ಚಿತ್ರದುರ್ಗ : ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಅ.28ರಂದು ಬೆಳಗ್ಗೆ 8ರಿಂದ 5 ರವರೆಗೆ ಜಿಲ್ಲೆಯ 6 ತಾಲೂಕುಗಳಲ್ಲಿ ಸ್ಥಾಪಿಸಿರುವ 10 ಹೆಚ್ಚುವರಿ ಸಹಿತ 32 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ,ಬಿಜೆಪಿಯ ಚಿದಾನಂದ ಎಂ.ಗೌಡ,ಕಾಂಗ್ರೆಸ್ಸಿನ ರಮೇಶ್ ಬಾಬು,ಪಕ್ಷೇತರ ಡಾ.ಕೆ.ಎಂ.ಸುರೇಶ್,ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
13,681ಪುರುಷ ಹಾಗೂ 7342 ಮಹಿಳಾ ಹಾಗೂ ಇತರೆ 1 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ 21,021 ಮತದಾರರು ಇದ್ದಾರೆ. ಮೊಳಕಾಲ್ಮೂರು-3,ಚಳ್ಳಕೆರೆ -6,ಚಿತ್ರದುರ್ಗ-8,ಹಿರಿಯೂರು -6,ಹೊಸದುರ್ಗ-5 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 4 ಮತಗಟ್ಟೆಗಳಿವೆ.
ಮತಗಟ್ಟೆ ಸಿಬ್ಬಂದಿಗೆ ಪಿಪಿಇ ಕಿಟ್ಎಲ್ಲ ಮತಗಟ್ಟೆಗಳಿಗೂ ಪಿಪಿ ಕಿಟ್ ಒದಗಿಸಲಾಗಿದ್ದು,ತಾಪಮಾನ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬರುವಂಥವರು,ಕೋವಿಡ್ ಲಕ್ಷಣಗಳಿರುವಂಥ ಮತದಾರರಿಗೆ,ಮತದಾನದ ಕೊನೆಯ ಅವಧಿಯಲ್ಲಿ ಮತ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಟೋಕನ್ ಕೊಡಲಾಗುತ್ತಿದ್ದು,ಈ ಅವಧಿಯ ಕರ್ತವ್ಯ ನಿರ್ವಹಣೆಗಾಗಿ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ.ಒಂದು ಮತಗಟ್ಟೆಗೆ ಕನಿಷ್ಠ 20 ನೇರಳೆ ಬಣ್ಣದ ಪೆನ್‌ಗಳನ್ನು ಒದಗಿಸಲಾಗುತ್ತದೆ ಹಾಗೂ ಪ್ರತಿ ಮತದಾರರಿಗೆ ಒಂದು ಹ್ಯಾಂಡ್ ಗ್ಲಾಸ್ ಕೊಡಲಾಗುತ್ತದೆ. ಒಬ್ಬರ ಮತದಾನ ಬಳಿಕ ಪೆನ್‌ನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಈಗಾಗಲೇ ಮತಗಟ್ಟೆಗಳಲ್ಲಿ ಡಿಸ್‌ಇನ್‌ಫೆಕ್ಷನ್ ಕೆಲಸ ನಡೆದಿದೆ.
ಮತದಾರರ ಸಾಮಾಜಿಕ ಅಂತರಕ್ಕಾಗಿ ಗುರುತಿನೊಂದಿಗೆ,ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಸುಗಮ ಮತದಾನಕ್ಕಾಗಿ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಅಗತ್ಯ ಬಂದೋಬಸ್ತ್ ಕೈಗೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ,ಡಿಸಿ ಕವಿತಾ ಎಸ್.ಮನ್ನೀಕೇರಿ ತಿಳಿಸಿದ್ದಾರೆ.
ತಾಲೂಕು ಮತಗಟ್ಟೆಗಳ ಸಂಖ್ಯೆ- ಮತದಾರರ ಸಂಖ್ಯೆಚಳ್ಳಕೆರೆ -6-4313ಮೊಳಕಾಲ್ಮೂರು-3-1451ಚಿತ್ರದುರ್ಗ-8-6275ಹಿರಿಯೂರು -6-4487ಹೊಸದುರ್ಗ-5-2472

ಹೊಳಲ್ಕೆರೆ-4 -2023.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + 16 =
Remember me
