ಬೆಂಗಳೂರು: ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಸರ್ಕಾರದಿಂದ ಯಾವುದೇ ಶಿಫಾರಸು ಹೋಗದಿದ್ದರೂ ತಮಗೆ ಬಂದ ದೂರಿನ ಬಗ್ಗೆ ಪರಿಶೀಲನೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ರಾಜಭವನದಿಂದ ಸೂಚನೆ ಹೋಗಿದೆ.
ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಮಾಜಿ ಸಚಿವ ಎಂ.ಆರ್. ಸೀತಾರಾಮ್, ಮನ್ಸೂರ್ ಅಲಿ ಖಾನ್ ಹಾಗೂ ಸುಧಾಮದಾಸ್ ಹೆಸರು ಹರಿದಾಡಿದ್ದವು. ಆದರೆ ಮುಖ್ಯಮಂತ್ರಿ ಅವರ ಸಚಿವಾಲಯ ಯಾವುದೇ ಹೆಸರನ್ನು ಇದುವರೆಗೂ ರಾಜಭವನಕ್ಕೆ ಶಿಫಾರಸು ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮಗಳಲ್ಲಿ ಬಂದ ಸುದ್ದಿಗಳನ್ನು ಗಮನಿಸಿದ ಕರ್ನಾಟಕ ರಾಜ್ಯ ಮುಸ್ಲಿಂ ಜನಜಾಗೃತಿ ವೇದಿಕೆ ಹಾಗೂ ನ್ಯಾಯಮಿತ್ರದ ಕಾರ್ಯದರ್ಶಿ ರಾಘವಾಚಾರ್ ಶಾಸಿ ಎಂಬುವವರು ರಾಜ್ಯಪಾಲರಿಗೆ ದೂರು ಸಲ್ಲಿಸಿ, ನೇಮಕಕ್ಕೆ ಶಿಫಾರಸು ಮಾಡಿದ ವ್ಯಕ್ತಿಗಳ ಹಿನ್ನೆಲೆ ಪರಿಶೀಲಿಸಿ ಕ್ರಮವಹಿಸುವಂತೆ ಮನವಿ ಮಾಡಿದ್ದರು.
ರಾಜ್ಯಪಾಲರ ಸಚಿವಾಲಯ ಈ ಮನವಿಗಳನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ನೇಮಕದ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಮುಖ್ಯ ಕಾರ್ಯದರ್ಶಿ ವಿವರಣೆ ನೀಡುವ ಸಾಧ್ಯತೆಗಳಿವೆ.
ರಾಜಭವನಕ್ಕೆ ಬರುವ ಎಲ್ಲ ಮನವಿಗಳನ್ನು ಸರ್ಕಾರಕ್ಕೆ ಕಳುಹಿಸುವ ಮಾದರಿಯಲ್ಲಿ ಈ ಪತ್ರಗಳನ್ನು ಕಳುಹಿಸಲಾಗಿದೆ. ಸರ್ಕಾರದಿಂದ ಯಾವುದೇ ಶಿಫಾರಸು ರಾಜಭವನಕ್ಕೆ ಬಂದಿಲ್ಲವೆಂದು ರಾಜಭವನದ ಮೂಲಗಳು ಖಚಿತಪಡಿಸಿವೆ.
ಮತ್ತದೇ ಸಮಸ್ಯೆ
ಈ ಹಿಂದೆ ವಿ.ಸೋಮಣ್ಣ ಅವರ ಹೆಸರು ಸಹ ಇದೇ ರೀತಿ ಆಕ್ಷೇಪಕ್ಕೆ ಒಳಗಾಗಿತ್ತು. ನಾಮ ನಿರ್ದೇಶನಕ್ಕೆ ಶಿಫಾರಸು ವೇಳೆ ನಿಗದಿತ ವಿಭಾಗ, ಪೂರಕ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು.ಈ ಕಾರಣಕ್ಕೆ ಶಿಕ್ಷಣ ಕ್ಷೇತ್ರದಿಂದ ಶಿಫಾರಸು ಮಾಡಲಾಗಿದ್ದ ವಿ.ಸೋಮಣ್ಣ ಅವರ ಹೆಸರನ್ನು ಅಂದಿನ ರಾಜ್ಯಪಾಲರು ತಿರಸ್ಕರಿಸಿದ್ದರು. ನಂತರ ಸಾಮಾಜಿಕ ಕ್ಷೇತ್ರದ ಮೂಲಕ ವಿ.ಸೋಮಣ್ಣ ಅವರನ್ನು ನೇಮಕ ಮಾಡಲಾಯಿತು.
ಆದರೆ ಸದ್ಯಕ್ಕೆ ದೂರಿನಲ್ಲಿ ಪ್ರಸ್ತಾಪಿಸಿರುವ ಮೂವರ ನಾಮ ನಿರ್ದೇಶನಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದರ ಬಗ್ಗೆ ಖಚಿತವಾಗಿಲ್ಲ. ಒಂದು ವೇಳೆ ಇವೇ ಹೆಸರುಗಳನ್ನು ಸರ್ಕಾರ ಶಿಫಾರಸು ಮಾಡಿದರೆ ಮತ್ತದೇ ಆಡಳಿತಾತ್ಮಕ ಸಂಕಷ್ಟ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
