ಬೆಂಗಳೂರು:ಮಹಿಳೆಯೊಬ್ಬರ ಮೊಬೈಲ್​ ನಂಬರ್​ ಹ್ಯಾಕ್​ ಮಾಡಿ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಹಿಸಿರುವ ಪ್ರಸಂಗ ನಗರದಲ್ಲಿಂದು ವರದಿಯಾಗಿದ್ದು, ಹ್ಯಾಕರ್ಸ್ ಹಾವಳಿಯಿಂದ ಬೇಸತ್ತು ಮಹಿಳೆ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಬಸವನಗುಡಿ ನಿವಾಸಿ 36 ವರ್ಷದ ವಿವಾಹಿತ ಮಹಿಳೆ ಹಾಗೂ ಅವರ ಸ್ನೇಹಿತರು ಸೇರಿ ಒಂದು ವಾಟ್ಸ್​ಆ್ಯಪ್​ ಗ್ರೂಪ್ ಕ್ರಿಯೇಟ್ ಮಾಡಿದ್ದರು. ಆ ಗ್ರೂಪ್​ನಲ್ಲಿ ಸಂತ್ರಸ್ತ ಮಹಿಳೆಯೂ ಕೂಡ ಅಡ್ಮಿನ್ ಆಗಿದ್ದರು. ಯಾರೋ ಅಪರಿಚಿತರು ಕರೆ ಮಾಡಿ ನಿಮಗೆ ಒಂದು ಲಿಂಕ್ ಕಳುಹಿಸಿದ್ದೇವೆ. ಅದನ್ನ ಓಪನ್ ಮಾಡಿ ನೋಡಿ ಎಂದು ಕಾಲ್ ಕಟ್ ಮಾಡಿದ್ದಾರೆ.
ಇದನ್ನೂ ಓದಿ:ದಿಶಾ ಸತ್ತ ಆ ರಾತ್ರಿ ನಿಜಕ್ಕೂ ನಡೆದಿದ್ದೇನು? ಕ್ಲೋಸ್​ ಫ್ರೆಂಡ್​ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಇದು!
ಹಿಂದು-ಮುಂದು ಯೋಚಿಸದೇ ಮಹಿಳೆ ಲಿಂಕ್ ಓಪನ್ ಮಾಡಿದ್ದಂತೆಯೇ ನಂಬರ್ ಹ್ಯಾಕ್ ಆಗಿದೆ. ಬಳಿಕ ಗ್ರೂಪ್​ನಲ್ಲಿರೋ ಎಲ್ಲ ನಂಬರ್​ಗೆ ಕೆಲ ಅಶ್ಲೀಲ ಫೋಟೋ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆ ನಂಬರ್​ನಿಂದ ಅಶ್ಲೀಲ ವಿಡಿಯೋಗಳನ್ನೂ ಕಳುಹಿಸಿದ್ದಾರೆ.
ಇದಾದ ಬಳಿಕ ಮಹಿಳೆಯ ನಂಬರ್​ನಿಂದ ಸ್ನೇಹಿತರಿಗೆ ಪರ್ಸನಲ್ ಮೆಸೇಜ್ ಮಾಡಿ ನಿಮ್ಮ ಹಾಟ್ ಫೋಟೋ ಕಳುಹಿಸಿ, ಒಂದೊಂದು ಫೋಟೋಗೆ ಇಂತಿಷ್ಟು ಹಣ ಕೊಡುತ್ತೇನೆ. ನೀವು ಆರಾಮಾಗಿ ಜೀವನ ನಡೆಸಬಹುದು ಎಂದು ಮೆಸೇಜ್ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಕ್​ಗೆ ಒಳಗಾದ ಮಹಿಳೆ, ಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ನಗರದ ದಕ್ಷಿಣ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಬೈಕ್​ನಲ್ಲಿ ಜಾಲಿರೈಡ್​: ಬಂಧಿಸಿ ವಿಚಾರಿಸಿದ ಪೊಲೀಸರ ಮುಂದೆ ಖದೀಮರ ಅಸಲಿಯತ್ತು ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + nine =
Remember me
