ದಾವಣಗೆರೆ:ಮೊಬೈಲ್​ ಸ್ಫೋಟ ಎಂದರೆ ಅದು ಭೀಕರ. ಮೊಬೈಲ್​ ಸಿಡಿಯುವಾಗ ಬಿಸಿಗೆ ಅದರಲ್ಲಿರುವ ಅನೇಕ ಧಾತುಗಳು ಕರಗಿ ಶರೀರ ಪ್ರವೇಶಿಸುತ್ತವೆ. ಸಣ್ಣ ಗಾತ್ರದ ಇವು ರಕ್ತ ಸೇರಿ ವಿಷವಾದರೆ ಅದು ಇನ್ನೊಂದು ವ್ಯಥೆ. ಇಂತಹದೇ ಘಟನೆ ಜರ್ಮನಿಯಲ್ಲಿ ನಡೆದಿದೆ. ಅಲ್ಲಿ ಬಲಿಯಾಗಿದ್ದು ಮಾತ್ರ ದಾವಣಗೆರೆಯ ಸರಸ್ವತಿ ನಗರದ ಯುವಕ.
ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಾವಣಗೆರೆ ಮೂಲದ ವಿದ್ಯಾರ್ಥಿಯೊಬ್ಬ ಮೊಬೈಲ್ ಸ್ಫೋಟಗೊಂಡ ಪರಿಣಾಮ, ಸಾವಿಗೀಡಾದ ಘಟನೆ ನಡೆದಿದೆ. ಜರ್ಮನಿಯ ಚಿಮ್ಮಟ್ ವಿಶ್ವವಿದ್ಯಾಲಯದಲ್ಲಿ ಸಂತೋಷ್ (30) ಹೆಸರಿನ ಯುವಕ ಎಂಬಾತ ವ್ಯಾಸಂಗ ಮಾಡುತ್ತಿದ್ದ. ಈತ ಮೊಬೈಲ್ ಸ್ಫೋಟಗೊಂಡ ಪರಿಣಾಮ ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ.
ಮೃತ ವಿದ್ಯಾರ್ಥಿ ಸಂತೋಷ್, ದಾವಣಗೆರೆಯ ಸರಸ್ವತಿ ನಗರದ ನಿವಾಸಿಗಳಾದ ಶಿಕ್ಷಕ ದಂಪತಿ ರೇವಣ್ಣ ಸಿದ್ದಪ್ಪ ಹಾಗೂ ಇಂದ್ರಮ್ಮ ದಂಪತಿಗಳ ಪುತ್ರ. ಸಂತೋಷ್ 2017ರಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿ ಜರ್ಮನಿಗೆ ತೆರಳಿದ್ದನು. ಇಲ್ಲಿವಯವರೆಗೂ ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದುದಾಗಿ ಹೇಳಲಾಗುತ್ತಿದೆ. ಇವರುನ.30ರಂದು ರೂಂನಲ್ಲಿ ಶಾರ್ಟ್​ ಸರ್ಕಿಟ್​ ಜೊತೆಗೆ ಮೊಬೈಲ್​ ಬ್ಲಾಸ್ಟ್​ ಆಗಿದ್ದರಿಂದ ಮೃತಪಟ್ಟಿದ್ದರು. ಮೃತಪಟ್ಟ 16ನೇ ದಿನಕ್ಕೆ ಮೃತದೇಹ ಭಾರತಕ್ಕೆ ರವಾನೆ ಆಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಇದೀಗ ಸಂತೋಷ್​ ಸ್ವಗ್ರಮ ಪುಣಬಘಟ್ಟದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ರೇವಣ್ಈಣ ಸಿದ್ಗದಪ್ಪ ದಂಪತಿ 5 ವರ್ಷಗಳ ಹಿಂದೆ ತಮ್ಮ ಮತ್ತೊಬ್ಬ ಮಗನನ್ನು ಅವಘಡದಲ್ಲಿ ಕಳೆದುಕೊಂಡಿದ್ದರು. ಈಗ ಇಬ್ಬರು ಮಕ್ಕಳನ್ನೂ ಕಳೆದುಕೊಂಡಿರುವ ದಂಪತಿ ಅನಾಥವಾಗಿದ್ದಾರೆ. ಮೃತ ಸಂತೋಷ್​ ತನ್ನ ತಂದೆ, ತಾಯಿ, ಕುಟುಂಬದವರು ಹಾಗೂ ನೆರೆಹೊರೆಯವರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
