ ಕೊಡುವುದು ಸೂಕ್ತ ಎನ್ನುವ ಮಾತುಗಳು ಪಕ್ಷದೊಳಗೆ ಚರ್ಚೆಯಲ್ಲಿಯೇ ಇದೆ. ಆದರೆ ಅದಕ್ಕೆ ಇನ್ನೂ ಅಂತಿಮ ರೂಪ ಬಂದಿಲ್ಲ.ನಾನಾ ಕಾರಣಕ್ಕಾಗಿ ಪ್ರಮುಖ ಹುದ್ದೆಗಳ ಅವಕಾಶಗಳಿಂದ ವಂಚಿತರಾದ ಶ್ರುತಿ ಅವರು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದರೆ. ಇನ್ನೊಂದೆಡೆ ಮಾಳವಿಕಾ ಅವಿನಾಶ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷರು ಬದಲಾಗಿ ವಿಜಯೇಂದ್ರ ಚುಕ್ಕಾಣಿ ಹಿಡಿದ ಮೇಲೆ ಮಾಳವಿಕಾ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಯನ್ನು ನೀಡಲಾಗಿದೆ. ಪಕ್ಷದಲ್ಲಿ ಹಿರಿತನ ಪರಿಗಣಿಸುವುದಾದರೆ, ಶ್ರುತಿ ಮೊದಲಿಗರಾಗುತ್ತಾರೆ. ವರಿಷ್ಠರು ಯಾವ ರೀತಿಯಲ್ಲಿ ಚಿಂತನೆ ಮಾಡುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.ಮತ್ತೊಂದೆಡೆ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಸಂದರ್ಭದಲ್ಲಿ ತನ್ನ ಸಂಸದ ಸ್ಥಾನವನ್ನು ಬಿಟ್ಟುಕೊಟ್ಟಿರುವ ಸುಮಲತಾ ಅವರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯಗಳು ಅವರ ಆಪ್ತ ವಲಯದಲ್ಲಿದೆ. ಆದರೆ, ಇದಕ್ಕೂ ವರಿಷ್ಠರು ಇನ್ನೂ ಯಾವ ರೀತಿಯಲ್ಲೂ ಗ್ರೀನ್ ಸಿಗ್ನಲ್ ತೋರಿಸಿಲ್ಲ.ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಟಿ ಮಣಿಯರಲ್ಲಿ ಯಾರು ಬಿಜೆಪಿ ಟಿಕೆಟ್ ಗಿಟ್ಟಿಸುವರು ಎನ್ನುವ ಚರ್ಚೆ ಬಿಸಿ ಏರಿದೆ. ಪೈಪೋಟಿ ತೀವ್ರಗೊಂಡಲ್ಲಿ ಈ ಬಾರಿ ನಟಿ ಮಣಿಯರಿಗೆ ಟಿಕೆಟ್ ಸಿಗುವ ಸಾದ್ಯತೆಗಳು ಇಲ್ಲದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
