ಮೈಸೂರು:ಎಂಎಲ್​ಸಿ ಎಚ್​.ವಿಶ್ವನಾಥ್​ ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್​ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಸಾ.ರಾ. ಮಹೇಶ್​ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಿಗೆ 1001 ರೂ. ಕಾಣಿಕೆ ಸಲ್ಲಿಸಿ, ಈಡುಗಾಯಿ ಹೊಡೆದು ಹರಕೆ ತೀರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರ ಬಳಿ ಆಣೆ ಪ್ರಮಾಣ ನಡೆದು ಸರಿಯಾಗಿ ಒಂದು ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ಇದು ವಿಶ್ವನಾಥ್​ಗೆ ದೇವರುಕೊಟ್ಟ ಶಿಕ್ಷೆ. ಚಾಮುಂಡಿ ತಾಯಿ ನ್ಯಾಯ ದೇವತೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ ಎಂದರು.
ಅನರ್ಹಗೊಂಡಿದ್ದ 16 ಜನರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ವಿಶ್ವನಾಥ್​ ಒಬ್ಬರಿಗೆ ಮಾತ್ರ ಸರಿಯಾದ ಶಿಕ್ಷೆ ಆಗಿದೆ. ಇದರ ಅರ್ಥ ದೇವರ ಮುಂದೆ ಅವರು ಹೇಗೆ ನಡೆದುಕೊಂಡರು ಎಂಬುದು ಗೊತ್ತಾಗುತ್ತದೆ ಎಂದು ಸಾ.ರಾ.ಮಹೇಶ್​ ಹೇಳಿದರು.
ವಿಶ್ವನಾಥ್ ಅತಂತ್ರಸ್ಥಿತಿಗೆ ಇನ್ನೊಬ್ಬ ಸಚಿವಾಕಾಂಕ್ಷಿ ಕಾರಣ: ಶಾಸಕ ಸಾ.ರಾ. ಮಹೇಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
