
ಬೆಂಗಳೂರು:ಮುಂಬರುವ ಶಿಕ್ಷಕರು ಮತ್ತು ಪದವಿಧರರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಾನ ಹೊಂದಾಣಿಕೆ ಮಾತುಕತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿಯೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡುವುದು ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಚುನಾವಣೆ ನಡೆಯಲಿರುವ 6 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 2 ಸ್ಥಾನಗಳನ್ನು ನೀಡಬೇಕು ಎಂದು ತನ್ನ ಬೇಡಿಕೆ ಮುಂದಿಟ್ಟಿರುವುದು ಸಮಸ್ಯೆಯಾಗಿದೆ.ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ, ದಕ್ಷಿಣ ಪಶ್ಚಿಮ ಕ್ಷೇತ್ರದಲ್ಲಿ ಬೋಜೇಗೌಡ ಅವರು ಜೆಡಿಎಸ್ ಪ್ರತಿನಿಧಿಸಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಆದ್ದರಿಂದ ಈ ಎರಡೂ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎನ್ನುವುದು ಜೆಡಿಎಸ್ ಪ್ರಸ್ತಾವನೆ.ಮಾತುಕತೆ ವೇಳೆ ಈ ಎರಡು ಕ್ಷೇತ್ರಗಳಲ್ಲಿ ಬೋಜೇಗೌಡರು ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವುದಕ್ಕೆ ಜೆಡಿಎಸ್ ಚಿಂತಿಸುತ್ತಿದೆ. ಆದರೆ, ಈ ಕ್ಷೇತ್ರ ಬಿಟ್ಟುಕೊಟ್ಟರೆ, ಬೆಂಗಳೂರು ಪದವಿಧರರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿ ಎನ್ನುವುದು ದಳಪತಿಗಳ ಬೇಡಿಕೆ. ಯಾಕೆಂದರೆ ಈಗಾಗಲೇ ಬೆಂಗಳೂರು ಪದವಿಧರರ ಕ್ಷೇತ್ರಕ್ಕೆ ರಂಗನಾಥ್ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ೋಷಿಸಿದ್ದು, ಅವರನ್ನು ಬದಲಿಸಲು ದಳಪತಿಗಳು ಒಪ್ಪುತ್ತಿಲ್ಲ.ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಪುಟ್ಟಣ್ಣ ಬಿಜೆಪಿಗೆ ಸೇರಿ ಗೆದ್ದು ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ್ದಾರೆ. ಈಗಾಗಲೇ ಅಲ್ಲಿ ಪುಟ್ಟಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂದು ೋಷಿಸಿರುವ ಕಾರಣ, ಅಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಕೊರತೆ ಇದೆ. ಹಾಗಾಗಿಯೇ ಇನ್ನುಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲು ಒಲವು ತೋರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.ಎನ್‌ಡಿಎ ಭಾಗವಾಗಿ ಜೆಡಿಎಸ್ ಕೂಡ ಸೇರ್ಪಡೆಯಾಗಿರುವ ಕಾರಣ, ಅವರ ಜೊತೆಗೆ ಮಾತುಕತೆ ನಡೆಸಿ ಹೊಂದಾಣಿಕೆಯಲ್ಲಿಯೇ ಸ್ಪರ್ಧೆ ಮಾಡುವುದು ಒಳ್ಳೆಯದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಹೊಂದಾಣಿಕೆ ರಾಜಕಾರಣ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವೊ? ಇಲ್ಲವೋ? ಎನ್ನುವುದನ್ನು ವರಿಷ್ಠರು ಖಚಿತಪಡಿಸಿಲ್ಲ. ಆದ್ದರಿಂದ ಪಂಚರಾಜ್ಯ ಚುನಾವಣೆ ಮುಗಿಯುವ ತನಕ ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ ಎನ್ನುವುದು ಪಕ್ಷದ ಮುಖಂಡರ ಅಭಿಮತ.
ಕಾಂಗ್ರೆಸ್6 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನಲ್ಲಿ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅವರುಗಳು ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ದಕ್ಷೀಣ ಶಿಕ್ಷಕರ ಕ್ಷೇತ್ರ ಮಾತ್ರ ತಾಂತ್ರಿಕ ಕಾರಣಕ್ಕೆ ಬಾಕಿಯಾಗಿದೆ. ಜೆಡಿಎಸ್‌ನ ಮರಿತಿಬ್ಬೇಗೌಡರು ರಾಜೀನಾಮೆ ನೀಡಿದ ಬಳಿಕ ಅವರಿಗೆ ಕಾಂಗ್ರೆಸ್ ಟಿಕೆಟ್ ೋಷಣೆ ಆಗುವುದು ಖಾತ್ರಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 8 =
Remember me
