ತುಮಕೂರು:ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ. ಜಿಲ್ಲೆಯಲ್ಲಿ 29415 ಮತದಾರರು ಹಕ್ಕು ಹೊಂದಿದ್ದು 64 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಂಜೆ 5 ರವರೆಗೆ ಮತದಾನಕ್ಕೆ ಅವಕಾಶ ಇರಲಿದೆ. ಜಿಲ್ಲಾಕೇಂದ್ರದಲ್ಲಿ 10 ಹಾಗೂ 6 ತುಮಕೂರು ತಾಲೂಕು ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ.
15 ಅಭ್ಯರ್ಥಿಗಳ ಭವಿಷ್ಯ:ಜೆಡಿಎಸ್ ನ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯ ಚಿದಾನಂದಗೌಡ ಹಾಗೂ ಕಾಂಗ್ರೆಸ್ ನ ರಮೇಶ್ ಬಾಬು ಸೇರಿದಂತೆ 15 ಮಂದಿ ಕಣದಲ್ಲಿದ್ದಾರೆ.  ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಒಟ್ಟು 5 ಜಿಲ್ಲೆ ವ್ಯಾಪ್ತಿಯನ್ನು ಕ್ಷೇತ್ರ ಹೊಂದಿದೆ. ಒಟ್ಟು 1 ಲಕ್ಷ 1 ಸಾವಿರ ಮತದಾರರು ಹಕ್ಕು ಹೊಂದಿದ್ದಾರೆ.
ಬಿಜೆಪಿಗೆ ಬಂಡಾಯ ಕಾಟ:ಆಡಳಿತರೂಢ ಬಿಜೆಪಿಗೆ ಬಂಡಾಯ ಕಾಟವಿದೆ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಹಾಗೂ ಹಾಲನೂರು ಎಸ್ ಲೇಪಾಕ್ಷ ಬಂಡಾಯ ಅಭ್ಯರ್ಥಿಗಳಾಗಿದ್ದು ಬಿಜೆಪಿ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ, ಚುನಾವಣೆ ಹೆಚ್ಚು ಪೈಪೋಟಿಯಿಂದ‌ ಕೂಡಿರಲಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ – ಶುರುವಾಗಿದೆ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 17 =
Remember me
