ಬೆಂಗಳೂರು:ಶಾಸಕರನ್ನು ಬಹುತೇಕ ಸಚಿವರು ನಿರ್ಲಕ್ಷಿಸುವುದು ಮುಂದುವರಿದಿದೆ, ಕ್ಷೇತ್ರಕ್ಕೆ ಅನುದಾನವಿಲ್ಲದೇ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ, ಸರ್ಕಾರದಲ್ಲಿ ಶಾಸಕರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ, ಸಚಿವರು ಮಾತ್ರವೇ ಕೆಲಸ ಮಾಡುತ್ತಿರುವವರು ಎಂಬಂತೆ ಬಿಂಬಿಸಿಕೊಳ್ಳುತ್ತಿ ದ್ದಾರೆ, ನಾವು ಸಚಿವರಾಗಬೇಕು ಅವಕಾಶ ಮಾಡಿಕೊಡಿ. ಮುಂದಿನ ಬಜೆಟ್ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬೆನ್ನ ಹಿಂದೆಯೇ ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಆರಂಭಿಸಿದ ವಿಭಾಗವಾರು ಶಾಸಕರ ಸಭೆಯಲ್ಲಿ ಕೇಳಿ ಬಂದ ಆಕ್ರೋಶದ ನುಡಿಗಳಿವು. ಬಹುತೇಕ ಶಾಸಕರು ತಮ್ಮ ಅಸಮಾಧಾನವನ್ನು ಸಚಿವರ ವಿರುದ್ಧ ತಿರುಗಿಸಿದ್ದರು.
ತಲೆ ಎತ್ತಿ ತಿರುಗದ ಸ್ಥಿತಿ:ನಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿ ತಿರುಗಾಡುವಂತಿಲ್ಲ. ಅನುದಾನ ಈಗ ಬರಲಿದೆ, ಆಗ ಬರುತ್ತದೆ ಎಂದು ಸರ್ಕಾರ ಬಂದಾಗಿನಿಂದಲೂ ಸುಳ್ಳು ಹೇಳಿಕೊಂಡು ತಿರುಗಾಡುವಂತಾಗಿದೆ. ಇಷ್ಟು ದಿನ ಕರೊನಾ ಎಂದು ಸಬೂಬು ಹೇಳುತ್ತಾ ಬಂದಿದ್ದೆವು. ಇನ್ನು ಮುಂದೆ ಯಾವ ನೆಪವನ್ನೂ ಹೇಳುವಂತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ನಾವು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಹೇಗೆ? ಮುಂದಿನ ಚುನಾವಣೆಗೆ ಸಿದ್ಧರಾಗುವುದು ಹೇಗೆ? ಎಂದು ಪ್ರಶ್ನಿಸಿದರು. ಕೂಡಲೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲೇ ಬೇಕು. ಶಾಸಕರು ಸರ್ಕಾರದ ಭಾಗವೇ ಆಗಿರುವುದರಿಂದ ಆಗಿಂದಾಗ್ಗೆ ಶಾಸಕರ ಸಭೆಗಳನ್ನು ನಡೆಸಿದರೆ ಅನುಕೂಲ ಕನಿಷ್ಠ 3 ತಿಂಗಳಿಗೆ ಒಮ್ಮೆಯಾದರೂ ಸಭೆ ನಡೆಸಿ ಎನ್ನುವ ಸಲಹೆಯನ್ನು ನೀಡಲಾಗಿದೆ.
ವರ್ಗಾವಣೆ ಬಗ್ಗೆ ಚರ್ಚೆ
ಅಧಿಕಾರಿಗಳ ವರ್ಗಾವಣೆಯ ಬಗ್ಗೆಯೂ ಸಭೆಯಲ್ಲಿ ಬಿಸಿ ಚರ್ಚೆ ನಡೆದಿದೆ. ಶಾಸಕರ ಮಾತಿಗೆ ಕಿಮ್ಮತ್ತು ನೀಡುವ ಅಧಿಕಾರಿಗಳು ಬೇಕು ಎನ್ನುವ ಅಹವಾಲನ್ನು ಶಾಸಕರು, ಸಿಎಂ ಮುಂದಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕೆಲ ಜಿಲ್ಲೆಗಳಲ್ಲಿ ಕೆಲ ಶಾಸಕರು ವರ್ಗಾವಣೆ ಮಾಡಿಸಿಕೊಂಡು ಹೋಗ್ತಾರೆ. ಇನ್ನು ಕೆಲ ಶಾಸಕರು ರದ್ದು ಮಾಡಿ ಎಂದು ಒತ್ತಾಯಿಸುತ್ತಾರೆ. ನೀವೆಲ್ಲ ಒಟ್ಟಾಗಿ, ಯಾವ ಅಧಿಕಾರಿಗಳು ಬೇಕು ಎನ್ನುವ ಪಟ್ಟಿಯನ್ನು ತಂದು ಕೊಡಿ. ಆ ಪ್ರಕಾರವೇ ಮಾಡಲು ಅನುಕೂಲವಾಗುತ್ತದೆ ಎಂದು ಸಮಾಧಾನಿಸಿದ್ದಾರೆ.
| ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ನನ್ನಿಂದಲೇ ಎನ್ನುವ ಸಚಿವರು
ಕೆಲ ಸಚಿವರು ಅದರಲ್ಲೂ ವಲಸೆ ಬಂದವರು ನಮ್ಮಿಂದಲೇ ಸರ್ಕಾರ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮುಲು ಆರೋಗ್ಯ ಇಲಾಖೆಯಲ್ಲಿ ವಿಫಲರಾದರು ಎಂಬಂತೆ ಬಿಂಬಿಸಿದಾಗ ಪಕ್ಷದ ಯಾರೊಬ್ಬರು ಅವರ ನೆರವಿಗೆ ನಿಲ್ಲಲಿಲ್ಲ ಏಕೆ ಎಂದು ಅನೇಕ ಶಾಸಕರು ಅದರಲ್ಲೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರು ಜಿಲ್ಲೆಗಳಿಗೆ ಬಂದಾಗ ಮಾಹಿತಿ ನೀಡುವುದಿಲ್ಲ, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದರೂ ಶಾಸಕರಿಗೆ ಆಹ್ವಾನವೇ ಇರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನಮಗೂ ಆಸೆ ಇದೆ
ಸಚಿವರಾಗುವ ಆಸೆ ನಮಗೂ ಇದೆ. ಎಲ್ಲ ಶಾಸಕರು ನಿಮ್ಮ ಬಳಿ ಬಂದು ಕೇಳುವುದಕ್ಕೆ ಆಗುವುದಿಲ್ಲ. ಅವಕಾಶವಿದ್ದ ಸಂದರ್ಭದಲ್ಲಿ ನಮ್ಮಗಳ ಹೆಸರನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಕೊಡಬೇಕು. ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳಿಗೂ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
