
ಬೆಂಗಳೂರು:ವಿಧಾನ ಪರಿಷತ್ ಚುನಾವಣೆ ಕಾವೇರಿದಂತೆ ಮತದಾರರ ಸೆಳೆಯಲು ಗುಂಡು ತುಂಡು ಪಾರ್ಟಿಗಳು ಭರ್ಜರಿಯಾಗಿಯೇ ನಡೆಯುತ್ತಿವೆ.ಪಕ್ಷದ ಚಿನ್ನೆಯ ಮೇಲೆ ಈ ಚುನಾವಣೆಗಳು ನಡೆಯುವುದಿಲ್ಲ. ಆದರೂ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದರಿಂದ ಚುನಾವಣೆ ಕಣ ರಂಗೇರಲು ಕಾರಣವಾಗಿದೆ.ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್, ಮತ್ತೊಂದೆಡೆ ಮೈತ್ರಿ ಸಂಬಂಧ ಬೆಸೆದುಕೊಂಡಿರುವ ಜೆಡಿಎಸ್ ಮತ್ತು ಬಿಜೆಪಿ ಕೂಡ ಕಸರತ್ತು ನಡೆಸುತ್ತಿವೆ.ಅಭ್ಯರ್ಥಿಗಳ ಪರವಾಗಿ ಅವರುಗಳ ಕಾರ್ಯಕರ್ತರುಗಳ ತೋಟದಲ್ಲಿ ಗುಂಡು ತುಂಡುಗಳ ಪಾರ್ಟಿ ನಡೆಯುತ್ತಲೇ ಇದೆ. ವಿಶೇಷವಾಗಿ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಾರ್ಟಿ ಜೋರಾಗಿದೆ.ಅಭ್ಯರ್ಥಿಗಳು ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ನಡೆಸುತ್ತಿರುವ ಕಾರ್ಯಕರ್ತರುಗಳ ಸಭೆಯ ಬಳಿಕವೂ ಊಟೋಪಚಾರ, ರಾತ್ರಿ ಆಗುತ್ತಿದ್ದಂತೆ ಗುಂಡಿನ ಪಾರ್ಟಿಗಳು ನಡೆಯುವುದು ಸಾಮಾನ್ಯವಾಗಿದೆ. ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಪಾರ್ಟಿಗಳು ನಡೆದಿರುವುದು ವಿಶೇಷ.ಇನ್ನು ಮತದಾರರ ಮನ ಸೆಳೆಯಲು ಪ್ರತ್ಯೇಕವಾಗಿ ಅಭ್ಯರ್ಥಿಗಳು ಗ್‌ಟಿಗಳನ್ನು ನೀಡುತ್ತಿರುವುದು ಒಂದೆಡೆಯಾದರೆ, ಇನ್ನು ಕೆಲವು ಕಡೆಯಲ್ಲಿ ಇಂತಿಷ್ಟು ಹಣವನ್ನು ಕವರ್‌ನಲ್ಲಿ ಹಾಕಿ ಅದರ ಜೊತೆಗೆ ದೇವರ ಪೋಟೋ ಇಟ್ಟು ಕೊಡುತ್ತಿರುವುದು ಕಂಡು ಬಂದಿದೆ. ಕೆಲ ಜಿಲ್ಲೆಗಳಲ್ಲಿ ಮತದಾರರ ಬೇಡಿಕೆ ಅನುಸಾರವಾಗಿ ಗ್‌ಟಿಗಳನ್ನು ನೀಡಲಾಗಿದೆ. ಗ್‌ಟಿ ಕೂಪನ್‌ಗಳನ್ನು ಹಂಚುವ ಕೆಲಸ ನಡೆಯುತ್ತಿದೆ.ಹೊಸದಾಗಿ ಮತದಾರರನ್ನು ನೋಂದಣಿ ಮಾಡಿಸಿದ ಮುಂಚೂಣಿಯಲ್ಲಿರುವ ಕೆಲ ಪ್ರಮುಖರನ್ನು ಕರೆದು ಮಾತನಾಡಿಸಿ ಅವರಿಗೂ ಹೆಚ್ಚಿನ ಆಮೀಷಗಳನ್ನು ನೀಡಲಾಗುತ್ತಿದೆ. ಚುನಾವಣೆ ದಿನ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಭರವಸೆ ಜೊತೆಗೆ ಆಮೀಷವೂ ಹೆಚ್ಚಾಗುತ್ತಿರುವುದು ವಿಶೇಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
